ಧನುಷ್, ಸುಲಕ್ಷಾ ಕೈರಾ ನಟನೆಯ 'ಸ್ನೇಹಿತ' ನವೆಂಬರ್ 19ರಂದು ರಿಲೀಸ್

ನವೆಂಬರ್ ತಿಂಗಳಲ್ಲಿ ಕನ್ನಡದ ಹಲವು ಸಿನಿಮಾಗಳು ತೆರೆ ಕಾಣುತ್ತಿವೆ. ಈ ಪೈಕಿ ಧನುಷ್ ನಟನೆಯ ಸ್ನೇಹಿತ ಸಿನಿಮಾ ಕೂಡ ಸೇರಿದೆ.
ಸ್ನೇಹಿತ ಸಿನಿಮಾ ಪೋಸ್ಟರ್
ಸ್ನೇಹಿತ ಸಿನಿಮಾ ಪೋಸ್ಟರ್

ನವೆಂಬರ್ ತಿಂಗಳಲ್ಲಿ ಕನ್ನಡದ ಹಲವು ಸಿನಿಮಾಗಳು ತೆರೆ ಕಾಣುತ್ತಿವೆ. ಈ ಪೈಕಿ ಧನುಷ್ ನಟನೆಯ ಸ್ನೇಹಿತ ಸಿನಿಮಾ ಕೂಡ ಸೇರಿದೆ.

ಪ್ಯಾರ್ ಕಾ ಗೋಲ್ ಗುಂಬಜ್ ಸಿನಿಮಾ ನಟ ಧನುಷ್ ಮೂರನೇ ಸಿನಿಮಾ ಇದಾಗಿದ್ದು, ಸ್ನೇಹಿತ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸ್ನೇಹಿತ ಸಿನಿಮಾ ನವೆಂಬರ್ 19 ರಂದು ಥಿಯೇಟರ್ ಗಳಲ್ಲಿ ರಿಲಿಸ್ ಆಗಲಿದೆ.

ನಿರ್ದೇಶನದ ಜತೆಗೆ ಸಾಗರ್ ಚಿತ್ರಕ್ಕೆ ಸಂಗೀತವನ್ನೂ ನೀಡಿದ್ದಾರೆ. ಇದೊಂದು ಕಮರ್ಷಿಯಲ್ ಸಿನಿಮಾವಾಗಿದ್ದು, ಗೆಳೆತನದ ಆಧಾರದಮೇಲೆ ಕಥೆ ಹೆಣೆಯಲಾಗಿದೆ.   ಹಿಂದೆ ಸೇಡು ಚಿತ್ರದಲ್ಲಿ ಕೆಲಸ ಮಾಡಿದ ಸುಲಕ್ಷಾ ಕೈರಾ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಶಿವರಾಮ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನೆಹರು ಬ್ಯಾಂಡ್‌ ಸೆಟ್‌ ನಡೆಸುತ್ತಿದ್ದ ಅಶೋಕ್‌ ಆರ್‌ ಭರವಸೆ ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಏತನ್ಮಧ್ಯೆ, ಧನುಷ್ ಕೂಡ ರೆಹಮಾನ್ ಅವರ ಮನೋ ಥಾ ಪ್ಯಾರ್ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಟ ಈ ಯೋಜನೆಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com