ನಾಗಿಣಿ ಮತ್ತು ರಾಣಿಯ ಪಾತ್ರಗಳಿಂದ ನಾನು ಥ್ರಿಲ್ ಆಗಿದ್ದೇನೆ: ಹರ್ಷಿಕಾ ಪೂಣಚ್ಚ
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಕಾಟೀ, ಹಗ್ಗ ಮತ್ತು ಓ ಪ್ರೇಮ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಇದರ ಜೊತೆಗೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.
Published: 19th October 2021 12:04 PM | Last Updated: 20th October 2021 01:08 PM | A+A A-

ಹರ್ಷಿಕಾ ಪೂಣಚ್ಚ
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಕಾಟೀ, ಹಗ್ಗ ಮತ್ತು ಓ ಪ್ರೇಮ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಇದರ ಜೊತೆಗೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.
ವಿಸ್ತೃತ್ ನಾಯಕ್ ನಿರ್ದೇಶನದ ಕಾಲನಾಗಿಣಿ ಸಿನಿಮಾದಲ್ಲಿ ಎರಡು ಪಾತ್ರಗಳಲ್ಲಿ ಹರ್ಷಿಕಾ ಪೂಣಚ್ಚ ನಟಿಸುತ್ತಿದ್ದಾರೆ. ನಾನು ಸಿನಿಮಾದಲ್ಲಿ 2 ಪಾತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ.
ಇದನ್ನೂ ಓದಿ: ಭೋಜಪುರಿ ಭಾಷೆಯಲ್ಲಿ ಹರ್ಷಿಕಾ ಪೂಣಚ್ಚ ನಟನೆ
ಕಾಲನಾಗಿಣಿ ಸಿನಿಮಾದಲ್ಲಿ ನಾಗಿಣಿ ಮತ್ತು ರಾಣಿ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಹರ್ಷಿಕಾ ತಿಳಿಸಿದ್ದಾರೆ. ಚಿತ್ರತಂಡ ಇತ್ತೀಚೆಗೆ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಸದ್ಯ ಕಾಶ್ಮೀರದಲ್ಲಿ ರಜೆಯಲ್ಲಿರುವ ಹರ್ಷಿಕಾ ಮುಂದಿನ ಶೆಡ್ಯೂಲ್ ನಿಂದ ಚಿತ್ರದ ಸೆಟ್ ಗೆ ಸೇರಿಕೊಳ್ಳಲಿದ್ದು, ಇದು ಅಕ್ಟೋಬರ್ 21 ರಿಂದ ಆರಂಭವಾಗಲಿದೆ.
ಚಿತ್ರದಲ್ಲಿ ರಾಣಿ ಮತ್ತು ನಾಗಿನ್ ಪಾತ್ರದಲ್ಲಿ ನಟಿಸುವುದು ನನ್ನನ್ನು ತುಂಬಾ ರೋಮಾಂಚನಗೊಳಿಸುತ್ತದೆ ಎಂದು ಹರ್ಷಿಕಾ ಹೇಳಿದ್ದಾರೆ. ಮಧುರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ರಕ್ಷಿತಾ ನಿರ್ಮಿಸಿರುವ ಈ ಚಿತ್ರದಲ್ಲಿ ಮನೋಜ್ ಪುತ್ತೂರು ಮತ್ತು ಹರ್ಷಿಕಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಮನೋಜ್ ರಂಗಭೂಮಿ ಕಲಾವಿದರಾಗಿದ್ದು, ಅವರು ತುಳು, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಾಲನಾಗಿಣಿ ಸಿನಿಮಾದಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಉಗ್ರಂ ಮಂಜು, ಮತ್ತು ವಿಜಯ್ ಚೆಂಡೂರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ನಂದು ಸಂಗೀತ ಸಂಯೋಜಿಸಿದ್ದಾರೆ.