ಮಿಮಿಕ್ರಿ ದಯಾನಂದ್ ಚೊಚ್ಚಲ ನಿರ್ದೇಶನದ 'ಅನಿರೀಕ್ಷಿತ' ಚಿತ್ರಕ್ಕೆ ಪ್ರಶಸ್ತಿಯ ಗರಿ!
ಮಿಮಿಕ್ರಿ ದಯಾನಂದ್ ಅವರ ಚೊಚ್ಚಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ಅನಿರೀಕ್ಷಿತ ಚಿತ್ರದ ಛಾಯಾಗ್ರಾಹಕ ಜೀವನ್ ಗೌಡ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Published: 07th October 2021 09:18 PM | Last Updated: 07th October 2021 09:18 PM | A+A A-

ಚಿತ್ರದ ಸ್ಟಿಲ್
ಬೆಂಗಳೂರು: ಮಿಮಿಕ್ರಿ ದಯಾನಂದ್ ಅವರ ಚೊಚ್ಚಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ಅನಿರೀಕ್ಷಿತ ಚಿತ್ರದ ಛಾಯಾಗ್ರಾಹಕ ಜೀವನ್ ಗೌಡ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೇರಳದ 7ನೇ ಕಲಾ ಸ್ವತಂತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ ಸ್ಟಾರ್ ಹಾಲಿವುಡ್ ಅವಾರ್ಡ್ಸ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಸಿನೆಮಾಟೊಗ್ರಫಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈ ಚಿತ್ರವನ್ನು ಎಸ್ ಕೆ ಟಾಕೀಸ್ ಲಾಂಛನದಲ್ಲಿ ಶಾಂತಕುಮಾರ್ ನಿರ್ಮಿಸಿದ್ದಾರೆ. ಮಿಮಿಕ್ರಿ ದಯಾನಂದ್ ಕಥೆ ಬರೆದು ನಿರ್ದೇಶಿಸಿದ್ದರು. ನೆಳ್ಳುಳ್ಳಿ ರಾಜಶೇಖರ್ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.
ಚಿತ್ರದಲ್ಲಿ ಕೇವಲ ಎರಡು ಪಾತ್ರಗಳಿದ್ದು ಮಿಮಿಕ್ರಿ ದಯಾನಂದ್ ಹಾಗೂ ಭಾಮ ಅಭಿನಯಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.