
ಕಬ್ಜ ಪೋಸ್ಚರ್
ಆರ್.ಚಂದ್ರು ಹಾಗೂ ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.
ಉಪೇಂದ್ರ ಅವರ ಜನ್ಮದಿನದ ಪ್ರಯುಕ್ತ ಅದ್ದೂರಿ ಮೋಷನ್ ಪೋಸ್ಟರ್ ಮುಖಾಂತರ ಚಿತ್ರದ ಕುರಿತ ಮಹತ್ವದ ಅಪ್ಡೇಟ್ ನೀಡುವುದಾಗಿ ನಿರ್ದೇಶಕ ಆರ್.ಚಂದ್ರು ತಿಳಿಸಿದ್ದರು.
ಅದರಂತೆ, ಆಯುಧ ಹಿಡಿದು ಅಬ್ಬರಿಸುತ್ತಿರುವ ಉಪ್ಪಿಯ ಪೋಸ್ಟರ್ನೊಂದಿಗೆ ಚಿತ್ರದ ಕುರಿತ ಮಹತ್ವದ ಮಾಹಿತಿಗಳನ್ನೂ ಚಿತ್ರತಂಡ ನೀಡಿದೆ. ಚಿತ್ರದ ಟೀಸರ್ ದೀಪಾವಳಿಗೆ ಬಿಡುಗಡೆಯಾಗಲಿದೆ. ಹಾಗೆಯೇ ಈ ಪ್ಯಾನ್ ಇಂಡಿಯಾ ಚಿತ್ರ 2022ರಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ.
1980ರಲ್ಲಿ ಮಾಫಿಯಾ ಪ್ರಬಲವಾಗುವ ಕತೆಯನ್ನು ಚಿತ್ರವು ಒಳಗೊಂಡಿದೆ. ಈ ಕುರಿತಂತೆ ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರ್ನಲ್ಲೂ ಮಾಹಿತಿ ನೀಡಲಾಗಿದೆ. ಹಾಗೆಯೇ ಚಿತ್ರದ ಅದ್ದೂರಿತನ, ಹಿನ್ನೆಲೆ, ಸಂಗೀತ, ಛಾಯಾಗ್ರಹಣ ಮೊದಲಾದವುಗಳ ಗುಣಮಟ್ಟವನ್ನು ಅಭಿಮಾನಿಗಳಿಗೆ ತಿಳಿಸುವಂತೆ ಮೋಷನ್ ಪೋಸ್ಟರ್ ಮೂಡಿಬಂದಿದೆ.
ನಾವು 40 ದಿನಗಳ ವೇಳಾಪಟ್ಟಿಯೊಂದಿಗೆ ಬೆಂಗಳೂರಿನಲ್ಲಿ ಚಿತ್ರೀಕರಣವನ್ನು ಪುನರಾರಂಭಿಸುತ್ತೇವೆ ಮತ್ತು ನಂತರ ನಾವು ಹೈದರಾಬಾದ್‌ಗೆ ಹೋಗಲಿದ್ದೇವೆ, ಅಲ್ಲಿ ನಾವು ಚಿತ್ರವನ್ನು ಮುಗಿಸಲು ಯೋಜಿಸುತ್ತಿದ್ದೇವೆ ಎಂದು ನಿರ್ದೇಶಕರು ಹೇಳುತ್ತಾರೆ
ಈ ಚಿತ್ರದಲ್ಲಿ ಸುದೀಪ್ ಕೂಡ ಕಾಣಿಸಿಕೊಳ್ಳಲಿದ್ದು, ಭಾರ್ಗವ್ ಭಕ್ಷಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಪೋಸ್ಟರ್ ಎಲ್ಲರ ಮನಸೆಳೆದಿತ್ತು. ಕೆಜಿಎಫ್ ಖ್ಯಾತಿಯರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಲಿದೆ, ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ಶ್ರೀನಿವಾಸ್ ರಾವ್ ಕೋಟ, ಪ್ರಕಾಶ್ ರಾಜ್, ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್ , ಅನೂಪ್ ರೇವಣ್ಣ ಮೊದಲಾದವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಆರ್.ಚಂದ್ರಶೇಖರ್ ನಿರ್ಮಿಸುತ್ತಿದ್ದು, ಎಂಟಿಬಿ ನಾಗರಾಜ್ ಚಿತ್ರ ನಿರ್ಮಿಸುತ್ತಿದ್ದಾರೆ.