ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ತಾರೆ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ

ಹಾಲಿವುಡ್ ನ ಆಸ್ಕರ್ ಪ್ರಶಸ್ತಿ ವಿಜೇತ ಹಿರಿಯ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಕ್ರಿಸ್ಟೋಫರ್ ಪ್ಲಮ್ಮರ್
ಕ್ರಿಸ್ಟೋಫರ್ ಪ್ಲಮ್ಮರ್

ನ್ಯೂಯಾರ್ಕ್: ಹಾಲಿವುಡ್ ನ ಆಸ್ಕರ್ ಪ್ರಶಸ್ತಿ ವಿಜೇತ ಹಿರಿಯ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

''ದ ಸೌಂಡ್ ಆಫ್ ಮ್ಯೂಸಿಕ್'' ಚಿತ್ರದಲ್ಲಿ ಕ್ಯಾಪ್ಟನ್ ವೊನ್ ಟ್ರ್ಯಾಪ್ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಕ್ರಿಸ್ಟೋಫರ್ ಪ್ಲಮ್ಮರ್ 82ನೇ ವಯಸ್ಸಿನಲ್ಲಿ ಆಸ್ಕರ್ ಪ್ರಶಸ್ತಿ ಗಳಿಸುವ ಮೂಲಕ ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲಿ ಅವಾರ್ಡ್ ಪಡೆದ ಅತ್ಯಂತ ಹಿರಿಯ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

ಪ್ಲಮ್ಮರ್ ನಿನ್ನೆ ಬೆಳಗ್ಗೆ ತಮ್ಮ ಕನ್ನೆಕ್ಟಿಕಟ್ ನಲ್ಲಿರುವ ಮನೆಯಲ್ಲಿ ನಿಧನರಾದ ವೇಳೆ ಈ ಸಂದರ್ಭದಲ್ಲಿ ಅವರ ಪತ್ನಿ ಎಲೈನ್ ಟೇಲರ್ ಇದ್ದರು ಎಂದು ಅವರ ಮ್ಯಾನೇಜರ್ ಲೊ ಪಿಟ್ಟ್ ತಿಳಿಸಿದ್ದಾರೆ.

ಹಾಲಿವುಡ್ ಚಿತ್ರೋದ್ಯಮದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲವಿದ್ದ ಪ್ಲಮ್ಮರ್ ದ ಗರ್ಲ್ ವಿತ್ ದ ಡ್ರಾಗನ್ ಟಾಟ್ಟೂ ಚಿತ್ರದಿಂದ ಹಿಡಿದು 2009ರ ವಿಲನ್ ಪಾತ್ರದಲ್ಲಿ ಅಪ್ ಚಿತ್ರದಲ್ಲಿ, ಬ್ರಾಡ್ ವೇಯವರ ಇನ್ ಹೆರಿಟ್ ದ ವಿಂಡ್ ಚಿತ್ರದಲ್ಲಿ ವಕೀಲ ಪಾತ್ರದಲ್ಲಿ ಹೀಗೆ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದರು. 

ಪ್ಲಮ್ಮರ್ ಅರ್ಥರ್ ಕ್ರಿಸ್ಟೋಫರ್ ಒರ್ಮೆ ಪ್ಲಮ್ಮರ್ ಅವರ ಮಗನಾಗಿ ಟೊರೊಂಟೊದಲ್ಲಿ ಜನಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com