ಸುದ್ದಿವಾಹಿನಿ ವಿರುದ್ಧ ರಕ್ಷಿತ್ ಶೆಟ್ಟಿ ಕಿಡಿ: ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗೋದು’ ಎಂದ ಪುಷ್ಕರ್

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ನಟ ರಕ್ಷಿತ್​ ಶೆಟ್ಟಿ ಬಗ್ಗೆ ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿದೆ.
ಪುಷ್ಕರ್​ ಮಲ್ಲಿಕಾರ್ಜುನಯ್ಯ
ಪುಷ್ಕರ್​ ಮಲ್ಲಿಕಾರ್ಜುನಯ್ಯ
Updated on

ಬೆಂಗಳೂರು: ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ನಟ ರಕ್ಷಿತ್​ ಶೆಟ್ಟಿ ಬಗ್ಗೆ ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿದೆ. 

ಪ್ರಕರಣ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ಅವರು, ನಾವು ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗೋದು’ ಎಂಬ ಅಡಿ ಬರಹದೊಂದಿಗೆ ದೀರ್ಘವಾಗಿ ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. 

‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಿಂದಲೂ ರಕ್ಷಿತ್​ ಶೆಟ್ಟಿ ಮತ್ತು ಪುಷ್ಕರ್​ ಸ್ನೇಹಿತರಾಗಿದ್ದಾರೆ. ಈಗ ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಗಾಸಿಪ್​ ಕೇಳಿಬಂದಿತ್ತು. ಆ ಎಲ್ಲ ವಿಚಾರಗಳಿಗೆ ಪುಷ್ಕರ್​ ಈ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

‘ನಮ್ಮ ಚಿತ್ರರಂಗಕ್ಕೆ ಇದು ಪರೀಕ್ಷೆಯ ಕಾಲ. ಇಂತಹ ಸಂದರ್ಭದಲ್ಲಿ ರಕ್ಷಿತ್​ ಬಗ್ಗೆ ಪ್ರತಿಷ್ಠಿತ ಸುದ್ದಿವಾಹಿನಿಯಲ್ಲಿ ಈ ರೀತಿ ಪ್ರಸಾರ ಆಗಿರುವುದು ಆಘಾತದ ಸಂಗತಿ’ ಎಂದು ಪುಷ್ಕರ್​ ಹೇಳಿದ್ದಾರೆ. 

‘ತಮ್ಮ ಪರಿಶ್ರಮದಿಂದ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ರಕ್ಷಿತ್​ ಶೆಟ್ಟಿ ಅವರ ಬಗ್ಗೆ ಈ ರೀತಿ ಸುದ್ದಿ ಮಾಡುವುದು ಸರಿಯಲ್ಲ. ಸುದ್ದಿವಾಹಿನಿಯ ಕಾರ್ಯಕ್ರಮಕ್ಕೆ ಪ್ರತಿಕ್ರಿಯೆಯಾಗಿ, ಯಾವುದು ಸತ್ಯ ಎಂದು ಸ್ಪಷ್ಟಪಡಿಸಲು ನಾವೆಲ್ಲರೂ ಸಾಮಾಜಿಕ ಜಾಲತಾಣಗಳನ್ನು ಬಳಸಬೇಕಾಗಿ ಬಂದಿರುವುದು ದುರದೃಷ್ಟಕರ ಸಂಗತಿ ಎಂದು ತಿಳಿಸಿದ್ದಾರೆ.

ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ ಅವನೇ ಶ್ರೀಮನ್ನಾರಾಯಣ ಸಿನಿಮಾದವರೆಗೆ​ ನಾನು ಮತ್ತು ರಕ್ಷಿತ್ ಜೊತೆಯಾಗಿ ಸಾಗಿ ಬಂದಿದ್ದೇವೆ. ನನ್ನ ಸಿನಿಮಾ ಜರ್ನಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಅವನೇ ಶ್ರೀಮನ್ನಾರಾಯಣ ಬ್ಯುಸಿನೆಸ್​ ಬಗ್ಗೆ ಅನೇಕ ಊಹಾಪೋಹಗಳಿವೆ. ಅದು ನನ್ನ ವೈಯಕ್ತಿಕ. ಲಾಭ-ನಷ್ಟ ಏನೇ ಇದ್ದರೂ ಉತ್ಸಾಹದಲ್ಲಿ ನಾವು ಒಂದು ತಂಡದ ರೀತಿ ಕೆಲಸ ಮಾಡಿದ್ದೇವೆ. ಮಂದೆಯೂ ಹಾಗೆಯೇ ಮಾಡಲಿದ್ದೇವೆ. ಒಂದು ಸಿನಿಮಾದ ಫಲಿತಾಂಶದಿಂದ ನಮಗೆ ಸಿನಿಮಾದ ಮೇಲಿರುವ ಒಲವು ಕಡಿಮೆ ಆಗುವುದಿಲ್ಲ. ಒಂದು ಕುಟುಂಬದ ರೀತಿ ನಮ್ಮ ನಡುವೆ ಏನೇ ಹೊಂದಾಣಿಕೆ ಇರಬಹುದು. ಅದನ್ನು ಸಾರ್ವಜನಿಕವಾಗಿ ನಾವು ಸ್ಪಷ್ಟಪಡಿಸಬೇಕಿಲ್ಲ.

‘ರಕ್ಷಿತ್​ ಅವರಂತಹ ವ್ಯಕ್ತಿ ಬಗ್ಗೆ ಯಾವುದೇ ಸುದ್ದಿ ಸಂಸ್ಥೆ ಈ ರೀತಿಯ ವರದಿ ಪ್ರಸಾರ ಮಾಡಿದರೆ ನಾನು ವಿರೋಧಿಸುತ್ತೇನೆ. ಎಲ್ಲ ಮಾಧ್ಯಮಕ್ಕೂ ಸಾಕಷ್ಟು ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಇದೆ. ನಾವು ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗುತ್ತದೆ. ಮತ್ತೆ ಭವಿಷ್ಯದಲ್ಲಿ ಈ ರೀತಿ ಮಾಡಬಾರದು ಎಂದು ವಿನಂತಿಸಿಕೊಳ್ಳುತ್ತೇನೆಂದು ಪುಷ್ಕರ್ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com