ಬೈರಾಗಿ ಪೋಸ್ಟರ್
ಬೈರಾಗಿ ಪೋಸ್ಟರ್

ಶಿವಣ್ಣ ನಟನೆಯ 'ಬೈರಾಗಿ' ಸಿನಿಮಾ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಹಿಟ್!

ವಿಜಯ್ ಮಿಲ್ಟನ್ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣವಾಗಿದೆ. ಸಿನಿಮಾದಲ್ಲಿ ಕೇವಲ ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿವೆ.
Published on

ವಿಜಯ್ ಮಿಲ್ಟನ್ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣವಾಗಿದೆ. ಸಿನಿಮಾದಲ್ಲಿ ಕೇವಲ ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿವೆ.

'ಟಗರು' ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಹಾಗೂ 'ಡಾಲಿ' ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿರುವುದರಿಂದ ಪ್ರಾರಂಭದಿಂದಲೇ ನಿರೀಕ್ಷೆ ಗರಿಗೆದರಿದೆ. ಇಬ್ಬರೂ ಬೇರೆ ಬೇರೆ ಗೆಟಪ್ ಮೂಲಕ ಮೋಡಿ ಮಾಡಲಿದ್ದಾರೆ ಎಂಬುದು ವಿಶೇಷ. ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿರುವ ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದ್ದು, ಆಟೋ ಹಾಗೂ ಕಾರುಗಳ ಮೇಲೆ ಶಿವಣ್ಣನ ಪೋಸ್ಟರ್ ರಾರಾಜಿಸುತ್ತಿವೆ.

ಸಿನಿಮಾದಲ್ಲಿ ಅಂಜಲಿ ನಾಯಕಿಯಾಗಿ ನಟಿಸಿದ್ದಾರೆ. ಬೈರಾಗಿಯಲ್ಲಿ ಪೃಥ್ವಿ ಅಂಬರ್, ಯಶೋ ಶಿವಕುಮಾರ್, ಉಮಾಶ್ರೀ ಮತ್ತು ಶಶಿಕುಮಾರ್ ಮುಂತಾದವರು ನಟಿಸಿದ್ದಾರೆ.

ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಸಿನಿಮಾ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಉಳಿದ ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದ್ದು. ತಯಾರಕರು ಒಂದು ಬೃಹತ್ ಸೆಟ್ ಅನ್ನು ನಿರ್ಮಿಸಲು ಯೋಜಿಸಿದ್ದಾರೆ. "ನಾಯಕನ ಪರಿಚಯ ಮಾಡುವ ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗುವುದು, ಮತ್ತು ಅದಕ್ಕಾಗಿ ಒಂದು ಸೆಟ್ ಅನ್ನು ನಿರ್ಮಿಸಲು ನಾವು ಯೋಜಿಸುತ್ತಿದ್ದೇವೆ. ಹಾಡಿನ ಚಿತ್ರೀಕರಣಕ್ಕಾಗಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಮತ್ತು ತಂತ್ರಜ್ಞರನ್ನು ಸೇರಿಸಲು ಯೋಜಿಸುತ್ತಿದ್ದೇವೆ. ಇದು ಎಲ್ಲಾ ಹವಾಮಾನ ಮತ್ತು ಕೋವಿಡ್ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಎಲ್ಲವೂ ಯೋಜನೆಯಂತೆ ನಡೆದರೆ, ನಾವು ಆಗಸ್ಟ್ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣವನ್ನು ಮುಗಿಸುತ್ತೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಶಿವರಾಜಕುಮಾರ್ ಭಜರಂಗಿ 2. ಬಿಡುಗಡೆಗಾಗಿ ಕಾಯುತ್ತಿದೆ. ಈ ಸಿನಿಮಾ ಬಿಡುಗಡೆಯ ನಂತರ ಶಿವಣ್ಣ ತನ್ನ 124 ನೇ ಚಿತ್ರದ ಸೆಟ್ ಗೆ ಸೇರಲಿದ್ದಾರೆ. ರಾಮ್ ಧೂಳಿಪುಡಿ ನಿರ್ದೇಶಿಸಲಿದ್ದಾರೆ. ಈ ಚಿತ್ರವು ಈ ತಿಂಗಳು ತೆರೆಗೆ ಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com