
ಟಾಮ್ ಅಂಡ್ ಜೆರಿ ಪೋಸ್ಟರ್
ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ಟಾಮ್ ಅಂಡ್ ಜೆರಿ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು ನವೆಂಬರ್ 12 ರಂದು ರಿಲೀಸ್ ಆಗಲಿದೆ.
ಗಂಟುಮೂಟೆ ಸಿನಿಮಾ ಖ್ಯಾತಿಯ ನಿಶ್ಚಿತ್ ಕೊರೊಡಿ ಮತ್ತು ಮಾಯಾಬಜಾರ್ ನಾಯಕಿ ಚೈತ್ರಾ ರಾವ್ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಬಗ್ಗೆ ಮಾಹಿತಿ ನೀಡಿರುವ ಚಿತ್ರ ತಂಡ ನವೆಂಬರ್ 2 ರಂದು ಟೀಸರ್ ಬಿಡುಗಡೆ ಮಾಡಲಿದೆ.
ಮ್ಯಾಥ್ಯೂಸ್ ಮನೋಹರ್ ಸಂಯೋಜಿಸಿರುವ ಹಾಡಿಗೆ ಸಿದ್ ಶ್ರೀರಾಮ್ ಹಿನ್ನೆಲೆ ಗಾಯನ ನೀಡಿದ್ದಾರೆ, ಹಾಯಾಗಿದೆ ಎದೆಯೊಳಗೆ, ವಿಶೇಷವಾಗಿ ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ವೈರಲ್ ಆದ ನಂತರ ಈ ಚಿತ್ರ ಜನಪ್ರಿಯತೆಯನ್ನು ಗಳಿಸಿದೆ.
ಇದನ್ನೂ ಓದಿ: 'ಟಾಮ್ ಅಂಡ್ ಜೆರಿ' ಕನ್ನಡ ಹಾಡಿಗೆ ಸಿಡ್ ಶ್ರೀರಾಮ್ ದನಿ!
ಸಿನಿಮಾದ ಎರಡನೇ ಹಾಡು, ಕಾದಲ್ ನೀ ಅನ್ನಲೆ ಸಾಂಗ್ ಗೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದ್ದು, ಟಾಮ್ ಅಂಡ್ ಜೆರ್ರಿಯಲ್ಲಿ ತಾರಾ, ಜೈ ಜಗದೀಶ್, ರಂಗಾಯಣ ರಘು, ಕಡ್ಡಿಪುಡಿ ಚಂದ್ರು, ಪದ್ಮಜಾ ರಾವ್, ಗುಣಶೇಖರ್ ಮತ್ತು ಪ್ರಕಾಶ್ ತುಂಬಿನಾಡು ಸಹ ನಟಿಸಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸಂಕೇತ್ ನಿರ್ವಹಿಸಿದ್ದಾರೆ.