'ವಿಚ್ಛೇದನ, ಸಿಂಗಲ್ ಪೇರೆಂಟ್ ಸುತ್ತ ಶ್ರೀಕೃಷ್ಣ@ಜಿಮೇಲ್.ಕಾಮ್: ಸಂಬಂಧಗಳಿಗೆ ನಿರ್ದೇಶಕ ನಾಗಶೇಖರ್ ಹೊಸ ಆಯಾಮ'

ನಟ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಸದ್ಯ ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ@ಜಿಮೇಲ್​ ಡಾಟ್​ ಕಾಮ್ ಸಿನಿಮಾ ಅಕ್ಟೋಬರ್ 15 ರಂದು ರಿಲೀಸ್ ಆಗಲಿದೆ.
ಭಾವನಾ ಮತ್ತು ಕೃಷ್ಣ
ಭಾವನಾ ಮತ್ತು ಕೃಷ್ಣ

ನಟ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಸದ್ಯ ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ@ಜಿಮೇಲ್​ ಡಾಟ್​ ಕಾಮ್ ಸಿನಿಮಾ ಅಕ್ಟೋಬರ್ 15 ರಂದು ರಿಲೀಸ್ ಆಗಲಿದೆ. ತಮ್ಮ ರೋಮ್ಯಾಂಟಿಕ್ ಕಥೆಯ ಬಗ್ಗೆ ನಿರ್ದೇಶಕ ನಾಗಶೇಖರ್ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.

ಲವ್ ಮಾಕ್ಟೇಲ್ ಸಿನಿಮಾ ಯಶಸ್ಸಿನ ನಂತರ ಕೃಷ್ಣ ಶ್ರೀಕೃಷ್ಣ ಜಿಮೇಲ್​ ಡಾಟ್​ ಕಾಮ್ ಸಿನಿಮಾದಲ್ಲಿ ನಟಿಸಿದ್ದಾರೆ ಜೊತೆಗೆ ಲವ್ ಮಾಕ್ಟೇಲ್ ಮುಂದಿನ ಭಾಗವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೀಗಿದ್ದರೂ ತಾವು ಸಿನಿಮಾ ಒಪ್ಪಿಕೊಂಡ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿರುವದು ಹಾಗೂ ನಾಗಶೇಖರ್ ನಿರ್ದೇಶನ ಮಾಡುತ್ತಿರುವುದು.

ಸಿನಿಮಾದ ಕಥೆಯು ಅಪ್ರತಿಮವಾಗಿದೆ. ಕಾಲೇಜು ಮತ್ತು ಕಚೇರಿಗಳಲ್ಲಿ ಪ್ರೇಮ ಪ್ರಸಂಗಗಳು ನಡೆಯುವುದು ಸಾಮಾನ್ಯ, ಆದರೆ ಶ್ರೀಕೃಷ್ಣ ಜಿಮೇಲ್ ಡಾಟ್ ಕಾಮ್ ಕಥೆ ವಿಭಿನ್ನವಾಗಿದೆ. ಸಿಂಗಲ್ ಪೇರೆಂಟ್ ಮಹಿಳೆಯ ಬಾಳಲ್ಲಿ ಬ್ಯಾಚುಲರ್ ಪ್ರವೇಶವಾಗಿ ನಂತರ ಮುಂದೆ ಹೇಗೆ ಕಥೆ ಸಾಗುತ್ತದೆ ಎಂಬುದು ತಿರುಳು.

ಈ ಚಿತ್ರದಲ್ಲಿ ಕೃಷ್ಣ ಒಬ್ಬ ಸ್ಟೀವರ್ಡ್ ಆಗಿ ಮತ್ತು ಭಾವನಾ ವಕೀಲರಾಗಿ ಕಾಣಿಸಿಕೊಳ್ಳಲಿದ್ದಾರೆ. ಮಗುವಿನೊಂದಿಗೆ ನಾನು ಬೆಳೆಸಿಕೊಳ್ಳುವ ಭಾವನಾತ್ಮಕ ಬಾಂಧವ್ಯ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಚಿತ್ರಕ್ಕೆ ಡಬ್ಬಿಂಗ್ ಮಾಡುವಾಗ ನನಗೆ ಉಂಟಾದ ಭಾವನೆಯನ್ನು ಆಧರಿಸಿ ನಾನು ಇದನ್ನು ಹೇಳುತ್ತಿದ್ದೇನೆ. ನಾನು ಬೆಳ್ಳಿತೆರೆಯ ಮೇಲೆ ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ. ನಟ, ಕಳೆದ ಒಂದೂವರೆ ವರ್ಷಗಳಲ್ಲಿ, ಕನಿಷ್ಠ ಒಂದು ಡಜನ್ ಚಿತ್ರಗಳಿಗೆ ಸಹಿ ಹಾಕಿದ್ದಾರೆ.

ಅದೃಷ್ಟವಶಾತ್ ನಾನು ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತೇನೆಎಂದು ಕೃಷ್ಣ ಹೇಳುತ್ತಾರೆ, ಶುಗರ್ ಫ್ಯಾಕ್ಟರಿ ನನಗೆ ತುಂಬಾ ಸೊಗಸಾದ ಅನುಭವ  ನೀಡಿದೆ, ದಿಲ್ಪಸಂದ್ ಹಾಸ್ಯಮಯವಾಗಿದೆ. ಲವ್ ಮಿ ಆರ್ ಹೇಟ್ ಮಿ, ಒಂದು ವಿಶಿಷ್ಟ ಕಾಲೇಜು ಕಥೆ ಆಧಾರಿತ ಚಿತ್ರ. ಲವ್ ಮಾಕ್‌ಟೇಲ್ 2 ನನ್ನನ್ನು ಆದಿಯಾಗಿ ಮತ್ತೆ ಹಿಂದಿರುಗಿಸುತ್ತದೆ,   ಒಬ್ಬ ನಟನು ಅನೇಕ ಪಾತ್ರಗಳನ್ನು ನಿರ್ವಹಿಸುತ್ತಿದ್ದರೂ, ಪ್ರತಿಯೊಂದು ಪಾತ್ರವು ತನ್ನದೇ ಆದ ಸಾರವನ್ನು ಹೊಂದಿರುತ್ತದೆ ಕೃಷ್ಣ ಹೇಳಿದ್ದಾರೆ.

ನಿರ್ದೇಶಕ ನಾಗಶೇಖರ್ ಅವರೊಂದಿಗಿನ ತಮ್ಮ ಅನುಭವದ ಬಗ್ಗೆ ಮಾತನಾಡಿರುವ, ಕೃಷ್ಣ ಅವರು ನಿರ್ದೇಶಕರು ಸಂಗೀತ, ಕಥೆ, ಪಾತ್ರ ಮತ್ತು ಅಭಿವ್ಯಕ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂದಿದ್ದಾರೆ. ನಿರ್ದೇಶಕರಾಗಿ ಕೃಷ್ಣನ ಅನುಭವ, ಅವರಲ್ಲಿ ನಟನ ಮೇಲೆ ಪ್ರಭಾವ ಬೀರಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನಟನಾಗಿ ಪ್ರಾಜೆಕ್ಟ್ ಮೇಲೆ ಗಮನ ಹರಿಸಿದ್ದೇನೆ ಎಂದು ಹೇಳಿದ್ದಾರೆ.

ನಾನು ನಿರ್ದೇಶಕರ ದೃಷ್ಟಿಕೋನದಿಂದ ಪ್ರತಿ ದೃಶ್ಯವನ್ನು ನೋಡಿದರೆ, ಬಹುಶಃ ನಾನು ಪ್ರತಿಯೊಂದು ಶಾಟ್‌ನಲ್ಲೂ ವ್ಯತ್ಯಾಸಗಳನ್ನು ಹೊಂದಿರುತ್ತೇನೆ. ಹೀಗಾಗಿ ಪ್ರತಿಯೊಬ್ಬ ನಿರ್ದೇಶಕರು ಸಿನಿಮಾವನ್ನು ನೋಡುವ ತನ್ನದೇ ಆದ ಮಾರ್ಗವನ್ನು ಹೊಂದಿದ್ದಾರೆ ಎಂದು ಕೃಷ್ಣ ಹೇಳಿದ್ದಾರೆ. ಕೃಷ್ಣ ತನ್ನ ಮುಂದಿನ ನಿರ್ದೇಶನದ ಲವ್ ಮಾಕ್‌ಟೇಲ್ 2 ನಿರ್ದೇಶನದತ್ತ ಗಮನ ಹರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com