ಬೆಳ್ಳಿಪರದೆಯಲ್ಲಿ ನನ್ನ ಸಾಮರ್ಥ್ಯ ಇನ್ನೂ ಸಾಬೀತುಪಡಿಸಬೇಕಾಗಿದೆ: ಶೃತಿ ಪಾಟೀಲ್

ಸದಾ ಕಲಾವಿದೆಯಾಗಬೇಕೆಂದು ಕನಸು ಕಾಣುತ್ತಿದ್ದ ಶೃತಿ ಕನ್ನಡದ ಮಾನಸ ಸರೋವರ ಧಾರಾವಾಹಿ ಮೂಲಕ ಪಾದಾರ್ಪಣೆ ಮಾಡಿದರು.

Published: 15th June 2021 01:00 PM  |   Last Updated: 15th June 2021 01:00 PM   |  A+A-


Sruti Patil

ಶೃತಿ ಪಾಟೀಲ್

Posted By : Shilpa D
Source : Online Desk

8ನೇ ತರಗತಿಯಲ್ಲಿದ್ದಾಗಲೇ ಮಾಡೆಲಿಂಗ್ ಆರಂಭಿಸಿದ ನಟಿ ಶೃತಿ ಪಾಟೀಲ್ ಬೆಳಗಾವಿ ಬ್ಯೂಟಿ ಎಂಬ ಪ್ರಸಿದ್ದಿ ಪಡೆದಿದ್ದಾರೆ. 

ಸದಾ ಕಲಾವಿದೆಯಾಗಬೇಕೆಂದು ಕನಸು ಕಾಣುತ್ತಿದ್ದ ಶೃತಿ ಕನ್ನಡದ ಮಾನಸ ಸರೋವರ ಧಾರಾವಾಹಿ ಮೂಲಕ ಪಾದಾರ್ಪಣೆ ಮಾಡಿದರು.  ಇದರ ಜೊತೆಗೆ ತಮಿಳಿನಲ್ಲಿ ಖುಷ್ಬೂ ನಿರ್ಮಾಣ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ಮಿಸ್ಟರಿ ಮಂಜುಳಾ ಎಂಬ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಶೃತಿ ಪಾಟೀಲ್ ಗೆ ಹಲವು ಅವಕಾಶಗಳು ಒದಗಿ ಬಂದಿವೆ. ಹಲವು ಒಳ್ಳೆಯ ಸಿನಿಮಾಗಳ ಭಾಗವಾಗಿದ್ದೇನೆ, ಅದರ ಹೊರತಾಗಿಯೂ ನಾನು ಬೆಳ್ಳಿ ತೆರೆ ಮೇಲೆ ನನ್ನ ಪ್ರತಿಭೆಯನ್ನು ಸಾಬೀತುಪಡಿಸಬೇಕಾಗಿದೆ ಎಂದು ಶೃತಿ ತಿಳಿಸಿದ್ದಾರೆ. ಲಾಕ್ ಡೌನ್ ನಿಂದಾಗಿ ಶೂಟಿಂಗ್ ಸ್ಥಗಿತಗೊಂಡಿದ್ದು, ಚಿತ್ರೀಕರಣ ಪುನಾರಂಭಗೊಳ್ಳಲು ನಾನು ಕಾಯುತ್ತಿದ್ದೇನೆ.

ಪ್ರವೀಣ್ ಜಯಣ್ಣ ನಿರ್ದೇಶನದ ಮಿಸ್ಟರಿ ಆಫ್ ಮಂಜುಳಾ ಜೊತೆಗೆ ಲೆಮೆನ್ ಪರಶುರಾಮ್ ನಿರ್ದೇಶನದ ಚಿ.ಸೌ ಕನ್ಯಾಕುಮಾರಿ, ಜೆಕೆ ಆದಿ ನಿರ್ದೇಶನದ ಬ್ಲಡ್ ಹ್ಯಾಂಡ್ ಮುಂತಾದ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ ಶೃತಿ.  

ಮತ್ತೊಂದು ಆಸಕ್ತಿದಾಯಕ ಸಿನಿಮಾದಲ್ಲಿ ಶೃತಿ ನವೀನ್ ಎಂಬ ಹೊಸ ನಟನ ಜೊತೆಯಾಗಿದ್ದಾರೆ. ಆರ್ ಚಂದ್ರು ಜೊತೆ ಸಹಾಯಕರಾಗಿ ಕೆಲಸ ಮಾಡಿದ್ದ ನವೀನ್ ಎಂಬ ಚೊಚ್ಚಲ ನಿರ್ದೇಶಕರೊಂದಿಗೆ ಕೈ ಜೋಡಿಸಿದ್ದಾರೆ.

ಇದು ಸ್ವತಂತ್ರ್ಯ ಯೋಜನೆಯಾಗಿದ್ದು. ಪ್ರಾಜೆಕ್ಟ್ ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಶೃತಿ ಹೇಳಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp