ಜಿಮ್ ಗೆ ಹೋಗಿದ್ದೆ ಪವರ್ ಸ್ಟಾರ್ ಪುನೀತ್ ಜೀವಕ್ಕೆ ಮುಳುವಾಯ್ತೆ?
ಖ್ಯಾತನಟ ಪುನೀತ್ ರಾಜ್ ಕುಮಾರ್ ಅವರಿಗೆ ನಿನ್ನೆ ರಾತ್ರಿಯೇ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಆದರೂ ಅವರು ಬೆಳಗ್ಗೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡಿದ್ದಾರೆ. ಅರೋಗ್ಯದಲ್ಲಿ ತುಸು ಏರುಪೇರು ಕಾಣಿಸಿಕೊಂಡಾಗಲೂ...
Published: 29th October 2021 03:03 PM | Last Updated: 29th October 2021 08:35 PM | A+A A-

ಪವರ್ ಸ್ಟಾರ್ ಪುನೀತ್
ಬೆಂಗಳೂರು: ಖ್ಯಾತನಟ ಪುನೀತ್ ರಾಜ್ ಕುಮಾರ್ ಅವರಿಗೆ ನಿನ್ನೆ ರಾತ್ರಿಯೇ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಆದರೂ ಅವರು ಬೆಳಗ್ಗೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡಿದ್ದಾರೆ. ಅರೋಗ್ಯದಲ್ಲಿ ತುಸು ಏರುಪೇರು ಕಾಣಿಸಿಕೊಂಡಾಗಲೂ ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ್ದೇ ತಪ್ಪಾಯ್ತಾ? ಎಂಬ ಪ್ರಶ್ನೆ ಈಗ ಉದ್ಬವಿಸಿದೆ.
ಇದನ್ನೂ ನೋಡಿ: ಶಿವಣ್ಣ, ಯಶ್ ಜೊತೆ ಕೊನೆಯದಾಗಿ ಸ್ಟೇಜ್ ಮೇಲೆ ಸ್ಟೆಪ್ ಹಾಕಿದ್ದ ಪುನೀತ್!
ಪುನೀತ್ ರಾಜ್ ಕುಮಾರ್ ಮನೆಯಲ್ಲಿರಲಿ, ಶೂಟಿಂಗ್ ನಲ್ಲಿರಲಿ, ಪ್ರವಾಸದಲ್ಲಿರಲಿ ಎಂದಿಗೂ ವ್ಯಾಯಾಮವನ್ನು ತಪ್ಪಿಸುತ್ತಿರಲಿಲ್ಲ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜಿಮ್ ಗಳು ಬಾಗಿಲು ಹಾಕಿದ್ದರೂ ಕೂಡ ಮನೆಯಲ್ಲಿಯೇ ಇರುವ ಸುಸಜ್ಜಿತ ವ್ಯಾಯಾಮಶಾಲೆಯಲ್ಲಿ ಅವರು ವರ್ಕ್ ಔಟ್ ಮಾಡುತ್ತಿದ್ದರು.
ಇದನ್ನು ಓದಿ: ಕನ್ನಡಿಗರ ಕಣ್ಮಣಿ 'ಅಪ್ಪು', 'ರಾಜಕುಮಾರ' ಪುನೀತ್ ಇನ್ನಿಲ್ಲ; ತೀವ್ರ ಹೃದಯಾಘಾತದಿಂದ ವಿಧಿವಶ
ಪುನೀತ್ ಅವರು ಸಮರಕಲೆಗಳನ್ನು ಕಲಿತವರು. ಇದರಿಂದಾಗಿ ಅವರ ಆರೋಗ್ಯ, ಮೈಕಟ್ಟು ಅತ್ಯುತ್ತಮವಾಗಿತ್ತು. ಸದಾ ಲವಲವಿಕೆಯಿಂದ ಇರುತ್ತಿದ್ದರು. ಇದರ ಗುಟ್ಟು ಅವರು ನಿತ್ಯ ಅನುಸರಿಸುತ್ತಿದ್ದ ವ್ಯಾಯಾಮಶೈಲಿಯೇ ಕಾರಣವಾಗಿತ್ತು. ಇವರು ವ್ಯಾಯಾಮ ಮಾಡುತ್ತಿರುವ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಎಂಥವರಿಗೂ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಸಹಜ. ಆದರೆ ಇಂಥ ಸನ್ನಿವೇಶದಲ್ಲಿ ಮುಂಜಾಗ್ರತೆ ಅಗತ್ಯ. ಪುನೀತ್ ಅವರು ಆರೋಗ್ಯದಲ್ಲಿ ತುಸು ಏರುಪೇರು ಕಾಣಿಸಿಕೊಂಡಾಗ ಜಿಮ್ ಗೆ ಹೋಗಬಾರದಾಗಿತ್ತು. ಇಂಥ ಸಂದರ್ಭದಲ್ಲಿ ತೀವ್ರ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ಮತ್ತಷ್ಟೂ ಒತ್ತಡ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಕೂಡ ಹೃದಯಾಘಾತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.