ಕೋಟಿಗೊಬ್ಬ-3 ಬಿಡುಗಡೆ ವಿಳಂಬಕ್ಕೆ ಇದೇನಾ ಕಾರಣ?: ಥಿಯೇಟರ್ ಗಳಲ್ಲಿ ಅಭಿಮಾನಿಗಳ ಆಕ್ರೋಶ, ನಾಳೆ ಚಿತ್ರ ಬಿಡುಗಡೆ

ನಟ ಕಿಚ್ಚಾ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ರಿಲೀಸ್ ತಡವಾಗಿದ್ದು, ಕಾರಣಾಂತರಗಳಿಂದ ಇಂದು ತೆರೆಕಾಣಬೇಕಿದ್ದ ಚಿತ್ರ ಇನ್ನೂ ತೆರೆಕಂಡಿಲ್ಲ.
ಥಿಯೇಟರ್ ಗಳಲ್ಲಿ ಸುದೀಪ್ ಅಭಿಮಾನಿಗಳ ದಂಡು (ಸಂಗ್ರಹ ಚಿತ್ರ)
ಥಿಯೇಟರ್ ಗಳಲ್ಲಿ ಸುದೀಪ್ ಅಭಿಮಾನಿಗಳ ದಂಡು (ಸಂಗ್ರಹ ಚಿತ್ರ)

ಬೆಂಗಳೂರು: ನಟ ಕಿಚ್ಚಾ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ರಿಲೀಸ್ ತಡವಾಗಿದ್ದು, ಕಾರಣಾಂತರಗಳಿಂದ ಇಂದು ತೆರೆಕಾಣಬೇಕಿದ್ದ ಚಿತ್ರ ಇನ್ನೂ ತೆರೆಕಂಡಿಲ್ಲ.

ಕೋವಿಡ್ ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ಚಿತ್ರಮಂದಿರೆ ತೆರೆಯಲು ಅನುಮತಿ ದೊರೆತಿದ್ದು, ಇದೇ ಖುಷಿಯಲ್ಲಿ ತಮ್ಮ ನೆಚ್ಚಿನ ನಟ ಚಿತ್ರ ನೋಡಲು ಬಂದಿದ್ದ ಸುದೀಪ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದ್ದು. ಚಿತ್ರಮಂದಿರಗಳಲ್ಲಿ ಇನ್ನೂ ಚಿತ್ರ ತೆರೆಕಂಡಿಲ್ಲ. ಅಲ್ಲದೆ ಇಂದು ಚಿತ್ರ ತೆರೆಕಾಣುವುದೇ ಅನುಮಾನ ಎಂಬ ಮಾತುಗಳೂ ಕೇಳಿಬರುತ್ತಿದೆ.

ವಿಳಂಬಕ್ಕೆ ಕಾರಣವೇನು?
ಈ ಹಿಂದೆಯೇ ಕೋಟಿಗೊಬ್ಬ-3 ಚಿತ್ರದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆದರೆ ಈಗ ಚಿತ್ರದ ನೆಗೆಟಿವ್ ರೈಟ್ಸ್ ಬಗ್ಗೆ ಚಕಾರವೆತ್ತಿದ್ದು, ಈ ಸಂಬಂಧ ನಿರ್ಮಾಪಕ ಸೂರಪ್ಪ ಬಾಬು ಅವರು ಹೈದರಾಬಾದ್ ನಲ್ಲಿ ಮೊಕ್ಕಾಂ ಹೂಡಿ ನಿರಂತರ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದರೇ ಚಿತ್ರತಂಡ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಚಿತ್ರ ಬಿಡುಗಡೆಗೆ ಸಿದ್ದವಾಗಿತ್ತೇ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಈಗಾಗಲೇ ಚಿತ್ರಕ್ಕೆ ಸಂಬಂಧಿಸಿದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದ್ದ ಚಿತ್ರತಂಡ ಅಂತಿಮ ಹಂತದಲ್ಲಿ ಈ ಕೆಲಸಕ್ಕೆ ಮುಂದಾಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಥಿಯೇಟರ್ ಗಳ ಮುಂದೆ ಅಭಿಮಾನಿಗಳ ದಂಡು
ಇಂದು ಬೆಳಗ್ಗೆ ರಾಜ್ಯದ ಹಲವಾರು ಥಿಯೇಟರ್‍ಗಳಲ್ಲಿ ಚಿತ್ರ ಬಿಡುಗಡೆಾಗುತ್ತದೆ ಎಂದು ಸಾವಿರಾರು ಅಭಿಮಾನಿಗಳು ಥಿಯೇಟರ್ ಗಳತ್ತ ಬಂದಿದ್ದರು. ಬೆಳಗ್ಗೆ 7 ಗಂಟೆಯ ಪ್ರದರ್ಶನಕ್ಕೆ ನಿನ್ನೆಯೇ ಟಿಕೆಟ್‍ಗಳು ಸೋಲ್ಡ್‍ಔಟ್ ಆಗಿದ್ದವು. ಹಾಗಾಗಿ ಅಭಿಮಾನಿಗಳು ಮುಂಜಾನೆಯೇ ಥಿಯೇಟರ್ ಮುಂದೆ ಜಮಾಯಿಸಿದ್ದರು. ತಾಂತ್ರಿಕ ಕಾರಣಗಳಿಂದಾಗಿ ಚಿತ್ರ ಬಿಡುಗಡೆ ಸಾಧ್ಯವಾಗಲಿಲ್ಲ. ಬಳಿಕ 10 ಗಂಟೆಗೆ ಪ್ರದರ್ಶನ ಏರ್ಪಡಿಸುವುದಾಗಿ ಚಿತ್ರ ತಂಡ ಸಮಾಜಾಯಿಷಿ ಮಾಡಿತು. ಆದರೆ ಬಹಳ ನಿರೀಕ್ಷೆಯಿಂದ ಥಿಯೇಟರ್‍ಗೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಕೆಲವು ಕಡೆ ಪ್ರತಿಭಟನೆ ನಡೆಸಿದ್ದಾರೆ.

ಆರಂಭದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಚಿತ್ರಬಿಡುಗಡೆ ತಡವಾಗುತ್ತಿದೆ ಎಂದು ಸಬೂಬು ಹೇಳಿದರಾದರೂ, ಬಳಿಕ ಮಾಧ್ಯಮಗಳಲ್ಲಿ ಬಿಡುಗಡೆಗೆ ಇರುವ ತೊಡಕುಗಳು ಬಹಿರಂಗವಾಗಿದೆ. 

ನಾಳೆ ಚಿತ್ರ ಬಿಡುಗಡೆ: ಸೂರಪ್ಪ ಬಾಬು
ಇನ್ನು ನಾಳೆ ಬೆಳಗ್ಗೆ 6 ಗಂಟೆಗೆ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಸೂರಪ್ಪಬಾಬು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com