ಸ್ವಾರ್ಥ, ಮೋಸ, ಧನದಾಹಿ ಜಗತ್ತು, ಒಳ್ಳೆಯವರಿಗಲ್ಲ ಇಂದಿನ ಜಗತ್ತು, ಕ್ಷಮೆಯಿರಲಿ: ಜಗ್ಗೇಶ್

ನಟ ಜಗ್ಗೇಶ್ ಅವರ ಆಪ್ತರು ಕೊರೊನಾಗೆ ಬಲಿಯಾಗಿದ್ದಾರೆ, ಈ ಕಾರಣದಿಂದ ಕೆಲ ಸಮಯದವರೆಗೆ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.
ಜಗ್ಗೇಶ್
ಜಗ್ಗೇಶ್

ಬೆಂಗಳೂರು: ನಟ ಜಗ್ಗೇಶ್ ಅವರ ಆಪ್ತರು ಕೊರೊನಾಗೆ ಬಲಿಯಾಗಿದ್ದಾರೆ, ಈ ಕಾರಣದಿಂದ ಕೆಲ ಸಮಯದವರೆಗೆ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.

ಆಪ್ತನ ಮಗನನ್ನು ಕೊರೊನಾ ನುಂಗಿ ಹಾಕಿದೆ. ‘ದುಃಖ ತಡೆಯಲು ಆಗುತ್ತಿಲ್ಲ. ಹಾಗಾಗಿ ಇಲ್ಲಿಂದ ಕೆಲ ದಿನಗಳ ಕಾಲ ದೂರ ಉಳಿಯುವೆ’ ಎಂದು ಟ್ವಿಟರ್​​ನಲ್ಲಿ ಅವರು ಬರೆದುಕೊಂಡಿದ್ದಾರೆ.

ನನ್ನ ಉಸಿರಿನಂತೆ ಬೆನ್ನಿಗೆ ನಿಂತು ನನ್ನ ಬದುಕಿನ ಬಹು ಭಾಗ ಒಡಹುಟ್ಟಿದವನಂತೆ ಬಾಳಿದವ ಮಾದೇಗೌಡ. ಅವನ ಮಗನನ್ನು ಈ ಪೀಡೆರೋಗ ನುಂಗಿಹಾಕಿತು. ಇದ್ದವನು ಒಬ್ಬನೇ ಮಗ ಮಸಣ ಸೇರಿಬಿಟ್ಟ. ಬಹಳ ನೊಂದು ಹೋಗಿರುವೆ. ನನ್ನ ಮಗನಿಗಿಂತ 1 ವರ್ಷ ಕಿರಿಯ. ಅವನಿಗೆ ಮಗಳು ಹುಟ್ಟಿ 6 ತಿಂಗಳು ಆಗಿದೆ. ಮಾದೆಗೌಡ ಈ ದುಃಖವನ್ನು ಹೇಗೆ ಸಹಿಸುತ್ತಾನೆ? ನನ್ನ ದೇಹವೇ ಸುಟ್ಟಂತೆ ಆಗಿದೆ, ಕ್ರೂರವಿಧಿ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

‘ಕೆಲದಿನ ನಾ ಇಲ್ಲಿಂದ ದೂರ ಉಳಿಯುವೆ. ಮಾದೇಗೌಡನ ಮಗನ ಸಾವಿನಿಂದ ನನ್ನ ಮನಸ್ಸು ಒಡೆದು ಚೂರಾಗಿದೆ. ಏನು ಮಾಡಿದರೂ ಸಮಾಧಾನ ಆಗುತ್ತಿಲ್ಲ. ಬಂಗಾರದಂತ ನನ್ನ ಆತ್ಮೀಯ ಹೃದಯಗಳೇ ನಿಮ್ಮ ನೀವು ಕಾಪಾಡಿಕೊಳ್ಳಿ. ಇಂದಿನ ಯಾಂತ್ರಿಕ ಚಿಂತನೆ ಜಗದಲ್ಲಿ ಯಾರು ನಮಗಾಗಿ ಬರರು. ಸ್ವಾರ್ಥ, ಮೋಸ, ಧನದಾಹಿ ಜಗತ್ತು. ಒಳ್ಳೆಯವರಿಗಲ್ಲ ಇಂದಿನ ಜಗತ್ತು, ಕ್ಷಮೆಯಿರಲಿ’ ಎಂದು ಜಗ್ಗೇಶ್​ ಬೇಸರ ಹೊರ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com