ಹೈದರಾಬಾದ್: ತೆಲುಗು ನಟಿ ಅನುರಾಧಾ ಆತ್ಮಹತ್ಯೆಗೆ ಶರಣು
ತೆಲುಗು ಸಿನಿಮಾಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದ ಅನುರಾಧಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಫಿಲ್ಮ್ ನಗರ್‌ನಲ್ಲಿ ಅನುರಾಧಾ ನೇಣಿಗೆ ಶರಣಾಗಿದ್ದಾರೆ.
Published: 01st October 2021 09:20 AM | Last Updated: 01st October 2021 09:20 AM | A+A A-

ಅನುರಾಧಾ
ತೆಲುಗು ಸಿನಿಮಾಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದ ಅನುರಾಧಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಫಿಲ್ಮ್ ನಗರ್‌ನಲ್ಲಿ ಅನುರಾಧಾ ನೇಣಿಗೆ ಶರಣಾಗಿದ್ದಾರೆ.
ಹೈದರಾಬಾದ್‌ನ ಫಿಲ್ಮ್ ನಗರ್‌ನಲ್ಲಿರುವ ಗ್ಯಾನಿ ಜೈಲ್ ಸಿಂಗ್ ನಗರದಲ್ಲಿನ ತಮ್ಮ ನಿವಾಸದಲ್ಲಿ ಅನುರಾಧಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನುರಾಧಾ ಕಳೆದ ನಾಲ್ಕು ದಿನಗಳಿಂದ ಮನೆಯಿಂದ ಹೊರಬಂದಿರಲಿಲ್ಲ. ಸಾಲದಕ್ಕೆ, ಅನುರಾಧಾ ನಿವಾಸದಿಂದ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಅಕ್ಕ-ಪಕ್ಕದವರು ಮನೆಯ ಮಾಲೀಕರ ಗಮನಕ್ಕೆ ತಂದರು. ಬಳಿಕ ಪೊಲೀಸರಿಗೂ ಮಾಹಿತಿ ನೀಡಲಾಯಿತು. ಪೊಲೀಸರು ಮನೆಗೆ ಭೇಟಿ ಕೊಟ್ಟಾಗ ಕೋಣೆಯಲ್ಲಿ ಅನುರಾಧಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಫ್ಯಾನ್‌ನಲ್ಲಿ ನೇತಾಡುತ್ತಿತ್ತು.
ತೆಲುಗಿನ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಅನುರಾಧಾ ಕೆಲಸ ಮಾಡುತ್ತಿದ್ದರು, ಅನುರಾಧಾ ಕಳೆದ ಆರು ವರ್ಷಗಳಿಂದ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದರು, ಆದರೆ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದ ಕಾರಣ ಬೇರಾಗಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.