ರಚಿತಾ ರಾಮ್ ಫರ್ಸ್ಟ್ ಮ್ಯೂಸಿಕ್ ಸೋಲೊ ಮ್ಯೂಸಿಕ್ ಆಲ್ಬಂ 'ಲಕ ಲಕ ಲ್ಯಾಂಬೋರ್ಗಿನಿ' ಶೂಟಿಂಗ್ ಅಂತ್ಯ

ತಮ್ಮ ಕೆರಿಯರ್ ನಲ್ಲಿಯೇ ಈ ಹಾಡು ಅತ್ಯಂತ ದುಬಾರಿಯಾದುದು ಎಂದು ಚಂದನ್ ಶೆಟ್ಟಿ ಅವರೇ ಹೇಳಿದ್ದು, ಸಂಗೀತಪ್ರೇಮಿಗಳಲ್ಲಿ ಕಾತರ ಹೆಚ್ಚಿಸಿದೆ.
ವಿಡಿಯೋದಲ್ಲಿ ರಚಿತಾ ರಾಮ್ ಮತ್ತು ಚಂದನ್ ಶೆಟ್ಟಿ
ವಿಡಿಯೋದಲ್ಲಿ ರಚಿತಾ ರಾಮ್ ಮತ್ತು ಚಂದನ್ ಶೆಟ್ಟಿ

ಗಾಯಕ, ಗೀತ ರಚನೆಕಾರ ಚಂದನ್ ಶೆಟ್ಟಿ ನೂತನ ಮ್ಯೂಸಿಕ್ ಆಲ್ಬಂ ಹಾಡು 'ಲಕ ಲಕ ಲ್ಯಾಂಬೋರ್ಗಿನಿ' ಚಿತ್ರೀಕರಣ ಪೂರ್ತಿಯಾಗಿದ್ದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಹಾಡಿನ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ಮ್ಯೂಸಿಕ್ ಆಲ್ಬಂ ಕ್ಷೇತ್ರಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಮ್ಯೂಸಿಕ್ ಆಲ್ಬಂ ಹಾಡುಗಳಿಗೆ ಜನಪ್ರಿಯತೆ ಗಳಿಸಿರುವ ಚಂದನ್ ಶೆಟ್ಟಿ ಅವರ ಕೆರಿಯರ್ ನಲ್ಲಿಯೇ ಈ ಹಾಡು ಅತ್ಯಂತ ದುಬಾರಿಯಾದುದು ಎಂದು ಅವರೇ ಹೇಳಿದ್ದು, ಸಂಗೀತಪ್ರೇಮಿಗಳಲ್ಲಿ ಕಾತರ ಹೆಚ್ಚಿಸಿದೆ. 

ಈ ಮ್ಯೂಸಿಕ್ ಆಲ್ಬಂ ಹಾಡನ್ನು ಚಿತ್ರ ನಿರ್ದೇಶಕ ನಂದ ಕಿಶೋರ್ ಅವರು ನಿರ್ದೇಶಿಸಿದ್ದಾರೆ ಎನ್ನುವುದು ವಿಶೇಷ. ಕೇಶವ್ ಅವರು ಈ ಮ್ಯೂಸಿಕ್ ಆಲ್ಬಂ ಸೋಲೊ ಹಾಡಿಗೆ ಹಣ ಹೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com