ದರ್ಶನ್-ಪ್ರೇಮ್
ದರ್ಶನ್-ಪ್ರೇಮ್

ದರ್ಶನ್ ಅವ್ರೇ, ನಾನು ಕರಿಯ ಸಿನಿಮಾ ಮಾಡಬೇಕಾದರೆ ಯಾವ್ ಪುಡಂಗ್ ಆಗಿರ್ಲಿಲ್ಲ: ನಿರ್ದೇಶಕ ಪ್ರೇಮ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ದೇಶಕ ಪ್ರೇಮ್ ಹೆಸರು ಉಲ್ಲೇಖಿಸಿ ಅವರೇನ್ ಯಾವ ಪುಡಾಂಗು ಅಲ್ಲ ಎಂಬ ಹೇಳಿಕೆಗೆ ಪ್ರೇಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Published on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ದೇಶಕ ಪ್ರೇಮ್ ಹೆಸರು ಉಲ್ಲೇಖಿಸಿ ಅವರೇನ್ ಯಾವ ಪುಡಾಂಗು ಅಲ್ಲ ಎಂಬ ಹೇಳಿಕೆಗೆ ಪ್ರೇಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಎಂಬ ಖ್ಯಾತ ನಟರು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ದಾರೆ. 

ಇನ್ನು ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗಲು ನನಗ್ ಕೊಂಬು ಬರ್ಲಿಲ್ಲ. ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದಿರುವವನು. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆ ಇದ್ದರು. ಇದರ ಬಗ್ಗೆ ನಿಮಗೂ ಗೊತ್ತು, ನನಗು ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್ ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ದೀವಿ.

ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದರು. ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ.. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ.. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ.. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾ ಗೆ ಹಾರೈಸಿದವನು ನಾನು.

ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು. ಎಲ್ಲರ ಹಾಗೇ ನಾನು ಖುಷಿ ಪಟ್ಟೆ. ಇದರ ಮದ್ಯೆ ನನ್ ಹೆಸರು ಯಾಕೆ. ದರ್ಶನ್ ಅವರೇ ನಿರ್ದೇಶಕರು ಯಾವ್ ಪುಡಂಗಿಗಳು ಅಲ್ಲಾ, ಅವರಿಗೆ ಕೊಂಬು ಇರಲ್ಲ. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವನಿಗೆ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮ್ಗೂ ಗೊತ್ತು. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ..Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡಲಿ ಎಂದು ಸುದೀರ್ಘವಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com