ಸ್ಯಾಂಡಲ್ ವುಡ್ ನ ಯುವ ಸಂಭಾಷಣೆಕಾರ ಗುರು ಕಶ್ಯಪ್ ನಿಧನ; ಕಲಾವಿದರ ಕಂಬನಿ

ಸ್ಯಾಂಡಲ್ ವುಡ್ ನ ಮತ್ತೊಬ್ಬ ಜನಪ್ರಿಯ ಸಂಭಾಷಣೆ ಬರಹಗಾರ ಗುರು ಕಶ್ಯಪ್ ನಿಧನರಾಗಿದ್ದಾರೆ. ಹೃದಯಾಘಾತದಿಂದ ಕಳೆದ ರಾತ್ರಿ ಗುರು ಕಶ್ಯಪ್ ಮೃತಪಟ್ಟಿದ್ದಾರೆ.
ಗುರು ಕಶ್ಯಪ್(ಸಂಗ್ರಹ ಚಿತ್ರ)
ಗುರು ಕಶ್ಯಪ್(ಸಂಗ್ರಹ ಚಿತ್ರ)

ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಬ್ಬ ಜನಪ್ರಿಯ ಸಂಭಾಷಣೆ ಬರಹಗಾರ ಗುರು ಕಶ್ಯಪ್ ನಿಧನರಾಗಿದ್ದಾರೆ. ಹೃದಯಾಘಾತದಿಂದ ಕಳೆದ ರಾತ್ರಿ ಗುರು ಕಶ್ಯಪ್ ಮೃತಪಟ್ಟಿದ್ದಾರೆ. ಹೃದಯಾಘಾತವಾದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಹೋಗುವಾಗ ದಾರಿ ಮಧ್ಯದಲ್ಲೇ ವಿಧಿವಶರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸುಂದರಾಂಗ ಜಾಣ’, ರಮೇಶ್ ಅರವಿಂದ್ ನಟನೆಯ ‘ಪುಷ್ಪಕ ವಿಮಾನ’, ಪ್ರಿಯಾಂಕಾ ಉಪೇಂದ್ರ ನಟಿಸಿದ್ದ ‘ದೇವಕಿ’, 2ನೇ ಲಾಕ್ ಡೌನ್ ಗೆ ಮೊದಲು ಬಿಡುಗಡೆಯಾಗಿದ್ದ ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಸಿನಿಮಾಗಳಿಗೆ ಗುರು ಕಶ್ಯಪ್ ಡೈಲಾಗ್ ಬರೆದಿದ್ದರು.

ಡಾಲಿ ಧನಂಜಯ್ ನಟನೆಯ ‘ಮಾನ್ಸೂನ್ ರಾಗ’, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘ಬೈರಾಗಿ’, ‘ವೀಲ್ ಚೇರ್ ರೋಮಿಯೋ’ ಮುಂತಾದ ಅನೇಕ ಚಿತ್ರಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆಯುತ್ತಿದ್ದರು. ಯಶಸ್ಸಿನ ಏಣಿಯನ್ನು ಹತ್ತುತ್ತಿರುವಾಗಲೇ ಗುರು ಕಶ್ಯಪ್ ಬಾರದ ಲೋಕಕ್ಕೆ ತೆರಳಿದ್ದಾರೆ.

ಕಂಬನಿ ಮಿಡಿದ ಸ್ಯಾಂಡಲ್‌ವುಡ್: ಪತ್ನಿ ಹಾಗೂ ಪುತ್ರಿಯನ್ನು ಅಗಲಿರುವ ಗುರು ಕಶ್ಯಪ್ ನಿಧನಕ್ಕೆ ಸ್ಯಾಂಡಲ್ ವುಡ್ ಕಲಾವಿದರು ಕಂಬನಿ ಮಿಡಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com