ಬದುಕನ್ನು ಪ್ರೀತಿಸುತ್ತಿದ್ದ 'ಯುವರತ್ನ' ಪುನೀತ್ ರಾಜ್ ಕುಮಾರ್ 

ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ವ್ಯಕ್ತಿತ್ವದಿಂದಲೂ ಜನಮೆಚ್ಚುಗೆ ಗಳಿಸಿದವರು. ದೇಹದ ಸದೃಢತೆಗೆ ಪ್ರತಿನಿತ್ಯ ಜಿಮ್ ಗೆ ಹೋಗಿ ವ್ಯಾಯಾಮ ಮಾಡುತ್ತಿದ್ದರು. ಕೇವಲ ತಾವು ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನವರೂ ಆರೋಗ್ಯವಾಗಿರಲು ಸ್ಪೂರ್ತಿ ತುಂಬುತ್ತಿದ್ದರು. 
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
Updated on

ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ವ್ಯಕ್ತಿತ್ವದಿಂದಲೂ ಜನಮೆಚ್ಚುಗೆ ಗಳಿಸಿದವರು. ದೇಹದ ಸದೃಢತೆಗೆ ಪ್ರತಿನಿತ್ಯ ಜಿಮ್ ಗೆ ಹೋಗಿ ವ್ಯಾಯಾಮ ಮಾಡುತ್ತಿದ್ದರು. ಕೇವಲ ತಾವು ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನವರೂ ಆರೋಗ್ಯವಾಗಿರಲು ಸ್ಪೂರ್ತಿ ತುಂಬುತ್ತಿದ್ದರು. 

ಸ್ನೇಹಿತರ ಜೊತೆ ಸೈಕ್ಲಿಂಗ್ ಮಾಡುತ್ತಿದ್ದರು. ಅವರ ವ್ಯಾಯಾಮ ಮಾಡುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ವೈರಲ್ ಆಗಿವೆ. ಯುವಪೀಳಿಗೆಗೆ ಮಾದರಿಯಾಗಿದ್ದವರು. ಯುವಜನತೆ, ಚಿಕ್ಕಮಕ್ಕಳು ಪುನೀತ್ ಅವರನ್ನು ಪ್ರೀತಿಸುತ್ತಿದ್ದರು. ಅಭಿಮಾನಿಗಳು ತೋರಿಸುತ್ತಿದ್ದ ಪ್ರೀತಿಗೆ ತಮ್ಮ ತಂದೆಯಂತೆ ಅಭಿಮಾನಿಗಳೇ ದೇವರು ಎನ್ನುತ್ತಿದ್ದರು. 

ಪ್ರವಾಸಿಪ್ರಿಯ ಪುನೀತ್: ಪುನೀತ್ ರಾಜ್ ಕುಮಾರ್ ಅವರಿಗೆ ಕುಟುಂಬಸ್ಥರೊಂದಿಗೆ ಪ್ರವಾಸ ಹೋಗುವುದೆಂದರೆ ಬಹಳ ಅಚ್ಚುಮೆಚ್ಚು. ವರ್ಷದಲ್ಲಿ ಒಂದಷ್ಟು ದಿನ ಕುಟುಂಬದವರೊಂದಿಗೆ ಪ್ರವಾಸಕ್ಕೆ ಹೋಗಲು ಇಷ್ಟಪಡುತ್ತಿದ್ದರು. ಅಲ್ಲಿಂದ ಹಿಂತಿರುಗುವಾಗ ನೆನಪಿಗಾಗಿ ಸಾಕಷ್ಟು ಫೋಟೋಗಳೊಂದಿಗೆ ಬರುತ್ತಿದ್ದರು. ಕ್ಯಾಮರಾವನ್ನು ಅವರು ತೆರೆಯ ಮುಂದೆ ಮತ್ತು ತೆರೆಯ ಹಿಂದೆ ಕೂಡ ಇಷ್ಟಪಡುತ್ತಿದ್ದರು. ಕೆಲಸವನ್ನು ಕೂಡ ಅಷ್ಟೇ ಪ್ರೀತಿಸುತ್ತಿದ್ದರು. ಕೆಲಸದ ಮಧ್ಯೆ ವೈಯಕ್ತಿಕ ಜೀವನಕ್ಕೂ ಸಮಯ ಹೊಂದಿಸಿಕೊಳ್ಳುತ್ತಿದ್ದರು. ಕುಟುಂಬದವರ ಜೊತೆ ಸಮಯ ಕಳೆಯುವುದು, ಇಷ್ಟಪಟ್ಟ ಆಹಾರ ಸೇವಿಸುವುದು, ಇಷ್ಟಪಟ್ಟ ಜಾಗಗಳಿಗೆ ಹೋಗುವುದು ಹೀಗೆ ಬದುಕನ್ನು ಅನುಭವಿಸುತ್ತಿದ್ದರು, ಪ್ರೀತಿಸುತ್ತಿದ್ದರು. 

ಪುನೀತ್ ರಾಜ್ ಕುಮಾರ್ ಅವರು ಭಾನುವಾರ ಯಾರಾದರೂ ಮಾಧ್ಯಮದವರು, ಚಿತ್ರರಂಗದವರು, ಅಭಿಮಾನಿಗಳು ಕರೆ ಮಾಡಿದ್ದರೆ ಪ್ರಮುಖ ಕರೆಗಳು ಬಿಟ್ಟರೆ ಬೇರೆಯದ್ದನ್ನು ಸ್ವೀಕರಿಸುತ್ತಿರಲಿಲ್ಲವಂತೆ. ಅಂದು ಪತ್ನಿ-ಮಕ್ಕಳಿಗೆ ಸಮಯ ನೀಡುವ ದಿನ ಎಂದು ಹೇಳುತ್ತಿದ್ದರಂತೆ. ಅದೇ ರೀತಿ ಕಾರುಪ್ರಿಯ, ಅವರ ಬಳಿ ಸಾಕಷ್ಟು ಕಾರುಗಳಿವೆ. 

ತಮ್ಮ ಸೋದರ-ಸೋದರಿಯರ ಮಕ್ಕಳ ಮೇಲೆ ಕೂಡ ಪುನೀತ್ ಅವರಿಗೆ ಬಹಳ ಪ್ರೀತಿಯಿತ್ತು. ಅವರಿಗೆ ಸಹ ಪುನೀತ್ ಮಾಮ ಅಂದರೆ ಬಹಳ ಇಷ್ಟ. ಚಿತ್ರರಂಗ ಮತ್ತು ಅಭಿಮಾನಿಗಳು ಪುನೀತ್ ಅವರಲ್ಲಿ ಅವರ ತಂದೆ ಡಾ ರಾಜ್ ಕುಮಾರ್ ಅವರನ್ನು ಕಾಣುತ್ತಿದ್ದರು. ಖ್ಯಾತಿ ಮತ್ತು ಅದೃಷ್ಟವನ್ನು ಗಳಿಸಿದ್ದ ಪುನೀತ್ ಅವರು ಎಂದಿಗೂ ತಮ್ಮ ಸವಲತ್ತನ್ನು ದುರುಪಯೋಗಪಡಿಸಿಕೊಂಡವರಲ್ಲ. 

ತಮ್ಮ ತಂದೆಯ ಶ್ರೇಷ್ಠತೆಗೆ ಅಥವಾ ಅವರ ಜೊತೆ ಹೋಲಿಕೆ ಮಾಡುವುದನ್ನು ಅವರು ಎಂದಿಗೂ ಒಪ್ಪಿಕೊಳ್ಳುತ್ತಿರಲಿಲ್ಲ. ನಾನು ನನ್ನ ತಂದೆಯಂತೆ ಎಂದು ಹೇಳಿದರೆ ಸುಳ್ಳಾಗುತ್ತದೆ ಎನ್ನುತ್ತಿದ್ದ ಪುನೀತ್ ಅವರು ನೃತ್ಯದಲ್ಲಿ ತಮ್ಮನ್ನು ತಾವೇ ಹುರಿಗೊಳಿಸಿಕೊಂಡಿದ್ದರು. 
46 ವರ್ಷದ ಚಿಕ್ಕ ವಯಸ್ಸಿನಲ್ಲಿ ತೀರಿಹೋದ ಪುನೀತ್ ಅವರಿಗೆ ಇನ್ನಷ್ಟು ಬದುಕು ಇತ್ತು. ಇನ್ನಷ್ಟು ಕನಸುಗಳಿದ್ದವು. ಅವುಗಳಲ್ಲೊಂದು ತಮ್ಮ ಸೋದರರಾದ ಶಿವಣ್ಣ ಮತ್ತು ರಾಘವೇಂದ್ರ ಅವರ ಜೊತೆ ಸಿನಿಮಾ ಮಾಡುವುದು. ಸೋದರರಿಗೆ ಚಿತ್ರ ನಿರ್ದೇಶಿಸುವ ಕನಸು ಕೂಡ ಇತ್ತು. 

ನನ್ನ ಮುಖದಲ್ಲಿ ಮುಗ್ಧತೆ ಕಾಣಿಸುವವರೆಗೆ, ಯುವಕನಂತೆ ಕಾಣುವವರೆಗೆ ನಾನು ಹೀರೋ ಆಗಿರುತ್ತೇನೆ, ಆಮೇಲೆ ನಟನಾಗುತ್ತೇನೆ ಎಂದು ಪುನೀತ್ ಹೇಳುತ್ತಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಿನಿಮಾ ವರದಿಗಾರ್ತಿ ಎ ಶಾರದಾ ವರದಿ ಬರೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com