ಸಿನಿಮಾ ಸುದ್ದಿ

ರಾಮನಾಥ್ ನಿರ್ದೇಶನದ 'ಭೈರವ' ಚಿತ್ರಕ್ಕೆ ಸುಕನ್ಯಾ ಗಿರೀಶ್ ನಾಯಕಿ

ರಾಮನಾಥ್ ನಿರ್ದೇಶನದ 'ಭೈರವ' ಚಿತ್ರಕ್ಕೆ ಸುಕನ್ಯಾ ಗಿರೀಶ್ ನಾಯಕಿ
ಸುಕನ್ಯಾ ಗಿರೀಶ್
Published On :

ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಟಿಸಿದ್ದ ಸುಕನ್ಯಾ ಗಿರೀಶ್ ತಮ್ಮ ಮುಂದಿನ ಸಿನಿಮಾಗೆ ಸಹಿ ಮಾಡಿದ್ದಾರೆ.  ಮೈಥಾಲಜಿ ಅಂಶಗಳನ್ನಿಟ್ಟುಕೊಂಡು ರಾಮತೇಜ ಸಿನಿಮಾ ನಿರ್ದೇಶಿಸಿದ್ದು, ಶಿವಾಜಿ ಸುರತ್ಕಲ್ ನಟ ಅಭಿನಯಿಸಿದ್ದಾರೆ.

ಈ ಹಿಂದೆ ಸೈಕೋ, ಮತ್ತು ಸಾಲ್ಟ್ ಅಂಡ್ ಪೆಪ್ಪರ್‌ನಂತಹ ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದ ನಿರ್ದೇಶಕರು ಭೈರವ ಚಿತ್ರದ ಮೂಲಕ ತಮ್ಮ ಚೊಚ್ಚಲ ಚಲನಚಿತ್ರವನ್ನು ಮಾಡಲಿದ್ದಾರೆ.

ಹನಿ ಚೌಧರಿ ಮತ್ತು ವೈಭವ್ ಬಜಾಜ್ ಜಂಟಿಯಾಗಿ ನಿರ್ಮಿಸಲಾಗಿದ್ದು, ನಿರ್ದೇಶಕರು ನೇರ ಒಟಿಟಿ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಅದಕ್ಕಾಗಿ ಒಂದೆರಡು ಜನಪ್ರಿಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಚರಣ್ ಸುವರ್ಣ ಬರೆದಿರುವ ಭೈರವ ಚಿತ್ರಕ್ಕೆ ರಾಮತೇಜ ಅವರ ಚಿತ್ರಕಥೆ ಮತ್ತು ಸಂಭಾಷಣೆ ಇದೆ. ಚಿತ್ರದ ನಾಯಕನಾಗಿ ಕಮರೊಟ್ಟು ಚೆಕ್‌ಪೋಸ್ಟ್ ಖ್ಯಾತಿಯ ಸನತ್ ಅವರನ್ನು ನಿರ್ಮಾಪಕರು ಆಯ್ಕೆ ಮಾಡಿದ್ದಾರೆ ಮತ್ತು ಉಮೇಶ್ ಸಕ್ರೆನಾಡು ಅವರು ಖಳನಾಯಕರಾಗಿ ನಟಿಸಲಿದ್ದಾರೆ.

ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಕುರಿತ ಕಮರ್ಷಿಯಲ್ ಸಿನಿಮಾಾ ಇದಾಗಿದೆ. ಜನವರಿ 28 ರಂದು ಪೋಸ್ಟರ್ ರಿಲೀಸ್ ಆಗಲಿದೆ.  ಸಂಕ್ರಾಂತಿಯಿಂದ ಶೂಟಿಂಗ್ ಆರಂಭಿಸುವುದಾಗಿ ನಿರ್ದೇಶಕ ರಾಮತೇಜಾ ಹೇಳಿದ್ದಾರೆ. ನಾವು ಬೆಂಗಳೂರು, ಋಷಿಕೇಶ, ಕಾಶಿ, ಮೀರತ್ ಮತ್ತು ಗಾಜಿಯಾಬಾದ್‌ನಲ್ಲಿ ಶೂಟಿಂಗ್ ನಡೆಸುತ್ತೇವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.