ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾಕ್ಸಮರ ಮುಂದುವರೆದಿದೆ. ಇಂದು ಇಂದ್ರಜಿತ್ ಲಂಕೇಶ್ ಮಾತನಾಡಿ ನಾನು ಕೊಚ್ಚೆಗೆ ಕಲ್ಲು ಎಸೆಯಲ್ಲ ಎಂದು ಹೇಳಿದ್ದಾರೆ.
ನಿನ್ನೆ ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದಿದ್ದ ದರ್ಶನ್, ಅವರು ಗಂಡಸಾಗಿದ್ದರೆ ಆಡಿಯೋ ರಿಲೀಸ್ ಮಾಡಲಿ ಎಂದು ಸವಾಲು ಹಾಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಇಂದ್ರಜಿತ್, ನನಗೆ ದರ್ಶನ್ ಹೇಳಿಕೆಯಿಂದ ಬೇಸರವಾಗಿಲ್ಲ. ಆದರೆ ಮೂರು ಬಿಟ್ಟವರ ಬಗ್ಗೆ ನಾನು ಏನು ಮಾತನಾಡಲಿ? ಕೊಚ್ಚೆಗೆ ಕಲ್ಲು ಎಸೆಯುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ದರ್ಶನ್ ವಿರುದ್ಧ ಸುಮೊಟೊ ಕೇಸ್ ಆಗಿದೆ. ಎಫ್ಐಆರ್ ಕೂಡ ಇದೆ. ಹೀಗಾಗಿ ನಾನು ಲೀಗಲ್ ಆಗಿ ಹೋಗ್ತೀನಿ ಎಂದು ಹೇಳಿದ್ದಾರೆ.
ಇನ್ನು ದರ್ಶನ್ ಮಾನಸಿಕವಾಗಿ ತೊಂದರೆಗೀಡಾಗಿದ್ದಾರೆ. ಅವರು ಚಿಕಿತ್ಸೆ ಪಡೆಯುವುದು ಒಳ್ಳೆಯದ್ದು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
Advertisement