
ರಚಿತಾ ರಾಮ್
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಇದರ ಜೊತೆಗೆ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಗರಡಿ ಚಿತ್ರದಲ್ಲಿ ಯಶಸ್ ಸೂರ್ಯಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಸಚಿವ, ನಟ ಬಿ.ಸಿ. ಪಾಟೀಲ್ ಕೂಡಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಚಿತಾ ರಾಮ್ ಅವರು ನಿನ್ನೆಷ್ಟೇ ಚಿತ್ರದ ನಿರ್ಮಾಪಕ ಮತ್ತು ರಾಜಕಾರಣಿ, ಬಿ.ಸಿ.ಪಾಟೀಲ್ ಮತ್ತು ಚಿತ್ರತಂಡವನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ.
ರಚಿತಾರಾಮ್ ಭೇಟಿ ಬಳಿಕ ಚಿತ್ರ ಕುರಿತು ಮಾಹಿತಿ ನೀಡಿದ ಬಿಸಿ ಪಾಟೀಲ್ ಅವರು, "ಗರಡಿ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದು, ಜನವರಿ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಿದರು.
ಕಮರ್ಷಿಯಲ್ ಎಂಟರ್ ಟೈನರ್ ಆಗಿ ನಿರ್ಮಿಸಲಾಗುತ್ತಿರುವ ಗರಡಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಚಿತ್ರೀಕರಣ ಉತ್ತರ ಕರ್ನಾಟಕ, ಬಾದಾಮಿ, ಐಹೊಳೆ ಮತ್ತು ಪಟದಕಲ್ಲುವಿನಲ್ಲಿ ನಡೆಯಲಿದೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ದರ್ಶನ್ ನಟಿಸುತ್ತಿರುವ 'ಕ್ರಾಂತಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ನಿರ್ದೇಶಿಸುತ್ತಿರುವ 'ಕ್ರಾಂತಿ' ಚಿತ್ರದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ.