ಕೋಟಿಗೊಬ್ಬ-3 ನಲ್ಲಿ ಭೂತದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸುದೀಪ್ ನಿರೀಕ್ಷೆಗಳನ್ನು ಹೆಚ್ಚಿಸಿದ್ದಾರೆ.
ಕೋಟಿಗೊಬ್ಬ ಸಿನಿಮಾ ಬಿಡುಗಡೆ ವಿಳಂಬವಾಗಿ ಅ.15 ರಂದು ಬಿಡುಗಡೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬರೊಬ್ಬರಿ 2 ವರ್ಷಗಳ ನಂತರ ಸುದೀಪ್ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು ಸಿನಿಮಾ ಎಕ್ಸ್ ಪ್ರಸ್ ನೊಂದಿಗೆ ಕೋಟಿಗೊಬ್ಬ-3 ಬಗ್ಗೆ ಮಾತನಾಡಿದ್ದಾರೆ.
ಕೋಟಿಗೊಬ್ಬ ಫ್ರಾಂಚೈಸಿಯ 3ನೇ ಸಿನಿಮಾ ಇದಾಗಿದ್ದು ಕೋಟಿಗೊಬ್ಬ-2 ನಲ್ಲಿ ಸತ್ಯ ಹಾಗೂ ಶಿವ ಎಂಬ ಎರಡು ಶೇಡ್ ಗಳಲ್ಲಿ ಸುದೀಪ್ ತೆರೆ ಮೇಲೆ ಬಂದಿದ್ದರು.
ಮೂರನೇ ಸೀಕ್ವೆಲ್ ನಲ್ಲಿ ಸುದೀಪ್ ಭೂತದ ಪಾತ್ರದಲ್ಲಿ ನಟಿಸಿದ್ದಾರೆ. ಕೋಟಿಗೊಬ್ಬ-3 ನೇ ಸಿನಿಮಾವನ್ನು ಮೊದಲ ಬಾರಿ ನಿರ್ದೇಶಕನ ಕ್ಯಾಪ್ ಧರಿಸಿರುವ ಶಿವ ಕಾರ್ತಿಕ್ ನಿರ್ದೇಶಿಸಿದ್ದು, ಸಿ.ಇಗೆ ಸಂದರ್ಶನ ನೀಡಿದ್ದಾರೆ.
ಸಿನಿಮಾದಲ್ಲಿನ ಭೂತ ಆಧುನಿಕ ರಾಬಿನ್ ಹುಡ್ ಮಾದರಿಯದ್ದಾಗಿದೆ. ಈ ಬಗ್ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದು ಅದನ್ನು ಅಭಿಮಾನಿಗಳೇ ಹೇಳಬೇಕು ಎಂದಿದ್ದಾರೆ. ಕೋಟಿಗೊಬ್ಬ-2 ನಲ್ಲಿಯೂ ಅದರ ಮುಖ್ಯ ಪಾತ್ರ ಜನತೆಗೆ ಎಂದಿಗೂ ಒಳಿತನ್ನೇ ಮಾಡುವ ಪಾತ್ರವಾಗಿತ್ತು ಅದೇ ರೀತಿಯಲ್ಲಿ ಕೋಟಿಗೊಬ್ಬ-3 ರ ಪಾತ್ರವೂ ಇದೆ ಎಂದು ಹೇಳಿದ್ದಾರೆ.
ನಿರೀಕ್ಷೆಯೇ ಇಲ್ಲದೇ ಇದ್ದಾಗ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವ ಪ್ರಶ್ನಾರ್ಥಕವಾಗುತ್ತದೆ
"ಕೋಟಿಗೊಬ್ಬ ಒಂದು ಫ್ರಾಂಚೈಸಿ, ಲೆಜೆಂಡ್ ನಟ ವಿಷ್ಣುವರ್ಧನ್ ಅವರ ಮೂಲಕ ಪ್ರಾರಂಭವಾಯಿತು. ಈಗ ಸುದೀಪ್ ವರೆಗೂ ಬಂದಿದೆ. ಒಂದು ಫ್ರಾಂಚೈಸಿ ಮುಂದುವರೆಯುತ್ತಿದೆ ಎಂದರೆ ಅದರ ಅರ್ಥ ಸಿನಿಮಾ ಕ್ಷೇತ್ರದಲ್ಲಿ ಅದು ಉತ್ತಮವಾಗಿ ಪ್ರದರ್ಶನ ಕಂಡಿದೆ ಎಂಬುದಾಗಿದೆ. ಕೋಟಿಗೊಬ್ಬ-3 ಕ್ಕೂ ಇದೇ ಅನ್ವಯವಾಗಲಿದೆ" ಎಂದು ಸುದೀಪ್ ಹೇಳಿದ್ದಾರೆ.
ಸೀಕ್ವೆಲ್ ಗಳಲ್ಲಿ ರಿಸ್ಕ್ ಜಾಸ್ತಿಯಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, ಸಿನಿಮಾನೇ ರಿಸ್ಕ್ ಇರುವ ಉದ್ಯಮ. ಆದರೆ ಸೀಕ್ವೆಲ್ ಗಳಲ್ಲಿ ಮಜವಿರುತ್ತದೆ, ಸಂತಸವಿರುತ್ತದೆ. ಅದರ ಅರ್ಥ ಜನರು ಬಯಸಿದ್ದಾರೆ ಎಂಬುದಾಗಿದೆ. ಹೊಸ ಸಿನಿಮಾಗಳನ್ನು ಮಾಡುವುದರಲ್ಲಿ ಒತ್ತಡವಿರುತ್ತದೆ. ಏಕೆಂದರೆ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಗೊತ್ತಿರುವುದಿಲ್ಲ. ಆದರೆ ಸೀಕ್ವೆಲ್ ಗಳು ಹಾಗಲ್ಲ. ಅದು ವಿರಾಮ ಮತ್ತು ವಿಶ್ರಾಂತಿ ವ್ಯವಹಾರವಾಗಿದೆ. ಎಲ್ಲಾ ಸಿನಿಮಾಗಳಲ್ಲೂ ನಾವು ಎಲ್ಲಾ ರಿಸ್ಕ್ ಗಳನ್ನು ತೆಗೆದುಕೊಳ್ಳುತ್ತೇವೆ. ರಾಕಿ4, ಫಾಸ್ಟ್& ಫ್ಯೂರಿಯಸ್ 9 ಹೀಗೆ... ಹಲವಾರು ಸ್ಪೂರ್ತಿಗಳಿವೆ. ಅದನ್ನು ಹೇಳುತ್ತ, ಸೀಕ್ವೆಲ್ ಗಳು ಹೆಚ್ಚು ನಿರೀಕ್ಷೆ ಹುಟ್ಟಿಸಬೇಕು, ಆಡರೆ ನಮ್ಮನ್ನು ತಡೆಯಬಾರದು. ನಿರೀಕ್ಷೆಗಳು ನಮಗೆ ಅತ್ಯುತ್ತಮವಾಗಿರುವುದನ್ನು ನೀಡುವುದಕ್ಕೆ ಸಹಕಾರಿಯಾಗಿದೆ. ನಿರೀಕ್ಷೆಗಳೇ ಇಲ್ಲದೇ ಇದ್ದಲ್ಲಿ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವ ಪ್ರಶ್ನಾರ್ಥಕವಾಗುತ್ತದೆ" ಎನ್ನುತ್ತಾರೆ ಸುದೀಪ್.
Advertisement