ಶುಭಾ ಪುಂಜಾ
ಶುಭಾ ಪುಂಜಾ

ಇದು ಜೀವನ ಬದಲಾಯಿಸುವ ಅನುಭವ: ಬಿಗ್ ಬಾಸ್ ಕನ್ನಡ ಸೀಸನ್ 8 ಬಗ್ಗೆ ಶುಭಾ ಪೂಂಜಾ ಉವಾಚ

ಕೊರೋನಾ ಲಾಕ್ ಡೌನ್ ನಿಂದಾಗಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 8ರ ಆವೃತ್ತಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು ಬಿಗ್ ಬಾಸ್ ಮನೆಯಲ್ಲಿದ್ದ ನಟಿ ಶುಭಾ ಪೂಂಜಾ ಇದೀಗ ಮನೆಗೆ ಮರಳಿದ್ದಾರೆ. 

ಕೊರೋನಾ ಲಾಕ್ ಡೌನ್ ನಿಂದಾಗಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 8ರ ಆವೃತ್ತಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು ಬಿಗ್ ಬಾಸ್ ಮನೆಯಲ್ಲಿದ್ದ ನಟಿ ಶುಭಾ ಪೂಂಜಾ ಇದೀಗ ಮನೆಗೆ ಮರಳಿದ್ದಾರೆ. 

ಇನ್ನು ಬಿಗ್ ಬಾಗ್ ಮನೆಯಲ್ಲಿನ ಅನುಭವದ ಕುರಿತು ಮಾತನಾಡಿರುವ ಅವರು ಬಿಗ್ ಬಾಸ್ ಮನೆ ನಿಜಕ್ಕೂ ಜೀವನವನ್ನು ಬದಲಾಯಿಸುವ ಅನುಭವ ನೀಡಿದೆ. ಇನ್ನು ಮುಂದೆ ನಟಿಸುವ ಚಿತ್ರಗಳ ಆಯ್ಕೆ ಕುರಿತು ಜಾಗರೂಕರಾಗಿರಲು ಬಯಸುತ್ತೇನೆ ಎಂದರು. 

ಬಿಗ್ ಬಾಸ್ ನನಗೆ ಒಂದು ಕುಟುಂಬದ ಪ್ರೀತಿಯನ್ನು ನೀಡಿದೆ. ಅಲ್ಲಿಂದ ಹೊರಬಂದ ಬಳಿಕ ನಾನು ಅದನ್ನು ತಿಳಿದುಕೊಂಡೆ. ನನ್ನ ಅಭಿಮಾನಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ನಾನು ಸಾಕಷ್ಟು ಮಹಿಳಾ ಅಭಿಮಾನಿಗಳನ್ನು ಗಳಿಸಿದ್ದೇನೆ. ಇದು ನನಗೆ ಹೊಸ ವಿಷಯ. ಇಂದಿನಿಂದ ನಾನು ಆಯ್ಕೆ ಮಾಡು ಚಿತ್ರಕಥೆಗಳು ವೀಕ್ಷಕರನ್ನು ಸೆಳೆಯುತ್ತದೆ ಎಂದು ನಂಬುತ್ತೇನೆ ಎಂದು ಶುಭಾ ಹೇಳಿದರು.  

ಮೊಗ್ಗಿನಾ ಮನಸುನಲ್ಲಿ ಜನರು ನನ್ನನ್ನು ಇಷ್ಟಪಟ್ಟಿದ್ದರು. ಆದರೆ ಅವರು ನನ್ನ ಇತರ ಚಿತ್ರಗಳ ಬಗ್ಗೆ ಅದೇ ಆಸಕ್ತಿಯನ್ನು ತೋರಿಸಲಿಲ್ಲ. ಆದರೆ ರಿಯಾಲಿಟಿ ಶೋನಲ್ಲಿ ನನ್ನನ್ನು ನೋಡಿದ ನಂತರ, ಅಭಿಮಾನಿಗಳು ವ್ಯಕ್ತಿತ್ವ ನೋಡಿದ್ದಾರೆ ಎಂದರು. ಇನ್ನು ತಾವು ನಾಯಕಿ ಕೇಂದ್ರಿತ ಚಿತ್ರವಾದ ತ್ರಿದೇವಿಯ ಬಿಡುಗಡೆಗಾಗಿ ಕಾಯುತ್ತಿರುವುದಾಗಿ ಹೇಳಿದ್ದು ನಂತರ ಥ್ರಿಲ್ಲರ್ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ ಎಂದರು. 

ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಾಗ ನನಗೆ ಸಾಕಷ್ಟು ಆತಂಕಗಳು ಇದ್ದವು. ಏನಾದರೂ ಪರವಾಗಿಲ್ಲ ನೀನು ಭಾಗವಹಿಸು ಎಂದು ಅವರ ನಿಶ್ಚಿತ ವರ ಸುಮಂತ್ ಬಿಲಾವಾ ಹೇಳಿದರಂತೆ. "ಹೊಸದನ್ನು ಪ್ರಯೋಗ ಮಾಡಲು ಹಿಂಜರಿಯಬಾರದು ಎಂದು ಅವರು ನನಗೆ ಹೇಳಿದರು. ಕರ್ನಾಟಕದ ಜನರಿಗೆ ನಿನ್ನ ನಿಜರೂಪ ತೋರಿಸುವುದಕ್ಕೆ ಇದೊಂದು ಅವಕಾಶ. ಈಗ ಹಿಂತಿರುಗಿ ನೋಡಿದಾಗ, ಜನರು ನನ್ನನ್ನು ತಿಳಿದುಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದೆ. ಇದು ಅದ್ಭುತ ಅನುಭವ, ಮತ್ತು ಇದು ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಬದಲಿಸಿದೆ ಎಂದರು. 

ಇನ್ನು ಬಿಗ್ ಬಾಸ್ ಕಾರ್ಯಕ್ರಮವನ್ನು ಅರ್ಧಕ್ಕೆ ನಿಂತಾಗ ನಾನು ಎದೆಗುಂದಿದೆ. ಆದರೆ ಹೊರಗಡೆಯ ನೈಜ್ಯ ಪರಿಸ್ಥಿತಿಯ ಹರಿವು ನಮಗೆ ಇರಲಿಲ್ಲ. ತಮ್ಮ ಜೀವವನ್ನು ಉಳಿಸಿಕೊಳ್ಳಲು ಜನರು ಪರದಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ನೋವಾಗುತ್ತಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗ ನಟ ಕಿಚ್ಚಾ ಸುದೀಪ್ ಅವರು ನಮ್ಮನ್ನು ಮಕ್ಕಳಂತೆ ನೋಡಿಕೊಂಡರು. ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ತಿಳಿ ಹೇಳಿದರು ಎಂದರು. ಮುಖ್ಯವಾಗಿ ಫೋನ್ ಇಲ್ಲದೆ ಜೀವನವನ್ನು ಶಾಂತ ಮತ್ತು ಸಂತೋಷದಿಂದ ಆನಂದಿಸುವುದನ್ನು ಕಲಿಯುತ್ತಿರುವುದಾಗಿ ಹೇಳಿದರು. 

Related Stories

No stories found.

Advertisement

X
Kannada Prabha
www.kannadaprabha.com