ಹೆಲ್ಮೆಟ್ ಧರಿಸಿದ್ದರೆ ಸಂಚಾರಿ ವಿಜಯ್ ಬದುಕುಳಿಯುಳಿಸುವ ಸಾಧ್ಯತೆ ಇತ್ತೇ?

ನಟ ಸಂಚಾರಿ ವಿಜಯ್‌ ತಮ್ಮ ಸ್ನೇಹಿತನ ಬೈಕ್‌ನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದಿರುವುದೇ ಅಪಾಯಕ್ಕೆ ಕಾರಣ ಎಂಬುದಾಗಿ ತಿಳಿದು ಬಂದಿದೆ. 

Published: 15th June 2021 07:57 AM  |   Last Updated: 15th June 2021 12:36 PM   |  A+A-


Sanchari vijay

ಸಂಚಾರಿ ವಿಜಯ್

Posted By : Shilpa D
Source : Online Desk

ಬೆಂಗಳೂರು: ನಟ ಸಂಚಾರಿ ವಿಜಯ್‌ ತಮ್ಮ ಸ್ನೇಹಿತನ ಬೈಕ್‌ನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದಿರುವುದೇ ಅಪಾಯಕ್ಕೆ ಕಾರಣ ಎಂಬುದಾಗಿ ತಿಳಿದು ಬಂದಿದೆ. 

‘ಬೈಕ್ ಚಲಾಯಿಸುತ್ತಿದ್ದ ನವೀನ್ ಹಾಗೂ ಹಿಂಬದಿ ಕುಳಿತಿದ್ದ ನಟ ಸಂಚಾರಿ ವಿಜಯ್ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿಯೇ ಬೈಕ್‌ನಿಂದ ಬಿದ್ದ ವಿಜಯ್ ತಲೆಗೆ ತೀವ್ರ ಪೆಟ್ಟು ಬಿದ್ದು ಮಿದುಳು ನಿಷ್ಕ್ರಿಯವಾಗುವ ಹಂತಕ್ಕೆ ಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇನ್ನು, ಬೈಕ್ ಸ್ಕಿಡ್​ ಆಗಿ ಬಿದ್ದಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ನವೀನ್​ ಎಂಬುವವರು ಬೈಕ್​ ಓಡಿಸುತ್ತಿದ್ದರು. ವಿಜಯ್​ ಹಿಂದೆ ಕೂತಿದ್ದರು. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಸ್ಕಿಡ್ ಆದ ಪರಿಣಾಮ ಬೈಕ್ ರಸ್ತೆಯ ಎಡಬದಿಯಲ್ಲಿದ್ದ ಪೋಲ್​ಗೆ ಡಿಕ್ಕಿಯಾಗಿದೆ.

ಈ ವೇಳೆ ವಿಜಯ್ ಬೈಕ್ ನಿಂದ ಹಾರಿ ಬಿದ್ದಿದ್ದಾರೆ. ಸ್ಥಳೀಯರ ಸಹಾಯದಿಂದ ಸಮೀಪದಲ್ಲಿದ್ದ ಅಪಾರ್ಟ್ಮೆಂಟ್​​ನಲ್ಲಿ ಬೈಕ್ ಇರಿಸಿ, ಇಬ್ಬರೂ ಗಾಯಾಳುಗಳನ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ​ ಅವರು ಹೆಲ್ಮೆಟ್​ ಧರಿಸಿದ್ದರೆ ಅವರ ತಲೆಗೆ ಇಷ್ಟೊಂದು ಪೆಟ್ಟು ಬೀಳುತ್ತಿರಲಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿದ್ದರೆ ತಲೆಗೆ ಹೆಚ್ಚು ಪೆಟ್ಟಾಗುತ್ತಿರಲಿಲ್ಲ. ಸವಾರ ನವೀನ್, ಸಂಚಾರ ನಿಯಮಗಳನ್ನು ಪಾಲಿಸಿ ನಿಗದಿತ ವೇಗದಲ್ಲಿ ಬೈಕ್ ಚಲಾಯಿಸಿದ್ದರೂ ಅವಘಡ ಸಂಭವಿಸುತ್ತಿರಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp