ಪೋಸ್ಟರ್ ಮೂಲಕ ಸದ್ದು ಮಾಡಿದ 'ಝೂ' ಚಿತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಟೀ ಸಪ್ಲೈಯರ್ ಹುಡುಗ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಿನೆಮಾ ಜೊತೆ ಪ್ರಾಣಿ-ಪಕ್ಷಿ ಸಾಕಣೆ, ಹೈನುಗಾರಿಕೆ, ಕೃಷಿ, ಫೋಟೋಗ್ರಫಿ ಹೀಗೆ ಹತ್ತಾರು ವಿಷಯಗಳಲ್ಲಿ ಆಸಕ್ತಿಯಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಮತ್ತು ಅರಣ್ಯ ಇಲಾಖೆಯ ರಾಯಭಾರಿ ಕೂಡ ಆಗಿದ್ದಾರೆ.
ಝೂ ಪೋಸ್ಟರ್
ಝೂ ಪೋಸ್ಟರ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಿನೆಮಾ ಜೊತೆ ಪ್ರಾಣಿ-ಪಕ್ಷಿ ಸಾಕಣೆ, ಹೈನುಗಾರಿಕೆ, ಕೃಷಿ, ಫೋಟೋಗ್ರಫಿ ಹೀಗೆ ಹತ್ತಾರು ವಿಷಯಗಳಲ್ಲಿ ಆಸಕ್ತಿಯಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಮತ್ತು ಅರಣ್ಯ ಇಲಾಖೆಯ ರಾಯಭಾರಿ ಕೂಡ ಆಗಿದ್ದಾರೆ.

ಇದೀಗ ಅವರ ಫೋಟೋ ಮತ್ತು ಕೇರ್ ಆಫ್ ಡಿ ಬಾಸ್ ಎಂಬ ಅಡಿಬರಹದಡಿ ಝೂ ಎಂಬ ಸಿನೆಮಾ ಪೋಸ್ಟರ್ ಬಿಡುಗಡೆಯಾಗಿದೆ. ರಾಜಾಹುಲಿ, ರುದ್ರತಾಂಡವ ಮೊದಲಾದ ಸಿನೆಮಾಗಳನ್ನು ನಿರ್ದೇಶಿಸಿದ್ದ ಗುರು ದೇಶಪಾಂಡೆಯವರು ಝೂ ಸಿನೆಮಾ ನಿರ್ದೇಶಿಸುತ್ತಿದ್ದು ಜಿ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದೆ.

ಚಿತ್ರದ ಪೋಸ್ಟರ್ ಭಾರೀ ಸದ್ದು ಮಾಡುತ್ತಿದೆ. ನವಿಲಿನ ಚಿತ್ರ ಕೂಡ ಇದೆ. ಡಿ ಬಾಸ್ ಮತ್ತು ಪ್ರಾಣಿಗಳ ಮೇಲೆ ಅಪಾರ ಪ್ರೀತಿಯಿರುವ 8 ವರ್ಷದ ಬಾಲಕ ಟೀ ಸಪ್ಲೈ ಮಾಡಲು ಹೋಗುತ್ತಿರುವ ಚಿತ್ರವಿದೆ. ಇಂದು ನಿರ್ದೇಶಕ ಗುರು ದೇಶಪಾಂಡೆಯವರ ಹುಟ್ಟುಹಬ್ಬವಾಗಿದ್ದು ಈ ಸಂದರ್ಭದಲ್ಲಿ ವಿಶೇಷ ಉಡುಗೊರೆಯಾಗಿ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಅಭಿಲಾಶ್ ಛಾಯಾಗ್ರಹಣ ಚಿತ್ರಕ್ಕಿದ್ದು ಆನಂದ್ ಆಡಿಯೊ ಮೋಷನ್ ಪೋಸ್ಟರ್ ಹೊರತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com