ದೆಹಲಿ: ಖ್ಯಾತ ಸಿತಾರ್ ಮಾಂತ್ರಿಕ ಪಂಡಿತ್ ದೆಬು ಚೌಧರಿ ಕೋವಿಡ್ ಸೋಂಕಿನಿಂದ ನಿಧನ

ಸಿತಾರ್ ಮಾಂತ್ರಿಕ ಪಂಡಿತ್ ದೆಬು ಚೌಧರಿ ದೆಹಲಿಯ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಕೋವಿಡ್ ಸಂಬಂಧಿ ಸಮಸ್ಯೆಗಳಿಂದ ನಿಧನರಾಗಿದ್ದಾರೆ ಎಂದು ಅವರ ಪುತ್ರ ಪ್ರತೀಕ್ ಚೌಧರಿ ತಿಳಿಸಿದ್ದಾರೆ.
ಸಿತಾರ್ ಮಾಂತ್ರಿಕ ಪಂ.ದೆಬು ಚೌಧರಿ
ಸಿತಾರ್ ಮಾಂತ್ರಿಕ ಪಂ.ದೆಬು ಚೌಧರಿ

ನವದೆಹಲಿ: ಸಿತಾರ್ ಮಾಂತ್ರಿಕ ಪಂಡಿತ್ ದೆಬು ಚೌಧರಿ ದೆಹಲಿಯ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ಕೋವಿಡ್ ಸಂಬಂಧಿ ಸಮಸ್ಯೆಗಳಿಂದ ನಿಧನರಾಗಿದ್ದಾರೆ ಎಂದು ಅವರ ಪುತ್ರ ಪ್ರತೀಕ್ ಚೌಧರಿ ತಿಳಿಸಿದ್ದಾರೆ.

ಪಂಡಿತ್ ದೆಬು ಚೌಧರಿಯವರಿಗೆ 85 ವರ್ಷ ವಯಸ್ಸಾಗಿತ್ತು. ತಮ್ಮ ಫೇಸ್ ಬುಕ್ ಪುಟದಲ್ಲಿ ತಂದೆಯ ನಿಧನ ಸುದ್ದಿಯನ್ನು ಖಚಿತಪಡಿಸಿರುವ ಪುತ್ರ ಪ್ರತೀಕ್ ಚೌಧರಿ, ನನ್ನ ತಂದೆ ಸಿತಾರ್ ಮಾಂತ್ರಿಕ ಪಂಡಿತ್ ದೆಬು ಚೌಧರಿ ಇನ್ನಿಲ್ಲ, ಅವರನ್ನು ಕಳೆದ ಮಧ್ಯರಾತ್ರಿ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಐಸಿಯುಗೆ ವರ್ಗಾಯಿಸಿದ್ದರು. ಅಲ್ಲಿ ಕಳೆದ ಮಧ್ಯರಾತ್ರಿ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದಾರೆ, ಎಷ್ಟೇ ಪ್ರಾರ್ಥನೆ, ಪ್ರಯತ್ನ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

ಖ್ಯಾತ ಸಂಗೀತ ಕಲಾವಿದ ಪುತ್ರ ಪ್ರತೀಕ್, ಸೊಸೆ ರುನಾ, ಮೊಮ್ಮಕ್ಕಳಾದ ರಯಾನ ಮತ್ತು ಅಧಿರಾಜ್ ರನ್ನು ಅಗಲಿದ್ದಾರೆ. ದೆಹಲಿಯ ಗುರು ತೇಗ್ ಬಹದ್ದೂರು ಆಸ್ಪತ್ರೆಗೆ ಅವರು ದಾಖಲಾಗಿದ್ದರು, ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಕಂಡುಬಂದ ಕಾರಣ ಐಸಿಯುಗೆ ದಾಖಲಾಗಿದ್ದರು.

ಖ್ಯಾತ ಸಿತಾರ್ ವಾದಕರಾದ ಉಸ್ತಾದ್ ವಿನಾಯತ್ ಖಾನ್, ಪಂಡಿತ್ ರವಿ ಶಂಕರ್, ನಿಖಿಲ್ ಬ್ಯಾನರ್ಜಿ ಅವರ ಸಮಕಾಲೀನರಾಗಿದ್ದ ಪಂಡಿತ್ ಚೌಧರಿ, ಜೈಪುರ ಸಿನಿಯಾ ಘರಾನ ಸಂಗೀತ ಪರಂಪರೆಗೆ ಸೇರಿದವರಾಗಿದ್ದರು.

ಭಾರತ ಸರ್ಕಾರದ ಪದ್ಮಭೂಷಣ ಮತ್ತು ಪದ್ಮ ಶ್ರೀ ಗೌರವಗಳು ಅವರಿಗೆ ಒಲಿದು ಬಂದಿತ್ತು.

ಶಿಕ್ಷಕ ಮತ್ತು ಬರಹಗಾರರೂ ಆಗಿದ್ದ ಚೌಧರಿಯವರು 6 ಪುಸ್ತಕಗಳನ್ನು ಹಲವು ಪದ್ಯಗಳನ್ನು ಬರೆದಿದ್ದರು. ಮುಶ್ತಾಖ್ ಆಲಿ ಖಾನ್ ಅವರ ಶಿಷ್ಯರಾಗಿದ್ದ ಪಂಡಿತ್ ಚೌಧರಿ 1935ರಲ್ಲಿ ಮೈಮನ್ ಸಿಂಗ್ ಇಂದಿನ ಬಾಂಗ್ಲಾದೇಶದಲ್ಲಿ ಜನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com