ನಿರ್ದೇಶಕ ಪವನ್ ಒಡೆಯರ್ ರೆಮೋ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರತಂಡ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಟೀಸರ್ ಇಂಡೋ-ವೆಸ್ಟರ್ನ್ ಟಚ್ ಹೊಂದಿದೆ, ರೆಮೋ ಪಾತ್ರದಲ್ಲಿ ಇಶಾನ್ ಮತ್ತು ಮೋಹನಾ ಪಾತ್ರದಲ್ಲಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕರು ಸದ್ಯ ಇಂಟ್ರಡಕ್ಷನ್ ಸಾಂಗ್ ರಿಲೀಸ್ ಮಾಡಲು ಸಿದ್ಧರಾಗಿದ್ದು, ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ರೆಮೋ ಸಿನಿಮಾ ರಿಲೀಸ್ ಗಾಗಿ ಯೋಜನೆ ರೂಪಿಸಲಾಗುತ್ತಿದೆ.
ಮ್ಯೂಸಿಕಲ್ ರೋಮ್ಯಾಂಟಿಕ್ ಸಿನಿಮಾವನ್ನು ಹಲವು ಭಾಷೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡಲು ನಿರ್ದೆಶಕರು ಸಿದ್ಧತೆ ನಡೆಸುತ್ತಿದ್ದಾರೆ, ಸಂಕ್ರಾಂತಿ ಸಂದರ್ಭದಲ್ಲಿ ಕನ್ನಡದ ಬೇರೆ ಯಾವುದೇ ಸಿನಿಮಾ ರಿಲೀಸ್ ಆಗದಿರುವ ಕಾರಣ ಬೇರೆ ಭಾಷೆ ಸಿನಿಮಾಗಳು ರೆಮೋಗೆ ಸ್ಪರ್ಧೆ ನೀಡುವ ಸಾಧ್ಯತೆಯಿದೆ.
ಆದರೆ ಸಂಕ್ರಾಂತಿ ರಿಲೀಸ್ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯ ಟೀಸರ್ ಬಿಡುಗಡೆಯಾಗಿದ್, ಇದಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ, ನಾವು ವಿಡಿಯೋ ಸಾಂಗ್ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ, ಶೀಘ್ರವೇ ರಿಲೀಸ್ ದಿನಾಂಕದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ.
ಸಿ ಆರ್ ಮನೋಹರ್ ನಿರ್ಮಾಣ ಮಾಡಿರುವ ರೆಮೋ ಸಿನಿಮಾದಲ್ಲಿ ಮಧೂ, ಶರತ್ ಕುಮಾರ್, ಅಚ್ಯುತಕುಮಾರ್ ಮತ್ತು ರಾಜೇಶ್ ನಟರಂಗ ಅಭಿನಯಿಸಿದ್ದಾರೆ,. ಅರ್ಜುನ್ ಜನ್ಯ ಸಂಗೀತ ನೀಡಿದ್ದು ಸಿನಿಮಾವನ್ನು ವಿದೇಶಗಳಲ್ಲಿ ಶೂಟಿಂಗ್ ನಡೆಸಲಾಗಿದೆ.
Advertisement