ಶಿವಾಜಿ ಸುರತ್ಕಲ್-2 ಸಿನಿಮಾ: ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮೇಘನಾ ಗಾಂವ್ಕರ್
ಕಳೆದ ವರ್ಷ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿಯಶಸ್ವಿಯಾಗಿದ್ದ 'ಶಿವಾಜಿ ಸುರತ್ಕಲ್' ಸಿನಿಮಾದ ಮುಂದುವರೆದ ಭಾಗ ಸದ್ಯದಲ್ಲೇ ಆರಂಭವಾಗಲಿದ್ದು, ಈ ಸಿನಿಮಾ ತಂಡವನ್ನು ಈಗ ಮೇಘನಾ ಗಾಂವ್ಕರ್ ಸೇರಿಕೊಂಡಿದ್ದಾರೆ.
Published: 25th October 2021 01:55 PM | Last Updated: 25th October 2021 07:18 PM | A+A A-

ಮೇಘನಾ ಗಾಂವ್ಕರ್
ಕಳೆದ ವರ್ಷ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿಯಶಸ್ವಿಯಾಗಿದ್ದ 'ಶಿವಾಜಿ ಸುರತ್ಕಲ್' ಸಿನಿಮಾದ ಮುಂದುವರೆದ ಭಾಗ ಸದ್ಯದಲ್ಲೇ ಆರಂಭವಾಗಲಿದ್ದು, ಈ ಸಿನಿಮಾ ತಂಡವನ್ನು ಈಗ ಮೇಘನಾ ಗಾಂವ್ಕರ್ ಸೇರಿಕೊಂಡಿದ್ದಾರೆ. ಇದರಲ್ಲಿಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.
ಚಿತ್ರತಂಡಕ್ಕೆ ಮೇಘನಾ ಗಾಂವ್ಕರ್ ಹೊಸ ಎಂಟ್ರಿಯಾಗಿದ್ದು, ಅವರು ಅದರಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಈ ಸಿನಿಮಾದಲ್ಲಿ ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರ ಕೂಡ ಪ್ರಮುಖ. ಬೆಂಗಳೂರಿನ ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯ ಪಾತ್ರವಿದು. ಇದರಲ್ಲಿ ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಇದರಲ್ಲಿಅವರು ಟಫ್ ಕಾಪ್ ಆಗಿ ಕಾಣಿಸಿಕೊಳ್ಳುತ್ತಾರೆ. ಶಿವಾಜಿ ಸುರತ್ಕಲ್‌ಗೆ ಬೆನ್ನೆಲುಬಾಗಿ ನಿಲ್ಲುವ ಮತ್ತು ಆ ಪಾತ್ರದ ಮೇಲಾಧಿಕಾರಿಯಾಗಿರುವ ಪಾತ್ರ ಇದಾಗಿದೆ' ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ.
ಆಕಾಶ್ ಅವರು ಕಥೆ ಹೇಳಿದಾಗ ಖುಷಿಯಾಯಿತು. ರಮೇಶ್ ಅರವಿಂದ್ ಅವರ ಜತೆಗೆ ಈ ಹಿಂದೆ ಕೆಲಸ ಮಾಡುವ ಅವಕಾಶ ಬಂದಿತ್ತು. ಆದರೆ ಆಗಿರಲಿಲ್ಲ. ಈಗ ಸಾಧ್ಯವಾಗುತ್ತಿದೆ. ಅಪ್ಪನ ಜತೆಗೆ ಚಿಕ್ಕ ವಯಸ್ಸಿನಲ್ಲಿ ಸ್ಟೇಷನ್‌ಗೆ ಹೋಗಿದ್ದೇನೆ. ಪೊಲೀಸ್ ಬದುಕು ನನಗೆ ಗೊತ್ತಿದೆ. ಹಾಗಾಗಿ ಈ ಪಾತ್ರ ನಿರ್ವಹಿಸಲು ಸುಲಭವಾಗಲಿದೆ' ಎಂದಿದ್ದಾರೆ ಮೇಘನಾ ಗಾಂವ್ಕರ್.
ಇದನ್ನೂ ಓದಿ: ಮಾಯಾವಿಯ ರಹಸ್ಯ ಕೇಸಿನೊಂದಿಗೆ ಮತ್ತೆ ಬಂದ 'ಶಿವಾಜಿ ಸುರತ್ಕಲ್ 2'
ಚಿತ್ರತಂಡಕ್ಕೆ ಕೋವಿಡ್ ವ್ಯಾಕ್ಸಿನ್ ಕೊಡಿಸಿದ ನಂತರವೇ ಚಿತ್ರೀಕರಣ ಮಾಡೋಣ ಎಂದುಕೊಂಡಿದ್ದೇವೆ' ಎಂದಿದ್ದಾರೆ ಆಕಾಶ್. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಲುಕ್ ಬದಲಾಯಿಸುವ ಬಗ್ಗೆಯೂ ಚಿತ್ರತಂಡ ಆಲೋಚಿಸುತ್ತಿದೆ. ಇನ್ನು, ಶಿವಾಜಿ ಸುರತ್ಕಲ್ 1 ಸಿನಿಮಾದ ಹಿಂದಿ ರೀಮೇಕ್‌ಗೆ ಕೂಡ ತಯಾರಿ ನಡೆಯುತ್ತಿದೆ. ರೇಖಾ.ಕೆ.ಎನ್ ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾಧಿಕಾ ನಾರಾಯಣ್, ರಾಘು ರಾಮನಕೊಪ್ಪ ಮತ್ತು ವಿದ್ಯಾ ಮೂರ್ತಿ ಸಹ ನಟಿಸಿದ್ದಾರೆ.