ತಿಮ್ಮಯ್ಯ & ತಿಮ್ಮಯ್ಯ ಸಿನಿಮಾದಲ್ಲಿ ಒಂದಾದ ಪಂಚರಂಗಿ ಜೋಡಿ
ತಿಮ್ಮಯ್ಯ ಅಂಡ್ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್ ನಾಗ್ ಅವರು ದಿಗಂತ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಡಿಕೇರಿಯಲ್ಲಿ ಬೇರು ಬಿಟ್ಟ ಕುಟುಂಬದ ಕಥೆಯನ್ನು ಚಿತ್ರ ಹೊಂದಿದೆ.
Published: 20th October 2021 01:37 PM | Last Updated: 20th October 2021 01:37 PM | A+A A-

ಬೆಂಗಳೂರು: ಹಲವು ಸಿನಿಮಾಗಳ ಚಿತ್ರೀಕರಣ ಮುಗಿಸಿರುವ ನಟ ದಿಗಂತ್ ಅಕ್ಟೋಬರ್ 21ರಿಂದ ತಿಮ್ಮಯ್ಯ & ತಿಮ್ಮಯ್ಯ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದಲ್ಲಿ ಅವರು ಹಿರಿಯ ನಟ ಚಿರ ಯೌವ್ವನಿಗ ಅನಂತ್ ನಾಗ್ ಅವರ ಜೊತೆ ಪರದೆ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ದಿಗಂತ್- ಕೆಎಂ ಚೈತನ್ಯ ಕಾಂಬಿನೇಷನ್ ನಲ್ಲಿ ಬರ್ತಿದೆ ಕಾಮಿಡಿ ಸಿನಿಮಾ!
ಕಮರ್ಷಿಯಲ್ ಜಾಹಿರಾತು ನಿರ್ದೇಶಕರಾಗಿ ಕೆಲಸ ಮಾಡಿರುವ ಸಂಜಯ್ ಶರ್ಮಾ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಮೊದಲ್ನೇ ಸಿನಿಮಾ. ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್ ನಾಗ್ ಅವರು ದಿಗಂತ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಡಿಕೇರಿಯಲ್ಲಿ ಬೇರು ಬಿಟ್ಟ ಕುಟುಂಬದ ಕಥೆಯನ್ನು ಚಿತ್ರ ಹೊಂದಿದೆ.
ಇದನ್ನೂ ಓದಿ: ಯೋಗರಾಜ್ ಭಟ್ ನಿರ್ದೇಶನದ ಮುಂದಿನ ಸಿನಿಮಾ 'ಪುಂಡಲೀಕ' ದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರ
ದಿಗಂತ್ ಅವರಿಗೆ ಜೋಡಿಯಾಗಿ ಐಂದ್ರಿತಾ ರೇ ಅವರು ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ನಿಜಬದುಕಿನಲ್ಲೂ ಜೋಡಿಯಾಗಿರುವ ದಿಗಂತ್ ಮತ್ತು ಐಂದ್ರಿತಾ ರೇ, ಇದಕ್ಕೂ ಮುಂಚೆ ಮನಸಾರೆ, ಪಾರಿಜಾತ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಸಿನಿಮಾದಲ್ಲಿ ಶುಭ್ರಾ ಐಯ್ಯಪ್ಪ ಎರಡನೇ ನಾಯಕಿಯಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: 192 ಕಿಮೀ ಸೈಕಲ್ ತುಳಿದ ದಿಗಂತ್!