'ಅಶ್ವತ್ಥಾಮ' ನಿಗಾಗಿ ಮತ್ತೆ ಒಂದಾದ ಸುದೀಪ್- ಅನೂಪ್ ಭಂಡಾರಿ

ಸುದೀಪ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದ ಟೀಸರ್ ಗೆ ಸಿಕ್ಕಿದ ಅಭೂತ ಪೂರ್ವ ರೆಸ್ಪಾನ್ಸ್  ನಿಂದ ವಿಕ್ರಾಂತ್ ರೋಣ ಚಿತ್ರ ತಂಡ ಖುಷಿಯಾಗಿದೆ. ಚಿತ್ರದ ಪ್ರೊಮೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. 
ಅನೂಪ್ ಭಂಡರಿ ಮತ್ತು ಸುದೀಪ್
ಅನೂಪ್ ಭಂಡರಿ ಮತ್ತು ಸುದೀಪ್
Updated on

ಸುದೀಪ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದ ಟೀಸರ್ ಗೆ ಸಿಕ್ಕಿದ ಅಭೂತ ಪೂರ್ವ ರೆಸ್ಪಾನ್ಸ್  ನಿಂದ ವಿಕ್ರಾಂತ್ ರೋಣ ಚಿತ್ರ ತಂಡ ಖುಷಿಯಾಗಿದೆ. ಚಿತ್ರದ ಪ್ರೊಮೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. 

ಸಲ್ಮಾನ್ ಖಾನ್  ಕೂಡ ಚಿತ್ರದ ಪ್ರೋಮೋ ಹೊಗಳಿದ್ದರು. ವಿಕ್ರಾಂತ್ ರೋಣ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ವೇಳೆ ಚಿತ್ರತಂಡ ಮತ್ತೊಂದು ವಿಷಯವನ್ನು ಖಚಿತ ಪಡಿಸಿದೆ,  ನಿರ್ದೇಶಕ ಅನೂಪ್ ಭಂಡಾರಿ ಮತ್ತು ಸುದೀಪ್ ಅಶ್ವತ್ಥಾಮ ಎಂಬ ಹೊಸ ಸಿನಿಮಾಗಾಗಿ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ.

ಅಶ್ವತ್ಥಾಮ ಒಂದು ಆಸಕ್ತಿದಾಯಕ ಕತೆಯಾಗಿದೆ. ಅನೂಪ್ ಭಂಡಾರಿ ಚಿತ್ರಕ್ಕಾಗಿ ಕಥೆ ಬರೆಯುತ್ತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಸುದೀಪ ಹೇಳಿದ್ದರು. "ಸುದೀಪ್ ಹೇಳಿದಂತೆ, ನಾನು ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ಕಥೆ ಪೂರ್ಣ ಸಿದ್ಧವಾದ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಸಿನಿಮಾ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಅಶ್ವತ್ಥಾಮ, ಅನೂಪ್ ಭಂಡಾರಿಯವರ ಮಹತ್ವಾಕಾಂಕ್ಷೆಯ ಕನಸಿನ ಯೋಜನೆಗಳಲ್ಲಿ ಒಂದಾಗಿದೆ, ಇದನ್ನು ಬೆಳ್ಳಿತೆರೆಗೆ ತರಲು ಅವರು ತುಂಬಾ  ಉತ್ಸುಕರಾಗಿದ್ದಾರೆ. ವಿಕ್ರಾಂತ್ ರೋಣ ನಿರ್ದೇಶಕರು ಚಿತ್ರವನ್ನು ದೊಡ್ಡ ಬಜೆಟ್ ನಲ್ಲಿ ಮಾಡಲು ಯೋಜಿಸುತ್ತಿದ್ದಾರೆ. ಗನ್ ಹಿಡಿದಿರುವ ವ್ಯಕ್ತಿಯ ಚಿತ್ರ ಮತ್ತು ಬಿಲ್ಲು ಮತ್ತು ಬಾಣ ಹಿಡಿದಿರುವ ವ್ಯಕ್ತಿಯ ಒಳಗಿನ ಚಿತ್ರದೊಂದಿಗೆ ಯುದ್ಧೋಚಿತ ದೃಶ್ಯವನ್ನು ಒಳಗೊಂಡ ಪೋಸ್ಟರ್ ಅನ್ನು ನಿರ್ದೇಶಕರು ಅನಾವರಣಗೊಳಿಸಿದ್ದರು.

ನಿರ್ದೇಶಕರು ಒಂದೆರಡು ವರ್ಷಗಳಿಂದ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ ಮತ್ತು ಸುದೀಪ್ ಅವರೊಂದಿಗೆ ಬಹಳ ಹಿಂದೆಯೇ ಕಥೆಯ ಬಗ್ಗೆ ಚರ್ಚಿಸಿರುವುದಾಗಿ ಬಹಿರಂಗಪಡಿಸಿದರು. ಈ ಚಿತ್ರವು ಹಿಂದೂ ಪೌರಾಣಿಕ ಪಾತ್ರವಾದ ಅಶ್ವಥಾಮನ ಬಗ್ಗೆ ಹೇಳುತ್ತದೆ. 

ಅಶ್ವತ್ಥಾಮ ಪೌರಾಣಿಕ ಪಾತ್ರವು ಇತರ ಇಬ್ಬರು ಚಲನಚಿತ್ರ ನಿರ್ಮಾಪಕರನ್ನು ಸಹ ಸೆಳೆಯಿತು. ವಿಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ನಟಿಸಿರುವ ದಿ ಇಮ್ಮಾರ್ಟಲ್ ಅಶ್ವತ್ಥಾಮ ಎಂಬ ಬಾಲಿವುಡ್ ಪ್ರಾಜೆಕ್ಟ್ ಅನ್ನು ಮೊದಲು ಘೋಷಿಸಲಾಗಿತ್ತು. ಇದನ್ನು ರೋನಿ ಸ್ಕ್ರೂವಾಲಾ ನಿರ್ಮಿಸಬೇಕಿತ್ತು. ಆದಾಗ್ಯೂ, ಬಜೆಟ್ ನಿರ್ಬಂಧಗಳಿಂದಾಗಿ, ಚಲನಚಿತ್ರವು ಅಂತಿಮವಾಗಿ ಸ್ಥಗಿತಗೊಂಡಿತು.

ಉದೇ ರೀತಿ, ಪೌರಾಣಿಕ ಪಾತ್ರವನ್ನು ಆಧರಿಸಿದ ಕನ್ನಡ ಚಲನಚಿತ್ರವನ್ನು ನವೆಂಬರ್ 2020 ರಲ್ಲಿ ಶಿವ ರಾಜ್ ಕುಮಾರ್ ನಾಯಕನಾಗಿ ಘೋಷಿಸಲಾಯಿತು. ಸಚಿನ್ ರವಿ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಅಶ್ವಥಾಮ ಎಂದು ಹೆಸರಿಸಲಾಯಿತು. ತರುವಾಯ, ಯೋಜನೆಯ ಬಗ್ಗೆ ಯಾವುದೇ ವಿವರಗಳನ್ನು ತಯಾರಕರು ಮಾಡಲಿಲ್ಲ. ಸದ್ಯ ಸುದೀಪ್ ಅವರ ಅಶ್ವತ್ಥಾಮ ಮಾತ್ರ ಜೀವಂತವಾಗಿರುವಂತೆ ತೋರುತ್ತಿದೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com