ಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ ಗೌರಿ, ಗಣೇಶ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿದೆ. ಹಿರಿಯ ನಟಿ, ರಂಗಕರ್ಮಿ ಪದ್ಮಾವತಿ ರಾವ್ ಸೇರಿದಂತೆ ಹಲವು ತಾರೆಯರು, ಗಣೇಶೋತ್ಸವ ಆಚರಣೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಪದ್ಮಾವತಿ ರಾವ್ (ಸಿನಿಮಾ ನಟಿ, ರಂಗಕರ್ಮಿ): ನನ್ನ ಮಕ್ಕಳು ಚಿಕ್ಕವರಿದ್ದಾಗ, ನಾವು ಯಾವಾಗಲೂ ನಮ್ಮದೇ ಆದ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು ಬಳಸುತ್ತಿದ್ದೇವು. ಇದು ಅಲಂಕಾರಿಕವಲ್ಲ, ಆದರೆ, ಅದನ್ನು ಮಾಡುವ ಪ್ರಕ್ರಿಯೆ ಆನಂದಕರವಾಗಿತ್ತು. ನಿಧಾನವಾಗಿ ಅದು ಎಲೆಯ ಗಣೇಶನಿಗೆ ಜಾಗ ಕೊಟ್ಟಿತು. ಕೆಲವೊಮ್ಮೆ ನಾವು ಕೂಡಾ ಅದನ್ನು ಎಳೆಯುತ್ತಿದ್ದೇವು. ಅದು ನಮ್ಮಗೆ ಅತ್ಯಂತ ಮಹತ್ವದ ಸಮಯವಾಗಿತ್ತು. ಈ ವರ್ಷ ಕೋವಿಡ್ -19 ಕಾರಣ, ನಾವು ಇನ್ನೂ ಏನು ಮಾಡಬೇಕೆಂದು ಇನ್ನೂ ಅಂತಿಮಗೊಳಿಸಿಲ್ಲ. ಶುಕ್ರವಾರ ಸಂಜೆ ನನ್ನ ಸೋದರ ಸಂಬಂಧಿಯ ಮನೆಗೆ ಹೋಗಿ, ಒಂದೊಳ್ಳೆ ಸಮಯ ಕಳೆಯಬಹುದು.
ಅಪೂರ್ವ, ನಟಿ: ಮೈಸೂರಿನಲ್ಲಿ ಆರ್ಕೇಸ್ಟ್ರಾ, ಡ್ಯಾನ್ಸ್, ಬೃಹತ್ ಆಕಾರದ ಗಣೇಶ ವಿಗ್ರಹದೊಂದಿಗೆ ಗೌರಿ- ಗಣೇಶ ಹಬ್ಬವನ್ನು ಆಚರಿಸಲಾಗುತಿತ್ತು. ನಾನು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ, ಗಣೇಶ ವಿಸರ್ಜನೆ ಸಂದರ್ಭದಲ್ಲಿ ಅನೇಕ ಭಕ್ತಾಧಿಗಳೊಂದಿಗೆ ಸೇರುತ್ತಿದೆ. ಆದಾಗ್ಯೂ, ಆರೋಗ್ಯ ಸಮಸ್ಯೆ ಆಚರಣೆಯ ದಿಕ್ಕನ್ನೆ ಬದಲಾಯಿಸಿತು. ಪರಿಸರ ಸ್ನೇಹಿ ಗೌರಿ- ಗಣೇಶನನ್ನು ಕೂರಿಸಿ, ಮನೆಯಲ್ಲಿಯೇ ವಿಸರ್ಜಿಸುತ್ತೇವೆ.
ಖುಷಿ ರವಿ: ಗೌರಿ ಗಣೇಶ ಹಬ್ಬವೆಂದರೆ ಮನೆಯಲ್ಲಿ ಎಲ್ಲರಿಗೂ ಪ್ರೀತಿ. ಹಬ್ಬಕ್ಕಾಗಿ ಈಗ ತಾನೇ ಶಾಫಿಂಗ್ ಮುಗಿಸಿದ್ದು, ಪರಿಸರ ಸ್ನೇಹಿ ಗೌರಿ, ಗಣೇಶ ಮೂರ್ತಿಗಳನ್ನು ತಂದಿದ್ದೇನೆ. ಜೆ. ಪಿ. ನಗರದ ಆಕ್ಸಫರ್ಡ್ ಶಾಲೆಯಲ್ಲಿ ಆಚರಿಸುತ್ತಿದ್ದ ಗಣೇಶೋತ್ಸವ ಆಚರಣೆ ಈಗಲೂ ನೆನಪಿನಲ್ಲಿ ಉಳಿದಿದೆ. ಅಲ್ಲಿ ಪ್ರತಿವರ್ಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತಿತ್ತು. ದೇಶದ ವಿವಿಧೆಡೆ ಹಲವಾರು ಖ್ಯಾತ ನಟ ಮತ್ತು ಸಂಗೀತಗಾರರು ಬಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಜನಜುಂಗುಳಿಯಲ್ಲಿ ಸ್ನೇಹಿತರೊಂದಿಗೆ ನಾನು ಕೂಡಾ ಹಾಡಿಗೆ ತಲೆದೂಗುತ್ತಿದೆ. ಇದನ್ನು ಸಾಕ್ಷಿಯಾಗಿಸಲು ಒಂದು ದಿನ ಶೀಘ್ರದಲ್ಲೇ ನನ್ನ ಶಾಲೆಗೆ ಅತಿಥಿಯಾಗಿ ಹೋಗಬಹುದೆಂದು ಭಾವಿಸುತ್ತೇನೆ.
ಪೃಥ್ವಿ ಅಂಬಾರ್: ಈ ಸಲ ಮನೆಯಲ್ಲಿ ಸರಳವಾಗಿ ಗಣೇಶ ಪೂಜೆ ಮಾಡುತ್ತೇವೆ. ಆದಾಗ್ಯೂ, ನಾನು ಯಾವಾಗಲೂ ಪಂಡಲ್ ಮತ್ತು ಉತ್ಸವಗಳಲ್ಲಿ ಹಬ್ಬ ಆಚರಿಸುತ್ತಿದ್ದೇವು. ಉಡುಪಿ, ಮಂಗಳೂರು ಮತ್ತು ಕಾಸರಗೋಡಿನಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು ಈಗಲೂ ನೆನಪಿದೆ. ಆತಿಥೇಯನಾಗಿ ಕೆಲಸ ಮಾಡುತ್ತಿದ್ದಾಗ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ, ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಸಾಂಕ್ರಾಮಿಕ ರೋಗದಿಂದಾಗಿ ಹಳೆಯ ಜೋಶ್ ಕಳೆದುಕೊಂಡಿರುವುದು ನಿರಾಶದಾಯಕವಾಗಿದೆ.
ನೃತ್ಯಗಾರ್ತಿ ಮಯೂರಿ ಉಪಾಧ್ಯ: ನಾವು ಚಿಕ್ಕವರಿದ್ದಾಗ ಗಣೇಶ ಚತುರ್ಥಿಯು ಮೋಜಿನ ಹಬ್ಬವಾಗಿತ್ತು. ಹ್ಯಾಲೋವೀನ್‌ನಂತೆ, ಯಾರು ಯಾರು ಮನೆಯಲ್ಲಿ ಗಣೇಶ ವಿಗ್ರಹ ಇಟ್ಟಿದ್ದಾರೆ ಎಂಬುದನ್ನು ನೋಡಲು ಹೋಗುತ್ತಿದ್ದೇವು. ವೈವಿಧ್ಯಮಯ ಮೂರ್ತಿಗಳನ್ನು ನೋಡಿ ಮೂಕವಿಸ್ನಿತರಾಗುತ್ತಿದ್ದೇವು. ಮಕ್ಕಳಾಗಿದ್ದಾಗ ಹಬ್ಬವನ್ನು ತುಂಬಾ ಪ್ರೀತಿಸುತ್ತಿದ್ದೇವು. ಈ ವರ್ಷ ದುರಾದೃಷ್ಟಕರ, ನಾನು ಕೆಲಸದಲ್ಲಿರುತ್ತೇನೆ, ಕುಟುಂಬದ ಆಪ್ತರು ಮತ್ತು ಸ್ನೇಹಿತರೊಂದಿಗೆ ಸಣ್ಣ ಪೂಜೆ, ಬೋಜನ ಸವಿಯುವ ಸಾಧ್ಯತೆಯಿದೆ.
Advertisement