'ಅಲ್ಲಿ ಕೂತಿರುವಾಗ ಅವರ ಮಕ್ಕಳ ಬಗ್ಗೆ ಯೋಚನೆಯಾಯಿತು, ರಾಯಲ್ ಆಗಿ ಹುಟ್ಟಿ ಬೆಳೆದು ಜೀವಿಸಿದ ಪುನೀತ್ ರಾಯಲ್ ಆಗಿಯೇ ಹೋದರು': ಕಿಚ್ಚ ಸುದೀಪ್ 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ಸಾವಿನಿಂದ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಕರುನಾಡು ಶಾಕ್ ಗೊಳಗಾಗಿದೆ. ಅವರ ಅಂತ್ಯಕ್ಕೆ ಕಂಬನಿಮಿಡಿದವರು ಅದೆಷ್ಟೋ ಮಂದಿ. ತೀವ್ರ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. 
ಕಿಚ್ಚ ಸುದೀಪ್-ಪುನೀತ್ ರಾಜ್ ಕುಮಾರ್(ಸಂಗ್ರಹ ಚಿತ್ರ)
ಕಿಚ್ಚ ಸುದೀಪ್-ಪುನೀತ್ ರಾಜ್ ಕುಮಾರ್(ಸಂಗ್ರಹ ಚಿತ್ರ)
Updated on

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ಸಾವಿನಿಂದ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಕರುನಾಡು ಶಾಕ್ ಗೊಳಗಾಗಿದೆ. ಅವರ ಅಂತ್ಯಕ್ಕೆ ಕಂಬನಿಮಿಡಿದವರು ಅದೆಷ್ಟೋ ಮಂದಿ. ತೀವ್ರ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ, ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರ ನಡೆಯಿತು.

ಪುನೀತ್ ರಾಜ್‌ಕುಮಾರ್ ಅವರ ಸಾವಿನ ಬಳಿಕ ಭಾವನಾತ್ಮಕ ಪತ್ರವನ್ನು ಬರೆದಿರುವ ಕಿಚ್ಚ ಸುದೀಪ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇಂದು ಅಂತ್ಯಸಂಸ್ಕಾರದಲ್ಲಿ ಅವರು ಕೂಡ ಪಾಲ್ಗೊಂಡಿದ್ದರು. ಅವರಿಗೆ ಬೀಳ್ಕೊಡುಗೆ ಪತ್ರ ಬರೆದಿರುವ ಕಿಚ್ಚ ಅವರು ಭಾವನಾತ್ಮಕ ನುಡಿಗಳನ್ನು ಪೋಣಿಸಿರುವುದಲ್ಲದೆ ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಗೌರವಯುತವಾಗಿ ಕಳುಹಿಸಿಕೊಟ್ಟ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದ ಹೇಳಿದ್ದಾರೆ. 

ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸರ್ಕಾರ ಸಕಲ ವ್ಯವಸ್ಥೆಯನ್ನೂ ಮಾಡಿದ್ದಾರೆ, ಅಂತಹ ಶಿಸ್ತು, ಘನತೆಯಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ನನ್ನ ಧನ್ಯವಾದಗಳು. ಪುನೀತ್ ರಾಜ್‌ಕುಮಾರ್ ಅವರಿಗೆ ಬೀಳ್ಕೊಡುಗೆ ನೀಡುವಲ್ಲಿ ನೀವೆಲ್ಲಾ ಪ್ರಮುಖ ಪಾತ್ರ ನಿರ್ವಹಿಸಿದ್ದೀರಿ, ಎಲ್ಲರಿಗೂ ಧನ್ಯವಾದಗಳು. 

‘’ಈಗ ಎಲ್ಲವೂ ಮುಗಿದಿದೆ. ಎಲ್ಲವೂ ಹಿಂದಿನ ಸಹಜ ಸ್ಥಿತಿಗೆ ಬರಬೇಕೆಂದರೆ ಇನ್ನಷ್ಟು ದಿನಗಳು ನಮಗೆ ಬೇಕು. ಆಗಬೇಕೆಂದ್ರೆ ಇನ್ನೂ ಹಲವು ದಿನಗಳು ಬೇಕು. ಇದು ಕೇವಲ ನಮಗೆ ನಷ್ಟ ಮಾತ್ರವಲ್ಲದೆ ಚಿತ್ರೋದ್ಯಮ ಮತ್ತು ಜನರಿಗೆ ಇದೊಂದು ಹಠಾತ್ ಆಘಾತ. ಮತ್ತೊಂದು ಸುಂದರ ಅಧ್ಯಾಯ ಕೊನೆಯಾಗಿದೆ. 

‘ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ನಾನಲ್ಲಿ ಕೂತಿರುವಾಗ, ಅವರ ಮಕ್ಕಳ ಮನಸ್ಸಿನಲ್ಲಿ ಏನು ಓಡುತ್ತಿರಬಹುದು ಎಂದು ಯೋಚಿಸುತ್ತಿದೆ. ಇಲ್ಲಿರುವ ಹಿರಿಯರ ಮನಸ್ಸಿನಲ್ಲಿ ಏನು ಯೋಚನೆಗಳು ಹೋಗುತ್ತಿರಬಹುದು, ಇವೆಲ್ಲ ಯೋಚಿಸಿದರೆ ಮನಸ್ಸು ನಿಜಕ್ಕೂ ಬೇಸರವಾಗುತ್ತದೆ ಎಂದಿದ್ದಾರೆ.

ಪುನೀತ್ ಎಲ್ಲರ ಪ್ರೀತಿಪಾತ್ರಕ್ಕೆ ಒಳಗಾಗಿದ್ದರು. ಇಂದು ಬೆಳಗ್ಗೆ ಅವರ ಪೋಷಕರ ಪಕ್ಕದಲ್ಲಿ ತಾಯಿಯ ಮಡಿಸು ಸೇರಿದ್ದಾರೆ. ಅಂತ್ಯಸಂಸ್ಕಾರ ಮುಗಿಸಿ ಹೊರಬರುವಾಗ ನನಗೆ ಈ ಯೋಚನೆ ತಲೆಯಲ್ಲಿ ಓಡಿತು, ಪುನೀತ್ ರಾಯಲ್ ಆಗಿಯೇ ಹುಟ್ಟಿದರು. ರಾಯಲ್ ಆಗಿಯೇ ಬೆಳೆದರು, ರಾಯಲ್ ಆಗಿಯೇ ಜೀವಿಸಿದರು, ಇಂದು ರಾಯಲ್ ಆಗಿಯೇ ಹೊರಟುಹೋಗಿದ್ದಾರೆ. 

ಈ ನಮ್ಮ ಸ್ಟಾರ್ ಈಗ ಆಕಾಶಕ್ಕೆ ಸೇರಿದ್ದಾರೆ. ರಾತ್ರಿ ಹೊತ್ತಿನಲ್ಲಿ ಆಕಾಶ ನೋಡುವಾಗ ಯಾವತ್ತಿನಂತೆಯೇ ನೀವು ಮಿನುಗುತ್ತಿರುತ್ತೀರೆಂದು, ಹಿಂದೆಂದಿಗಿಂತಲೂ ಹೆಚ್ಚು ಪ್ರಜ್ವಲವಾಗಿ ಕಾಣುತ್ತೀರೆಂದು ನನಗೆ ನಂಬಿಕೆಯಿದೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com