ಕೆಜಿಎಫ್-2 ಬಳಿಕ ದಾಖಲೆ ಮೊತ್ತಕ್ಕೆ ಆರ್‌ಆರ್‌ಆರ್ ಆಡಿಯೋ ಹಕ್ಕು ಖರೀದಿಸಿದ ಟಿ ಸಿರೀಸ್ ಲಹರಿ ಸಂಸ್ಥೆ
ಟಾಲಿವುಡ್ ಸಕ್ಸಸ್ ಫುಲ್ ನಿರ್ದೇಶಕರೆಂದೇ ಖ್ಯಾತಿ ಪಡೆದಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಆರ್‌ಆರ್‌ಆರ್ ಚಿತ್ರದ ಆಡಿಯೋ ಹಕ್ಕನ್ನು ಟಿ ಸೀರಿಸ್ ಮತ್ತು ಲಹರಿ ಸಂಸ್ಥೆಗಳು ಜಂಟಿಯಾಗಿ ಖರೀದಿಸಿವೆ.
Published: 27th July 2021 12:31 PM | Last Updated: 27th July 2021 12:31 PM | A+A A-

ಆರ್ ಆರ್ ಆರ್ ಸಿನಿಮಾ ಪೋಸ್ಟರ್
ಹೈದರಾಬಾದ್: ಟಾಲಿವುಡ್ ಸಕ್ಸಸ್ ಫುಲ್ ನಿರ್ದೇಶಕರೆಂದೇ ಖ್ಯಾತಿ ಪಡೆದಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಆರ್‌ಆರ್‌ಆರ್ ಚಿತ್ರದ ಆಡಿಯೋ ಹಕ್ಕನ್ನು ಟಿ ಸೀರಿಸ್ ಮತ್ತು ಲಹರಿ ಸಂಸ್ಥೆಗಳು ಜಂಟಿಯಾಗಿ ಖರೀದಿಸಿವೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್‌ಆರ್‌ಆರ್’ (ರೈಸ್-ರೋರ್-ರಿವೋಲ್ಟ್) ಸಿನಿಮಾದ ಆಡಿಯೊ ಹಕ್ಕುಗಳನ್ನು ಟಿ-ಸೀರಿಸ್ ಹಾಗೂ ಲಹರಿ ಮ್ಯೂಸಿಕ್ ಸಂಸ್ಥೆಗಳು ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿವೆ. ಟಿ-ಸೀರಿಸ್ ಸಂಸ್ಥೆ ಅಧಿಕೃತವಾಗಿ ಟ್ವೀಟ್ ಮಾಡಿ ಆಡಿಯೊ ಹಕ್ಕುಗಳನ್ನು ಖರೀದಿಸಿರುವ ಮಾಹಿತಿಯನ್ನು ಹಂಚಿಕೊಂಡಿದೆ. ಆಡಿಯೊ ಹಕ್ಕು ಖರೀದಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದೆಯಾದರೂ ಅಧಿಕೃತ ಮೊತ್ತವನ್ನು ಬಹಿರಂಗಪಡಿಸಿಲ್ಲ.
Glad to acquire the music rights of India’s Biggest Action Drama, @SSRajamouli’s most awaited @RRRMovie
— T-Series (@TSeries) July 26, 2021
An @MMKeeravaani Musical.
on @TSeries & @LahariMusic#RRRAudioOnTseriesLahari#BhushanKumar #TSeries @tarak9999 @AlwaysRamCharan @ajaydevgn @aliaa08 @DVVMovies pic.twitter.com/3NPCvManpE
ಮೂಲಗಳ ಪ್ರಕಾರ ಈ ಸಿನಿಮಾದ ಆಡಿಯೊ ಹಕ್ಕುಗಳನ್ನು 25 ಕೋಟಿ ರೂಗೆ ಖರೀದಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿಂದೆ ಕೆ.ಜಿ.ಎಫ್-2 ಸಿನಿಮಾದ ಆಡಿಯೊ ಹಕ್ಕು 7.20 ಕೋಟಿ ರೂಗೆ ಮಾರಾಟವಾಗಿತ್ತು.
ಪಂಚ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ಸುಮಾರು 400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಎಂ.ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕುಮರಾಂ ಭೀಮ್ ಅವರ ಜೀವನವನ್ನು ಆಧರಿಸಿದ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಈ ಸಿನಿಮಾವನ್ನು ಬರುವ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.