ಕೋವಿಡ್ ಸೋಂಕಿಗೆ ಮತ್ತೊಬ್ಬ ಕಲಾವಿದ ಬಲಿ: ತಮಿಳಿನ ಖ್ಯಾತ ಹಾಸ್ಯ ನಟ ಪಾಂಡು ನಿಧನ 

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಪಾಂಡು ಗುರುವಾರ ಕೋವಿಡ್ ಸೋಂಕಿನಿಂದ ನಿಧನ ಹೊಂದಿದ್ದಾರೆ. 74 ವರ್ಷದ ಹಿರಿಯ ನಟ ಪಾಂಡು ಮತ್ತು ಅವರ ಪತ್ನಿಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿತ್ತು.
ತಮಿಳಿನ ಹಾಸ್ಯ ಕಲಾವಿದ ಪಾಂಡು
ತಮಿಳಿನ ಹಾಸ್ಯ ಕಲಾವಿದ ಪಾಂಡು

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಪಾಂಡು ಗುರುವಾರ ಕೋವಿಡ್ ಸೋಂಕಿನಿಂದ ನಿಧನ ಹೊಂದಿದ್ದಾರೆ. 74 ವರ್ಷದ ಹಿರಿಯ ನಟ ಪಾಂಡು ಮತ್ತು ಅವರ ಪತ್ನಿಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿತ್ತು.

ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪಾಂಡು ಅವರ ಪತ್ನಿ ಇನ್ನೂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1970ರಲ್ಲಿ ತಮಿಳಿನಲ್ಲಿ ಜೈಶಂಕರ್-ಮುತ್ತುರಮನ್ ನಟನೆಯ ಮಾನವನ್ ಚಿತ್ರದ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಪಾಂಡು ಅವರು ಗಿಲ್ಲಿ, ಕಾದಲ್ ಕೊಟ್ಟೈ, ಪೊಕ್ಕಿರಿ, ಎಜೈಯಿನ್ ಸಿರಿಪಿಲ್  ಚಿತ್ರಗಳ ಮೂಲಕ ಖ್ಯಾತರಾಗಿದ್ದರು. ಇಂದ ನಿಲೈ ಮಾರುಮ್ ಪಾಂಡು ಅವರು ನಟಿಸಿದ್ದ ಕೊನೆಯ ಚಿತ್ರವಾಗಿದೆ.

ಕ್ಯಾಪಿಟಲ್ ಲೆಟರ್ಸ್ ಎಂಬ ಡಿಸೈನ್ ಕಂಪೆನಿಯನ್ನು ಪಾಂಡು ನಡೆಸುತ್ತಿದ್ದರು. ಎಡಿಎಂಕೆ ಪಕ್ಷದ ಧ್ವಜ ಮತ್ತು ತಮಿಳು ನಾಡು ಪ್ರವಾಸೋದ್ಯಮ ಇಲಾಖೆಯ ಚಿಹ್ನೆಯನ್ನು ಅವರು ವಿನ್ಯಾಸಗೊಳಿಸಿದ್ದು ಪ್ರಸಿದ್ಧಿ ಪಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com