ವಿಜಯ್ ಪ್ರಕಾಶ್ ಹಾಡಿರುವ ಕಲಾವಿದನ ಸೋಲು ಗೆಲುವು ಕುರಿತ 'ಆರಾಮ್ಸೆ' ಆಲ್ಬಂ ಸಾಂಗ್ ವೈರಲ್
ಬೆಂಗಳೂರು: ಮಾಯಾನಗರಿ ಎಂದು ಕರೆಸಿಕೊಳ್ಳುವ ಸಿನಿಮಾ ರಂಗದಲ್ಲಿ ಕೆಲವರು ರಾತ್ರೋರಾತ್ರಿ ಸ್ಟಾರ್ ಆದರೆ, ಇನ್ನು ಕೆಲವರು ಪ್ರತಿಭೆ ಇದ್ದರೂ ಅವಕಾಶ ಸಿಗದೇ ಕಣ್ಮರೆಯಾಗುತ್ತಾರೆ. ಹೀಗೆ ಕನಸುಗಳನ್ನು ಹೊತ್ತು ಚಿತ್ರರಂಗಕ್ಕೆ ಬರುವ ಕಲಾವಿದನ ಮನಸ್ಸಿನ ತೊಳಲಾಟವನ್ನು ವಿವರಿಸುವ ವಿಡಿಯೋ ಆಲ್ಬಮ್ ಆರಾಮ್ಸೆ (Aaramse) ಸದ್ಯ ಯೂಟ್ಯೂಬ್‍ನಲ್ಲಿ (You Tube) ವೈರಲ್ ಆಗಿದೆ.
ಅಭಿಷೇಕ್ ಮಠದ್ ಅವರು ಈ ಹಾಡನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. 'ಜೀವನದಲ್ಲಿ ಎಷ್ಟೋ ತಿರಸ್ಕಾರಗಳು ಬರುತ್ತವೆ. ಅಂದ ಮಾತ್ರಕ್ಕೆ ಬದುಕನ್ನು ಕೈಬಿಡಬಾರದು. ಇಲ್ಲಿಯೇ ಮುಂದುವರಿಯಬೇಕು ಎನ್ನುವ ಅಂಶ ಹಾಡಿನಲ್ಲಿದೆ.
ಸ್ಯಾಂಡಲ್‌ವುಡ್ ಸೇರಿದಂತೆ ಬಹುಭಾಷೆಯಲ್ಲಿ ಗಾಯಕರಾಗಿ ಗುರುತಿಸಿಕೊಂಡಿರುವ ವಿಜಯ ಪ್ರಕಾಶ್, ಈ ಹಾಡಿಗೆ ಧ್ವನಿ ನೀಡಿದ್ದಾರೆ.
'ಈ ಹಾಡಿನ ಸಾಹಿತ್ಯ ವಿಜಯ್ ಪ್ರಕಾಶ್ ಅವರಿಗೆ ಇಷ್ಟವಾಗಿ, ಅವರು ಖುಷಿಯಿಂದ ಹಾಡಿದರು. ನಂತರ ಈ ಹಾಡನ್ನು ಚಿತ್ರೀಕರಣ ಮಾಡಿದ ರೀತಿಗೆ ಅವರು ಸಂತಸ ವ್ಯಕ್ತಪಡಿಸಿದರು. ಗಾಯಕ ವಿಜಯ್ ಪ್ರಕಾಶ್ ನಮಗೆ ಬಹಳ ಬೆಂಬಲ ನೀಡಿದರು' ಎನ್ನುತ್ತಾರೆ ಅಭಿಷೇಕ ಮಠದ್.
ಅಭಿಷೇಕ್ ಈ ಹಿಂದೆ ದಿಗಂತ್ ಜೊತೆಗೆ ಒಂದು ಮ್ಯೂಸಿಕ್ ವಿಡಿಯೋ ಮಾಡಿದ್ದರು. ಅದಕ್ಕೆ ಅವರೇ ನೃತ್ಯ ನಿರ್ದೇಶನ ಮಾಡಿದ್ದರು. ನಂತರ ಚಂದನ್ ಶೆಟ್ಟಿ ಜೊತೆಗೆ ಟಕಿಲಾ, ಬಡಪಾಯಿ ಕುಡುಕ ಸಾಂಗ್‌ಗಳನ್ನು ಮಾಡಿದ್ದಾರೆ. ಈಚೆಗೆ ಅದಿತಿ ಪ್ರಭುದೇವ ಅವರೊಂದಿಗೆ ಪರ್ಫೆಕ್ಟ್ ಗರ್ಲ್ ಎಂಬ ಸಾಂಗ್ ಮಾಡಿದ್ದರು ಅಭಿಷೇಕ್. ಸದ್ಯ ಬಳೆಪೇಟೆ ಮತ್ತು ಸಮುದ್ರಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
Related Article
ಸ್ಯಾಂಡಲ್ ವುಡ್ ಕಲಾವಿದರ ಕ್ರಿಕೆಟ್ ಪಂದ್ಯಾವಳಿ 'ಬಾಕ್ಸ್ ಕ್ರಿಕೆಟ್ ಲೀಗ್'ಗೆ ಚಾಲನೆ
ಪಿ.ಟಿ ಟೀಚರ್ ಶರಣ್ 'ಗುರು ಶಿಷ್ಯರು' ಸಿನಿಮಾದಲ್ಲಿ ಗಾಂಧಿ ತತ್ವ ಸಾರಲಿರುವ ಸುರೇಶ್ ಹೆಬ್ಳೀಕರ್
ಶೀಘ್ರದಲ್ಲೇ 'ಕಬ್ಜ' ಐದನೇ ಹಂತದ ಚಿತ್ರೀಕರಣ" ಆರಂಭ
ವಿಜಯಲಕ್ಷ್ಮಿಗೆ ಕನ್ನಡಿಗರಿಂದ ಲಕ್ಷಾಂತರ ರೂ. ಸಹಾಯ; ನನ್ನ ಸುತ್ತ ಈಗ ಸ್ಟ್ರಾಂಗ್ ಫ್ಯಾಮಿಲಿ ಇದೆ ಎಂದ 'ನಾಗಮಂಡಲ' ನಟಿ
ನಟ ನೀನಾಸಂ ಸತೀಶ್ ಅವರಿಗೆ ಮಾತೃ ವಿಯೋಗ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ