'ಸೂರಪ್ಪ ಬಾಬು ಯಾರಿಂದ ಈ ತೊಂದರೆಗೆ ಸಿಕ್ಕಿಕೊಂಡರು ಎಂದು ಚೆನ್ನಾಗಿ ಗೊತ್ತಿದೆ, ಅದಕ್ಕೆ ಕಾಲ ಉತ್ತರ ಕೊಡುತ್ತೆ': ಕಿಚ್ಚ ಸುದೀಪ್

ಪೂರ್ವ ನಿಗದಿಯಂತೆ ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ಇಂದು ಗುರುವಾರ ಆಯುಧ ಪೂಜೆ ದಿನ ಬಿಡುಗಡೆಯಾಗಿಲ್ಲ. ತಮ್ಮ ಸ್ಟಾರ್ ನಟನ ಫಸ್ಟ್ ದಿನದ ಫಸ್ಟ್ ಶೋವನ್ನು ನೋಡಬೇಕೆಂದು ಬೆಳ್ಳಂಬೆಳಗ್ಗೆ ಚಿತ್ರಮಂದಿರ ಮುಂದೆ ಜಮಾಯಿಸಿದ ಕಿಚ್ಚನ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.
ಕೋಟಿಗೊಬ್ಬ 3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಮತ್ತು ನಟ ಕಿಚ್ಚ ಸುದೀಪ್
ಕೋಟಿಗೊಬ್ಬ 3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಮತ್ತು ನಟ ಕಿಚ್ಚ ಸುದೀಪ್
Updated on

ಬೆಂಗಳೂರು: ಪೂರ್ವ ನಿಗದಿಯಂತೆ ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ಇಂದು ಗುರುವಾರ ಆಯುಧ ಪೂಜೆ ದಿನ ಬಿಡುಗಡೆಯಾಗಿಲ್ಲ. ತಮ್ಮ ಸ್ಟಾರ್ ನಟನ ಫಸ್ಟ್ ದಿನದ ಫಸ್ಟ್ ಶೋವನ್ನು ನೋಡಬೇಕೆಂದು ನಿದ್ದೆ, ತಿಂಡಿಯನ್ನು ಬಿಟ್ಟು ಬೆಳ್ಳಂಬೆಳಗ್ಗೆ ಚಿತ್ರಮಂದಿರ ಮುಂದೆ ಜಮಾಯಿಸಿದ ಕಿಚ್ಚನ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.

ಥಿಯೇಟರ್ ಮಾಲೀಕರು, ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಕಿಚ್ಚನ ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ಚಿತ್ರ ಏಕೆ ಬಿಡುಗಡೆಯಾಗಲಿಲ್ಲ, ನಾಳೆ ಬೆಳಗ್ಗೆ ಬಿಡುಗಡೆಯಾಗುತ್ತದೆ ಎಂದು ಹೇಳಿ ನಿರ್ಮಾಪಕ ಸೂರಪ್ಪ ಬಾಬು ಈಗಾಗಲೇ ವಿಡಿಯೊ ಮೂಲಕ ನಾಡಿನ ಚಿತ್ರಪ್ರೇಮಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. 

ಇನ್ನು ಈ ಬಗ್ಗೆ ಚಿತ್ರದ ನಾಯಕ ನಟ ಕಿಚ್ಚ ಸುದೀಪ್ ಕೂಡ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಂತರ ವಿಡಿಯೊ ಮೂಲಕ ಮಾತನಾಡಿ ಅವರು, ಸಮಸ್ಯೆ ಬಗ್ಗೆ ಮತ್ತು ನಿರ್ಮಾಪಕ ಸೂರಪ್ಪ ಬಾಬು ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಬಾಬು ಅವರೇ ನಿಮ್ಮ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ.

ನಿರ್ಮಾಪಕ ಸೂರಪ್ಪ ಬಾಬು ಅವರು ಅಪ್‌ಲೋಡ್ ಮಾಡಿರುವ ವಿಡಿಯೋವನ್ನು ನಾನು ನೋಡಿದೆ. ಬಾಬು ನೀವೊಬ್ಬರೇ ಇಲ್ಲ, ನಿನ್ನೆಯಿಂದ ಜಾಕ್ ಮಂಜು ಮುಂತಾದವರು ಕೂಡ ಈ ಸಮಸ್ಯೆಗೆ ಪರಿಹಾರ ಮಾಡಲು ನಿಂತಿಕೊಂಡಿದ್ದಾರೆ. ಯಾರಿಂದ ಈ ತೊಂದರೆ ಆಯ್ತು, ಯಾರಿಂದ ನೀವು ಈ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡ್ರಿ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಕಾಲ ಉತ್ತರ ಕೊಡತ್ತೆ, ಸಿನಿಮಾ ನಾಳೆಯಿಂದ ಭರ್ಜರಿ ಪ್ರದರ್ಶನ ಕಾಣತ್ತೆ, ಅದರಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಎಲ್ಲ ರೀತಿಯಿಂದ ಏನು ಬೇಕೋ ಅಷ್ಟು ಪ್ರಯತ್ನಪಟ್ಟಿದ್ದೇವೆ. ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com