ಕಾಣದಂತೆ ಮಾಯವಾದ ‘ರಾಜಕುಮಾರ’ ಪುನೀತ್

ಲವಲವಿಕೆಯ ವ್ಯಕ್ತಿತ್ವ, ಸದಾ ನಗೆಸೂಸುವ ಮುಖ, ಎಲ್ಲರೊಡನೆ ಬೆರೆಯುವ ಆತ್ಮೀಯತೆ, ಮುಗ್ಧತೆ ತುಂಬಿದ ಅದ್ಭುತ ನಟ ಪುನೀತ್ ರಾಜ್ ಕುಮಾರ್.
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
Updated on

ಬೆಂಗಳೂರು: ಲವಲವಿಕೆಯ ವ್ಯಕ್ತಿತ್ವ, ಸದಾ ನಗೆಸೂಸುವ ಮುಖ, ಎಲ್ಲರೊಡನೆ ಬೆರೆಯುವ ಆತ್ಮೀಯತೆ, ಮುಗ್ಧತೆ ತುಂಬಿದ ಅದ್ಭುತ ನಟ ಪುನೀತ್ ರಾಜ್ ಕುಮಾರ್.

ಇವರ ಅಕಾಲಿಕ ಮರಣದ ಆಘಾತವನ್ನು ಅರಗಿಸಿಕೊಳ್ಳಲು ಸ್ಯಾಂಡಲ್ ವುಡ್ ಗೆ ಸದ್ಯಕ್ಕೆ ಸಾಧ್ಯವಿಲ್ಲ.

ಮೇರು ಪ್ರತಿಭೆ ರಾಜ್ ಕುಮಾರ್ ಪುತ್ರನಾಗಿ ಮಾತ್ರವಲ್ಲದೆ ಸ್ವಂತ ಪ್ರತಿಭೆಯಿಂದ ಬಾಲನಟನಾಗಿ ಚಂದನವನಕ್ಕೆ ಪದಾರ್ಪಣೆ ಮಾಡಿ, ಒಟ್ಟು 49 ಚಿತ್ರಗಳಲ್ಲಿ ನಟಿಸಿ ಎಲ್ಲರ ಮನಗೆದ್ದವರು.

ಪುಟ್ಟ ಮಗುವಾಗಿದ್ದಾಗಿನಿಂದಲೇ ಬೆಳ್ಳಿತೆರೆ ಪ್ರವೇಶಿಸಿ ಮಾಸ್ಟರ್ ಲೋಹಿತ್ ಹೆಸರಿನಿಂದ ಬಾಲನಟನಾಗಿ 28 ಚಿತ್ರಗಳಲ್ಲಿ ಮಿಂಚಿ ಮೆರೆದು, ಪುನೀತ್ ಹೆಸರಿನಲ್ಲಿ 29 ಚಿತ್ರಗಳಲ್ಲಿ ನಾಯಕನಟನಾಗಿ ಜನಪ್ರಿಯತೆ ಪಡೆದರು.

ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ, ತಂದೆಯ ಹೆಸರನ್ನು ಸಾರ್ಥಕಗೊಳಸುವಂತ ನಡೆ, ನುಡಿಯನ್ನು ಹೊಂದಿದ್ದರು.

ನಟನೆ ಮಾತ್ರವಲ್ಲದೆ ಗಾಯಕನಾಗಿ, ನಿರೂಪಕನಾಗಿ ಗುರುತಿಸಿಕೊಂಡವರು. ‘ಚಲಿಸುವ ಮೋಡಗಳು’ ಚಿತ್ರದ ಕಾಣದಂತೆ ಮಾಯವಾದನು, ‘ಭಾಗ್ಯವಂತ’ ಚಿತ್ರದ ಅಮ್ಮ ಸೀತಮ್ಮ ತಂದೆ ಶ್ರೀರಾಮ ಹಾಡನ್ನು ಎಂದಿಗೂ ಮರೆಯುವಂತೆಯೇ ಇಲ್ಲ.

ಪ್ರಸ್ತುತ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾದ ಕೆಲಸಗಳತ್ತ ಗಮನ ಹರಿಸಿದ್ದ ಅಪ್ಪು, ಪವನ್‌ಕುಮಾರ್ ನಿರ್ದೇಶನದ 'ದ್ವಿತ್ವ' ಚಿತ್ರದಲ್ಲೂ ನಟಿಸುತ್ತಿದ್ದರು. ಆದರೆ ಹಠಾತ್ ನಿಧನ ಎಲ್ಲರೂ ಕಂಗೆಡುವಂತೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com