ಸಿನಿಮಾ ಪೋಸ್ಟರ್
ಸಿನಿಮಾ ಸುದ್ದಿ
'ಅರ್ಜುನ್ ಗೌಡ' ಸಿನಿಮಾವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರೆದುರು ತರುವ ರಾಮು ಆಸೆಯನ್ನು ನಾನು ಪೂರೈಸುವೆ: ಮಾಲಾಶ್ರೀ
ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್ ಮತ್ತು ಸಾಧು ಕೋಕಿಲ ಅರ್ಜುನ್ ಗೌಡ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 31ಕ್ಕೆ ಬಿಡುಗಡೆಯಾಗುತ್ತಿದೆ.
ಬೆಂಗಳೂರು: ಬಿಡುಗಡೆಗೆ ಸಿದ್ಧವಾಗಿರುವ 'ಅರ್ಜುನ್ ಗೌಡ' ಸಿನಿಮಾ ಬಗ್ಗೆ ನಟಿ ಮಾಲಾಶ್ರೀ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಿರ್ಮಾಪಕ ರಾಮು ಅವರು ಅರ್ಜುನ್ ಗೌಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.
ಸಿನಿಮಾ ಪೂರ್ತಿಯಾಗುವುದಕ್ಕೆ ಮುನ್ನವೇ ರಾಮು ನಿಧನರಾಗಿದ್ದರು. ಈಗ ಅರ್ಜುನ್ ಗೌಡ ಸಿನಿಮಾವನ್ನು ಕನ್ನಡ ಪ್ರೇಕ್ಷಕರ ಮುಂದೆ ತರುವ ರಾಮು ಆಸೆಯನ್ನು ಪತ್ನಿ, ನಟಿ ಮಾಲಾಶ್ರೀ ಪೂರೈಸುತ್ತಿದ್ದಾರೆ.
ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್ ಮತ್ತು ಸಾಧು ಕೋಕಿಲ ಅರ್ಜುನ್ ಗೌಡ ಸಿನಿಮಾದಲ್ಲಿ ನಟಿಸಿದ್ದಾರೆ. ಲಕ್ಕಿ ಶಂಕರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಯಶಸ್ಸು ಗಳಿಸುವ ನಂಬಿಕೆ ರಾಮು ಅವರಿಗಿತ್ತು ಎಂದು ಮಾಲಾಶ್ರೀ ತಿಳಿಸಿದ್ದಾರೆ. ಸಿನಿಮಾ ಡಿಸೆಂಬರ್ 31ಕ್ಕೆ ಬಿಡುಗಡೆಯಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ