ಹಾಸ್ಯ ನಟನ ಮಗ 'ಹಿರೋ' ಆಗುವುದಕ್ಕೆ ಇದು ಸೂಕ್ತ ಸಮಯ: ರಕ್ಷಕ್ ಸೇನಾ

ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸೇನಾ (19) ಚೊಚ್ಚಲ ಬಾರಿಗೆ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ದಿವಂಗತ ತಂದೆಯ ಹೆಸರನ್ನು ಜೀವಂತವಾಗಿಡಬೇಕು ಎಂಬ ಬಯಕೆ ಹೊಂದಿರುವುದಾಗಿ ಸಿನಿ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ರಕ್ಷಕ್ ಸೇನಾ
ರಕ್ಷಕ್ ಸೇನಾ
Updated on

ಬೆಂಗಳೂರು: ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸೇನಾ (19) ಚೊಚ್ಚಲ ಬಾರಿಗೆ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ದಿವಂಗತ ತಂದೆಯ ಹೆಸರನ್ನು ಜೀವಂತವಾಗಿಡಬೇಕು ಎಂಬ ಬಯಕೆ ಹೊಂದಿರುವುದಾಗಿ ಸಿನಿ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಜಡೇಶಾ ಕೆ. ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರದ ಮೂಲಕ ಚೊಚ್ಚಲ ಸಿನಿಮಾದಲ್ಲಿ ರಕ್ಷಕ್ ಸೇನಾ ಅಭಿನಯಿಸುತ್ತಿದ್ದಾರೆ. ಇದು ಕ್ರೀಡಾ ಕಥೆಯಾಗಿದ್ದು, ಶರಣ್ ನಾಯಕ ನಟನಾಗಿರುವ ಈ ಚಿತ್ರದಲ್ಲಿ ರಕ್ಷಕ್ ಪಾತ್ರ ಕೂಡಾ ಪ್ರಮುಖವಾಗಿದೆ. ಇದು ಬೆಳ್ಳಿ ತೆರೆಯಲ್ಲಿ ರಕ್ಷಕ್ ಗೆ ಮೊದಲ ಚಿತ್ರವಾಗಿದೆ ಆದರೆ,ಅವರ ತಂದೆ, ಜನಪ್ರಿಯ ಹಾಸ್ಯನಟ ಬುಲೆಟ್ ಪ್ರಕಾಶ್  ಕಾರಣದಿಂದಾಗಿ ಅವರು ಚಿತ್ರೋದ್ಯಮದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ರಕ್ಷಕ್ ತನ್ನ ತಂದೆಯೊಂದಿಗೆ ಸಂಬಂಧ ಹೊಂದಿರುವ ತಂಡದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತೋಷಗೊಂಡಿದ್ದಾರೆ.

ವಿಭಿನ್ನ ಪಾತ್ರದಲ್ಲಿ ನೋಡಲು ನಮ್ಮ ತಂದೆ ಬಯಸಿದ್ದರು. ಇಂಡಸ್ಟ್ರೀಯ ಅನೇಕ ಹಿರಿಯ ನಟರು ವಿಭಿನ್ನ ಪಾತ್ರದಲ್ಲಿ ಅಭಿನಯಿಸಲು ಸಲಹೆ ನೀಡಿದ್ದಾರೆ. ಇದರಿಂದ ಪಾತ್ರದ ಆಳವನ್ನು ಅರಿಯಲು ನೆರವಾಗಲಿದೆ. ಗುರುಶಿಷ್ಯರು ಚಿತ್ರದಲ್ಲಿನ ನನ್ನ ಪಾತ್ರ ಮೊದಲ ಹೆಜ್ಜೆಯಾಗಲಿದೆ. ಇದು ಹಿರಿಯ ನಟ ಶರಣ್ ಹಾಗೂ ನಿರ್ದೇಶಕ ಜಡೇಶಾ  ತರುಣ್ ಸುಧೀರ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ನೀಡಿದೆ. ಅವರನ್ನು ಚಿಕ್ಕಂದಿನಿಂದಲೂ ನೋಡಿರುವುದಾಗಿ ರಕ್ಷಕ್ ತಿಳಿಸಿದರು.

ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡು ಕ್ಯಾಮರಾ ಎದುರಿಸುವಾಗ ಕೆಲ ಅನುಭವಗಳನ್ನು ಪಡೆದುಕೊಂಡಿರುವುದಾಗಿ ಹೇಳುವ ರಕ್ಷಕ್, ಇತರ ಯೋಜನೆಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದು, ಸ್ಯಾಂಡಲ್ ವುಡ್ ಹಿರೋ ಆಗುವುದು ನನ್ನ ಅಂತಿಮ ಗುರಿ. ಹಿರೋ ಮಕ್ಕಳು ಹಿರೋ ಆಗುವುದನ್ನು ನೋಡಿದ್ದೇನೆ. ವಿಲನ್ ಮಕ್ಕಳು ಕೂಡಾ ಹಿರೋ ಆಗಿದ್ದಾರೆ. ಹಾಸ್ಯ ನಟರ ಮಕ್ಕಳ ನಾಯಕನಾಗುವುದಕ್ಕೆ ಇದು ಸೂಕ್ತ ಸಮಯವಾಗಿದೆ ಎಂದರು.

ಹಣಕ್ಕಾಗಿ ಇಂಡಸ್ಟ್ರಿಗೆ ಬರುತ್ತಿಲ್ಲ. ತಂದೆ ಸತ್ತ ನಂತರ ಅನೇಕ ಜವಾಬ್ದಾರಿಗಳು ನನ್ನ ಮೇಲಿದೆ. ಚಿತ್ರೋದ್ಯಮದಲ್ಲಿ ಇರುವ ಮೂಲಕ ತಂದೆಯ ಹೆಸರನ್ನು ಜೀವಂತವಾಗಿಡಬೇಕು ಎಂಬುದು ನನ್ನ ಬಯಕೆ. ಚಿತ್ರರಂಗದಲ್ಲಿ ಬುಲೆಟ್ ಪ್ರಕಾಶ್ ಮಗ ಎಂದು ಜನ ಗುರುತಿಸಿದರೆ ಅಷ್ಟೇ ಸಾಕು ಎನ್ನುತ್ತಾರೆ ಎನ್ನುತ್ತಾರೆ ರಕ್ಷಕ್ ಸೇನಾ.

15ನೇ ವಯಸ್ಸಿನಿಂದಲೂ ತರಬೇತಿ ಪಡೆಯುತ್ತಿರುವುದಾಗಿ ಹೇಳುವ ರಕ್ಷಕ್, ಕುದುರೆ, ಸವಾರಿ, ಬೈಕ್, ಸ್ವಿಮಿಂಗ್, ಫಿಟ್ನೇಸ್, ಡ್ಯಾನ್ಸ್, ಜಿಮ್ನಾಸ್ಟಿಕ್ ಸೇರಿದಂತೆ ಹಿರೋ ಆಗಲು ಏನೆಲ್ಲಾ ತರಬೇತಿ ಅಗತ್ಯವೋ ಅದೆಲ್ಲವನ್ನು ಪಡೆದಿರುವುದಾಗಿ ಹೇಳಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮಗೆ ಪ್ರೇರಣೆ ಎನ್ನುವ ರಕ್ಷಕ್, ಪ್ರೇಕ್ಷಕರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾಯುತ್ತಿದ್ದೇನೆ. ಅಲ್ಲದೇ, ಮಾಸ್ ಕಥೆಯಲ್ಲಿ ಆಸಕ್ತಿಯಿದೆ. ನಿರ್ದೇಶಕ ಸೂರಿ ಅವರ ಅಭಿಮಾನಿ ಕೂಡಾ ಆಗಿದ್ದು, ಅವರೊಂದಿಗೆ ಕೆಲಸ ಮಾಡುವ ಭರವಸೆಯಲ್ಲಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com