ಕೋಟಿಗೊಬ್ಬ-3 ಬಿಡುಗಡೆ ವಿಳಂಬದ ಹಿಂದೆ ಷಡ್ಯಂತ್ರ: ನಿರ್ಮಾಪಕ ಸೂರಪ್ಪ ಬಾಬು ಗಂಭೀರ ಆರೋಪ
ಕೋಟಿಗೊಬ್ಬ-3 ಬಿಡುಗಡೆ ವಿಳಂಬದ ಹಿಂದೆ ಕೆಲವರ ಷಡ್ಯಂತ್ರವಿದ್ದು, ನಾಳೆ ಬೆಳಗ್ಗೆ 6 ಗಂಟೆಗೇ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.
Published: 14th October 2021 01:14 PM | Last Updated: 15th October 2021 01:16 PM | A+A A-

ನಿರ್ಮಾಪಕ ಸೂರಪ್ಪ ಬಾಬು
ಬೆಂಗಳೂರು: ಕೋಟಿಗೊಬ್ಬ-3 ಬಿಡುಗಡೆ ವಿಳಂಬದ ಹಿಂದೆ ಕೆಲವರ ಷಡ್ಯಂತ್ರವಿದ್ದು, ನಾಳೆ ಬೆಳಗ್ಗೆ 6 ಗಂಟೆಗೇ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.
Requesting all #Sudeepians to calm down and understand the situation...#Kotigobba3 releasing even more grandly tomorrow..
— KICCHA SUDEEP FANS (A)® (@KSFA_Official) October 14, 2021
Fans shows starts from @ 6 AM...
Enjoy the show.. @KicchaSudeep @aanandaaudio@Sai_Eveready @kotigobba3movie
#Kotigobba3FromTomorrow pic.twitter.com/YdlF8pNmHh
‘ಕೋಟಿಗೊಬ್ಬ 3’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಚಿತ್ರ ಬಿಡುಗಡೆಯಾಗುತ್ತಿಲ್ಲ. ಈ ಕುರಿತು ನಿರ್ಮಾಪಕ ಸೂರಪ್ಪ ಬಾಬು ವಿಡಿಯೋ ಮೂಲಕ ಮನವಿ ಮಾಡಿದ್ದು, ವಿತರಕರ ಷಡ್ಯಂತ್ರದಿಂದ ಇಂದು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ನಾಳೆ ಮುಂಜಾನೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಶೋ ಆರಂಭವಾಗಲಿದೆ. ನಾಳೆಯಿಂದ (ಶುಕ್ರವಾರ) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಟಿಗೊಬ್ಬ-3 ಬಿಡುಗಡೆ ವಿಳಂಬಕ್ಕೆ ಇದೇನಾ ಕಾರಣ: ಥಿಯೇಟರ್ ಗಳಲ್ಲಿ ಅಭಿಮಾನಿಗಳ ಆಕ್ರೋಶ, ನಾಳೆ ಚಿತ್ರ ಬಿಡುಗಡೆ
'ಇಂದು ಕೋಟಿಗೊಬ್ಬ3 ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಎಲ್ಲರೂ ನನ್ನನ್ನ ಕ್ಷಮಿಸಿ. ಕೆಲವರ ಷಡ್ಯಂತರದಿಂದ ಕೋಟಿಗೊಬ್ಬ ರಿಲೀಸ್ ಮಾಡಲು ಸಾಧ್ಯವಾಗಿಲ್ಲ. ಈ ಹಿಂದೆಯೂ ಸಾಕಷ್ಟು ಷಡ್ಯಂತರ ಮಾಡಿದ್ದರು. ಈಗಲೂ ಹಾಗೇ ಆಗಿದೆ. ಸುದೀಪ್ ಅಭಿಮಾನಿಗಳು ಕ್ಷಮಿಸಬೇಕು. ನಾಳೆ ಬೆಳಗ್ಗೆ (ಅಕ್ಟೋಬರ್ 15) ಆರು ಗಂಟೆಯಿಂದ ಶೋ ಆರಂಭವಾಗಲಿವೆ ಎಂದು ಹೇಳಿದರು.
ಇದನ್ನೂ ಓದಿ: ಕೋಟಿಗೊಬ್ಬ-3 ಬಿಡುಗಡೆ ವಿಳಂಬ: ಅಭಿಮಾನಿಗಳ ಕ್ಷಮೆ ಕೋರಿದ ಸುದೀಪ್
ಅಂತೆಯೇ ಈ ಕುರಿತು ಸುದೀಪ್ ಅವರಲ್ಲೂ ಕ್ಷಮೆ ಕೋರಿರುವ ಸೂರಪ್ಪ ಬಾಬು, ಅಭಿಮಾನಿಗಳಿಗೆ ಅವರು ಟ್ವೀಟ್ ಮೂಲಕ ಮಾಹಿತಿ ನೀಡಬೇಕೆಂದು ಕೋರಿದ್ದಾರೆ.
ಸುದೀಪ್ ಟ್ವೀಟ್
— Kichcha Sudeepa (@KicchaSudeep) October 14, 2021