ಕೊನೆಗೂ ವದಂತಿಗೆ ಫುಲ್ ಸ್ಟಾಪ್: 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ಸಮಂತಾ-ನಾಗಚೈತನ್ಯ 

ಟಾಲಿವುಡ್ ನ ಕ್ಯೂಟ್ ಜೋಡಿ ಎಂದೇ ಜನಪ್ರಿಯರಾಗಿದ್ದ ನಾಗಚೈತನ್ಯ ಮತ್ತು ಸಮಂತಾ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಮದುವೆಯಾದ ನಾಲ್ಕು ವರ್ಷಗಳ ನಂತರ ಈ ಜೋಡಿ ಬೇರೆಯಾಗುತ್ತಿದ್ದಾರೆ.
ನಾಗ ಚೈತನ್ಯ-ಸಮಂತಾ ತಮ್ಮ ಖುಷಿಯ ದಿನಗಳಲ್ಲಿ (ಸಂಗ್ರಹ ಚಿತ್ರ)
ನಾಗ ಚೈತನ್ಯ-ಸಮಂತಾ ತಮ್ಮ ಖುಷಿಯ ದಿನಗಳಲ್ಲಿ (ಸಂಗ್ರಹ ಚಿತ್ರ)
Updated on

ಹೈದರಾಬಾದ್: ಟಾಲಿವುಡ್ ನ ಕ್ಯೂಟ್ ಜೋಡಿ ಎಂದೇ ಜನಪ್ರಿಯರಾಗಿದ್ದ ನಾಗಚೈತನ್ಯ ಮತ್ತು ಸಮಂತಾ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಮದುವೆಯಾದ ನಾಲ್ಕು ವರ್ಷಗಳ ನಂತರ ಈ ಜೋಡಿ ಬೇರೆಯಾಗುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿನ ಹೆಸರಿನಿಂದ ಅಕ್ಕಿನೇನಿ ಸರ್ ನೇಮ್ ನ್ನು ಸಮಂತಾ ತೆಗೆದುಹಾಕಿದ ನಂತರ ಅವರಿಬ್ಬರ ದಾಂಪತ್ಯ ಜೀವನ ಬಗ್ಗೆ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಎಲ್ಲಿ ಹೋದರೂ ಈ ಜೋಡಿಯ ವಿಚ್ಛೇದನದ ಬಗ್ಗೆಯೇ ಕೇಳಿಬರುತ್ತಿದ್ದವು.

ಇಬ್ಬರೂ ಬೇರೆಯಾಗುತ್ತಿದ್ದಾರಂತೆ, ಸಂಸಾರದಲ್ಲಿ ಹೊಂದಾಣಿಕೆ ಇಲ್ಲವಂತೆ, ಸಮಂತಾ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರಂತೆ ಎಂಬೆಲ್ಲ ಅಂತೆಕಂತೆಗಳು ದಿನಕ್ಕೊಂದರಂತೆ ಬರುತ್ತಿತ್ತು. ಆದರೆ ಇವರಿಬ್ಬರೂ ಎಲ್ಲಿಯೂ ಇದುವರೆಗೆ ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿರಲಿಲ್ಲ. ಇಬ್ಬರೂ ಬೇರೆಯಾಗದಿರಲಿ ಎಂದು ಅವರ ಅಭಿಮಾನಿಗಳು ಆಶಿಸುತ್ತಿದ್ದರು, ಆದರೆ ಅಭಿಮಾನಿಗಳಿಗೆ ಬೇಸರವನ್ನುಂಟುಮಾಡುವ ಸುದ್ದಿಯನ್ನು ಇಂದು ಇನ್ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾರೆ. 

ಇತ್ತೀಚೆಗೆ ಕೆಲವು ತಿಂಗಳಿನಿಂದ ಸಮಂತಾ-ನಾಗಚೈತನ್ಯ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಪಾರ್ಟಿಗಳಲ್ಲಿ,  ನಾಗಚೈತನ್ಯ ಅವರ ಸಿನೆಮಾ 'ಲವ್ ಸ್ಟೋರಿ' ಬಿಡುಗಡೆ ಸಮಾರಂಭದಲ್ಲಿ, ಸಕ್ಸಸ್ ಪಾರ್ಟಿಯಲ್ಲಿ ಸಹ ಸಮಂತಾ ಗೈರಾಗಿದ್ದರು, ಆಗ ಊಹಾಪೋಹಗಳಿಗೆ ಮತ್ತಷ್ಟು ಇಂಬು ನೀಡಿತ್ತು. ಅದೀಗ ನಿಜವಾಗಿದೆ. 

ಇಂದು ಸೋಷಿಯಲ್ ಮೀಡಿಯಾ ಮೂಲಕ ತಾವು ದೂರವಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಬಹಳ ಯೋಚನೆ ಮಾಡಿ ನಾವು ದೂರವಾಗುತ್ತಿದ್ದೇವೆ, ದಶಕಗಳ ಕಾಲ ನಾವಿಬ್ಬರೂ ಸ್ನೇಹಿತರಾಗಿದ್ದದ್ದು ನಮ್ಮ ಅದೃಷ್ಟವಾಗಿದ್ದು, ಆ ಸಂಬಂಧ ಮುಂದೆಯೂ ಗಟ್ಟಿಯಾಗಿ ಮುಂದುವರಿಯಲಿದೆ ಎಂದು ಭಾವಿಸುತ್ತೇವೆ. ನಮ್ಮ ಕಷ್ಟದ ಸಮಯದಲ್ಲಿ ಸಹಕಾರ ನೀಡಿದ ಮತ್ತು ನಮ್ಮ ಖಾಸಗಿತನವನ್ನು ಗೌರವಿಸಿದ ಸ್ನೇಹಿತರು, ಅಭಿಮಾನಿಗಳು, ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದು ಬರೆದು ಇಬ್ಬರೂ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಮತ್ತೊಂದು ಸಿನಿಜೋಡಿಯ ದಾಂಪತ್ಯ ಜೀವನ ವಿಚ್ಛೇದನದಲ್ಲಿ ಅಂತ್ಯವಾಗಿದೆ. 

ಟಾಲಿವುಡ್ ನ ಜನಪ್ರಿಯ ತಾರೆಯರಾಗಿದ್ದ ನಾಗ ಚೈತನ್ಯ ಮತ್ತು ಸಮಂತಾ ಹಲವು ವರ್ಷಗಳ ಕಾಲ ಪ್ರೀತಿಸಿ 2017ರ ಅಕ್ಟೋಬರ್ 7ರಂದು ಗೋವಾದಲ್ಲಿ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com