ಪುನೀತ್ ನಟನೆಯ 'ಜೇಮ್ಸ್' ಸಿನಿಮಾ ಶೂಟಿಂಗ್ ಜುಲೈ 5 ರಿಂದ ಆರಂಭ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ಕೂಡ ವಾಪಸ್ ಶೂಟಿಂಗ್ ಗೆ ಮರಳಲು ತಯಾರಿ ನಡೆಸಿದ್ದು, ಜುಲೈ 5 ರಿಂದ ಚಿತ್ರೀಕರಣ ಪುನಾರಾರಂಭಿಸಲಿದೆ.
ಚೇತನ್ ಕುಮಾರ್ ಮತ್ತು ಪುನೀತ್
ಚೇತನ್ ಕುಮಾರ್ ಮತ್ತು ಪುನೀತ್

ಸರ್ಕಾರ ಲಾಕ್ ಡೌನ್ ನಿಯಮ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಸಿನಿಮಾ ತಯಾರಕರು ಮತ್ತೆ ಕೆಲಸ ಆರಂಭಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ಕೂಡ ವಾಪಸ್ ಶೂಟಿಂಗ್ ಗೆ ಮರಳಲು ತಯಾರಿ ನಡೆಸಿದ್ದು, ಜುಲೈ 5 ರಿಂದ ಚಿತ್ರೀಕರಣ ಪುನಾರಾರಂಭಿಸಲಿದೆ.

ಜೇಮ್ಸ್ ಸಿನಿಮಾ ಶೂಟಿಂಗ್ ಶೇ. 70 ರಷ್ಟು ನಡೆದಿದೆ, ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ  ಏಪ್ರಿಲ್ ತಿಂಗಳಲ್ಲಿ 7 ದಿನಗಳ ಶೂಟಿಂಗ್ ನಡೆಸಿದ್ದರು. ಆದರೆ ಉಳಿದ ಭಾಗದ ಶೂಟಿಂಗ್ ಬಾಕಿಯಿತ್ತು, ಅದನ್ನು ಪೂರ್ಣಗೊಳಿಸುವ ವೇಳೆ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಆಕ್ಷನ್ ಕಮರ್ಷಿಯಲ್ ಸಿನಿಮಾದ ಶೇ. 30 ರಷ್ಟು ಭಾಗದ ಶೂಟಿಂಗ್ ಮಾತ್ರ ಉಳಿದಿದೆ.

ಸಿನಿಮಾಗೆ ಪ್ರಸಿದ್ಧ ಸಾಹಸ ನಿರ್ದೇಶಕರಾದ ರಾಮ ಲಕ್ಷ್ಮಣ ಕೊರಿಯೊಗ್ರಫಿ ಮಾಡಿದ್ದಾರೆ. ಹಾಡುಗಳ ಮತ್ತು ಫೈಟಿಂಗ್ ಸನ್ನಿವೇಶ ಬಾಕಿ ಉಳಿದಿದೆ. ಜೇಮ್ಸ್ ಗಾಗಿ ಸ್ಟಂಟ್ ನಿರ್ದೇಶಕರು ರಚಿಸಿದ ಎರಡನೇ ಫೈಟಿಂಗ್ ಇದಾಗಿದೆ. ನಿರ್ಮಾಪಕ ಕಿಶೋರ್ ಪಾತಿಕೊಂಡ, ಪುನೀತ್ ಮತ್ತು ನಿರ್ದೇಶಕ ಚೇತನ್ ಕುಮಾರ್ ಮೊದಲ ಬಾರಿಗೆ ಈ ಸಿನಿಮಾಗಾಗಿ ಒಂದಾಗಿದ್ದಾರೆ. ಜೇಮ್ಸ್ ಸಿನಿಮಾಗೆ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಈ ಹಿಂದೆ ಪುನೀತ್ ಮತ್ತು ಪ್ರಿಯಾ ರಾಜಕುಮಾರ್ ಸಿನಿಮಾದಲ್ಲಿ
ಜೋಡಿಯಾಗಿದ್ದರು.

ಜೇಮ್ಸ್ ಸಿನಿಮಾದಲ್ಲಿ ತೆಲುಗು ನಟ ಮೆಕಾ ಶ್ರೀಕಾಂತ್, ಅನು ಪ್ರಭಾಕರ್, ಆದಿತ್ಯ ಮೆನನ್, ರಂಗಾಯಣ ರಘು ಮತ್ತು ಮುಖೇಶ್ ರಿಷಿ ಸೇರಿದಂತೆ ಪ್ರಮುಖರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com