ಪ್ರಜ್ವಲ್ ದೇವರಾಜ್ 'ಮಾಫಿಯಾ' ದಿಂದ ನಿರ್ದೇಶಕ ಗುರುದತ್ತ ಗಾಣಿಗ ಔಟ್!
ಖಾದರ್ ಕುಮಾರ್ ನಿರ್ದೇಶನದ ವೀರಂ ಸಿನಿಮಾದ ನಂತರ ನಟ ಪ್ರಜ್ವಲ್ ದೇವರಾಜ್ ಅಭಿನಯದ ಮಾಫಿಯಾ ಸಿನಿಮಾವನನ್ನು ಅಂಬಿ ನಿಂಗ್ ವಯಸ್ಸಾಯ್ತೋ ನಿರ್ದೇಶಕ ಗುರುದತ್ತ ಗಾಣಿಗ ನಿರ್ದೇಶಿಸಬೇಕಿತ್ತು.
Published: 14th September 2021 12:08 PM | Last Updated: 14th September 2021 12:55 PM | A+A A-

ಪ್ರಜ್ವಲ್ ದೇವರಾಜ್
ಖಾದರ್ ಕುಮಾರ್ ನಿರ್ದೇಶನದ ವೀರಂ ಸಿನಿಮಾದ ನಂತರ ನಟ ಪ್ರಜ್ವಲ್ ದೇವರಾಜ್ ಅಭಿನಯದ ಮಾಫಿಯಾ ಸಿನಿಮಾವನನ್ನು ಅಂಬಿ ನಿಂಗ್ ವಯಸ್ಸಾಯ್ತೋ ನಿರ್ದೇಶಕ ಗುರುದತ್ತ ಗಾಣಿಗ ನಿರ್ದೇಶಿಸಬೇಕಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಗುರುದತ್ತ ಗಾಣಿಗ ಮಾಫಿಯಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಮಾಫಿಯಾ ಸಿನಿಮಾ ನಿರ್ದೇಶನಕ್ಕಾಗಿ ಚಿತ್ರ ತಂಡ ಮತ್ತೊಬ್ಬ ಡೈರೆಕ್ಚರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಬೆಳವಣಿಗೆ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಅವರನ್ನು ಸಂಪರ್ಕಿಸಿ ಕೇಳಿದಾಗ ಈ ವಿಷಯವನ್ನು ಖಚಿತ ಪಡಿಸಿದ್ದಾರೆ.
ಇದನ್ನೂ ಓದಿ: ಗುರುದತ್ತ ಗಾಣಿಗ ಆಕ್ಷನ್ ಥ್ರಿಲ್ಲರ್ ಗಾಗಿ ಬೆಳ್ಳಿ ತೆರೆ ಮೇಲೆ ಮತ್ತೆ ಜೊತೆಯಾದ ದೇವರಾಜ್-ಪ್ರಜ್ವಲ್ ಜೋಡಿ!
ಮಾಫಿಯಾ ಸಿನಿಮಾವನ್ನು ಗುರುದತ್ತ ಗಾಣಿಗ ನಿರ್ದೇಶಿಸುತ್ತಿಲ್ಲ, ಅವರ ಬದಲಾಗಿ ಚಿತ್ರತಂಡ ಮತ್ತೊಬ್ಬ ನಿರ್ದೇಶಕರನ್ನು ತರಲಿದೆ. ಮತ್ತೊಂದು ಸಿನಿಮಾ ಸ್ಕ್ರಿಪ್ಟ್ ನ ಕಥೆಗಾಗಿ ಪ್ರಜ್ವಲ್ ಕೈ ಜೋಡಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ಆರಂಭವಾಗುವ ಮುನ್ನ ನಿರ್ದೇಶಕರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಚಿತ್ರವನ್ನು ಬಿ ಕುಮಾರ್ ಅವರ ಬೆಂಗಳೂರು ಕುಮಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಇದೊಂದು, ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಚಿತ್ರತಂಡ ಇತ್ತೀಚೆಗೆ ಫಸ್ಟ್ ಲುಕ್ ಪೋಸ್ಟರ್ ಬಹಿರಂಗಪಡಿಸಿತ್ತು. ಮಾಫಿಯಾದಲ್ಲಿ ಪ್ರಜ್ವಲ್ ದೇವರಾಜ್ ಉತ್ಸಾಹಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಅದಿತಿ ಪ್ರಭುದೇವ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.