'ಅಂಬುಜಾ' ಸಿನಿಮಾದಲ್ಲಿ ಲಂಬಾಣಿ ಮಹಿಳೆಯಾಗಿ ಶುಭಾ ಪೂಂಜಾ!

ಬಿಗ್ ಬಾಸ್ ಸೀಸನ್ ಕನ್ನಡ 8ರ ಸೀಸನ್ ಸ್ಪರ್ಧಿ ಶುಭಾ ಪೂಂಜಾ ನಟನೆಯ ತ್ರಿದೇವಿ ಮತ್ತು ರೈಮ್ಸ್ ಸಿನಿಮಾಗಳು ರಿಲೀಸ್ ಗಾಗಿ ಕಾಯುತ್ತಿವೆ, ಇದೇ ವೇಳೆ ಶುಭಾ ಪೂಂಜಾ ಅಂಬುಜಾ ಸಿನಿಮಾ ಶೂಟಿಂಗ್ ಗಾಗಿ ಸಿದ್ಧರಾಗಿದ್ದಾರೆ.
ಶುಭಾ ಪೂಂಜಾ
ಶುಭಾ ಪೂಂಜಾ

ಬಿಗ್ ಬಾಸ್ ಸೀಸನ್ ಕನ್ನಡ 8ರ ಸೀಸನ್ ಸ್ಪರ್ಧಿ ಶುಭಾ ಪೂಂಜಾ ನಟನೆಯ ತ್ರಿದೇವಿ ಮತ್ತು ರೈಮ್ಸ್ ಸಿನಿಮಾಗಳು ರಿಲೀಸ್ ಗಾಗಿ ಕಾಯುತ್ತಿವೆ, ಇದೇ ವೇಳೆ ಶುಭಾ ಪೂಂಜಾ ಅಂಬುಜಾ ಸಿನಿಮಾ ಶೂಟಿಂಗ್ ಗಾಗಿ ಸಿದ್ಧರಾಗಿದ್ದಾರೆ.

ಲಂಬಾಣಿ ಕುಟುಂಬದ ನೈಜ ಕತೆಯಾಧಾರಿತ ಸಿನಿಮಾ ಇದಾಗಿರುವುದರಿಂದ ಶುಭಾ ಪಕ್ಕಾ ಲಂಬಾಣಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿ ಹೇಮಂತ್ ರಾಜು ಈ ಸಿನಿಮಾದ ನಿರ್ದೇಶಕರು.

ಅಕ್ಟೋಬರ್‌ನಲ್ಲಿ ಆರಂಭಗೊಳ್ಳುವ ಈ ಸಿನಿಮಾದಲ್ಲಿ ಶುಭಾ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರೈಮ್ ರಿಪೋರ್ಟರ್ ಲಂಬಾಣಿ ಮಹಿಳೆ ಪಾತ್ರದಲ್ಲಿ  ನಟಿಸಿದ್ದಾರೆ.

ಈ ಸಿನಿಮಾದ ಫೋಟೋವನ್ನು ನಿರ್ಮಾಪಕರು ಹಂಚಿಕೊಂಡಿದ್ದಾರೆ. ಶುಭಾ ಧರಿಸಿದ್ದ ಲಂಬಾಣಿ ಉಡುಪನ್ನು ಗದುಗಿನ ಲಂಬಾಣಿ ಗುಂಪು ವಿನ್ಯಾಸಗೊಳಿಸಿದೆ. ವಿನ್ಯಾಸಕಾರರಿಗೆ  ಉಡುಪನ್ನು ಹೊಲಿಯಲು ನಾಲ್ಕು ತಿಂಗಳು ಬೇಕಾಯಿತು.

ಚಿತ್ರತಂಡ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿದ್ದು ಬೆಂಗಳೂರು, ಗದಗ, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಅಂಬುಜಾ ಪ್ರಸನ್ನ ಕುಮಾರ್ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲಿದ್ದು, ಮುರಳೀಧರ್ ಕ್ಯಾಮೆರಾ ನಿರ್ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com