ಉಜ್ವಲ ಭವಿಷ್ಯ ರೂಪಿಸಲು ಪ್ರಯಾಣ ಪುನರಾರಂಭಿಸುತ್ತೇವೆ, ಸಹಕಾರ ನೀಡಿ: ಪಿಆರ್ ಕೆ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಮನವಿ
ಕನ್ನಡಿಗರ ಕಣ್ಮಣಿ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್(Puneet Rajkumar) ಹಠಾತ್ ನಿಧನರಾಗಿ ಇಂದು ಶನಿವಾರಕ್ಕೆ 23 ದಿನಗಳಾಗುತ್ತಿದೆ. ಈ ಸಂದರ್ಭದಲ್ಲಿ ಅವರು ಮಾಡಿರುವ ಕಲಾಸೇವೆ, ಸಮಾಜ ಸೇವೆಗಳ ಬಗ್ಗೆ ಚರ್ಚೆ ಒಂದೆಡೆಯಾದರೆ 2016ರಲ್ಲಿ ಅವರು ಸ್ಥಾಪಿಸಿದ್ದ ಪಿಆರ್ ಕೆ ಪ್ರೊಡಕ್ಷನ್ ಹೌಸ್(PRK production house) ನ ಭವಿಷ್ಯದ ಬಗ್ಗೆ ಕೂಡ ಅಭಿಮಾನಿಗ
Published: 20th November 2021 12:38 PM | Last Updated: 20th November 2021 01:21 PM | A+A A-

ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ(ಸಂಗ್ರಹ ಚಿತ್ರ)
ಬೆಂಗಳೂರು: ಕನ್ನಡಿಗರ ಕಣ್ಮಣಿ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್(Puneet Rajkumar) ಹಠಾತ್ ನಿಧನರಾಗಿ ಇಂದು ಶನಿವಾರಕ್ಕೆ 23 ದಿನಗಳಾಗುತ್ತಿದೆ. ಈ ಸಂದರ್ಭದಲ್ಲಿ ಅವರು ಮಾಡಿರುವ ಕಲಾಸೇವೆ, ಸಮಾಜ ಸೇವೆಗಳ ಬಗ್ಗೆ ಚರ್ಚೆ ಒಂದೆಡೆಯಾದರೆ 2016ರಲ್ಲಿ ಅವರು ಸ್ಥಾಪಿಸಿದ್ದ ಪಿಆರ್ ಕೆ ಪ್ರೊಡಕ್ಷನ್ ಹೌಸ್(PRK production house) ನ ಭವಿಷ್ಯದ ಬಗ್ಗೆ ಕೂಡ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ನಿಧನ ನಂತರ ಪ್ರೊಡಕ್ಷನ್ ಹೌಸ್ ನ ಕೆಲಸ ಕಾರ್ಯಗಳು ನಿಲ್ಲುವುದಿಲ್ಲ, ಅಪ್ಪು ಅವರ ಕನಸುಗಳನ್ನು ಸಾಕಾರಗೊಳಿಸಲು ಮುಂದುವರಿದುಕೊಂಡು ಹೋಗುತ್ತವೆ ಎಂದು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುವುದಲ್ಲದೆ ಅದರ ಜವಾಬ್ದಾರಿಯನ್ನು ಪತಿಯ ಅಗಲುವಿಕೆಯ ನಂತರ ವಹಿಸಿಕೊಂಡಿದ್ದಾರೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಉತ್ಸಾಹ ಮೂಡಿಸುವ ಸುದ್ದಿಯನ್ನು ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ನೀಡಿದ್ದಾರೆ.
ಹಿಂದೆ ನಡೆದುಹೋಗಿರುವ ಘಟನೆಯನ್ನು ಬದಲಾಯಿಸುವುದು ಅಸಾಧ್ಯವಾಗಿದೆ. ಆದರೆ ಪುನೀತ್ ಅವರಿದ್ದಾಗ ಅವರು ನೀಡಿರುವ ಉತ್ಸಾಹ, ಸ್ಪೂರ್ತಿಯೊಂದಿಗೆ ಪಿಆರ್ ಕೆ ಪ್ರೊಡಕ್ಷನ್ ಮತ್ತು ಪಿಆರ್ ಕೆ ಆಡಿಯೊ ಸಂಸ್ಥೆಗಳ ಕೆಲಸ ಕಾರ್ಯಗಳು ಮುಂದುವರಿಯಲಿದ್ದು ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ನಿಮ್ಮೆಲ್ಲರ ಬೆಂಬಲ ಬೇಕು ಎಂದು ಜನರಲ್ಲಿ, ಅಭಿಮಾನಿಗಳಲ್ಲಿ ಅಶ್ವಿನಿ ಮನವಿ ಮಾಡಿಕೊಂಡಿದ್ದಾರೆ.
— PRK Productions (@PRK_Productions) November 19, 2021