ನಟಿ ಅನುಷ್ಕಾ ಶೆಟ್ಟಿ ಮದುವೆ ನಡೆಯುವುದು ಅಂದೇ: ಜ್ಯೋತಿಷಿ ಹೇಳಿಕೆ ವೈರಲ್‌

ತೆಲುಗು ಚಿತ್ರರಂಗದ ಜನಪ್ರಿಯ ನಾಯಕಿ ತುಳುನಾಡ ಚೆಲುವೆ ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ಹರಡಿದಷ್ಟು ಸುದ್ದಿಗಳು ಇತರ ಯಾವುದೇ ನಾಯಕಿಯರ ಬಗ್ಗೆ ಬಂದಿರಲಿಲ್ಲವೇನೋ. 
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ

ಹೈದರಾಬಾದ್‌: ತೆಲುಗು ಚಿತ್ರರಂಗದ ಜನಪ್ರಿಯ ನಾಯಕಿ ತುಳುನಾಡ ಚೆಲುವೆ ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ಹರಡಿದಷ್ಟು ಸುದ್ದಿಗಳು ಇತರ ಯಾವುದೇ ನಾಯಕಿಯರ ಬಗ್ಗೆ ಬಂದಿರಲಿಲ್ಲವೇನೋ. 

ಈ ಹಿಂದೆ, ಪ್ರಭಾಸ್-ಅನುಷ್ಕಾ ಮದುವೆಯಾಗಲಿದ್ದಾರೆ ಎಂದು ಸುದ್ದಿಗಳು ಹರಡಿದ್ದವು. ಆದರೆ, ತಾವಿಬ್ಬರೂ ಒಳ್ಳೆಯ ಸ್ನೇಹಿತರು ಮಾತ್ರ ನಮ್ಮಿಬ್ಬರ ನಡುವೆ ಹರಡಿರುವ ಸುದ್ದಿಗಳು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾಗ ವದಂತಿಗಳು ಅಂತ್ಯಗೊಂಡಿದ್ದವು. ನಂತರ,   ಉದ್ಯಮಿಯೊಬ್ಬರೊಂದಿಗೆ ಅನುಷ್ಕಾ ವಿವಾಹ ನಿಶ್ಚಯವಾಗಿದೆ ಎಂಬ ಸುದ್ದಿ  ಹರಡಿತ್ತು. ನಂತರ ಅದು ನಕಲಿ ಸುದ್ದಿ ಎಂದು ಸ್ಪಷ್ಟಪಡಿಸಲಾಯಿತು.

ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ

ಇನ್ನೂ ನಿಶ್ಯಬ್ದಂ ಸಿನಿಮಾ ನಂತರ ಅನುಷ್ಕಾ, ನವೀನ್ ಪೋಲಿ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು  ಘೋಷಣೆಯಾಗಿದ್ದರೂ ಈವರೆಗೆ ಯಾವುದೇ ಅಪ್ಡೇಟ್ ಇಲ್ಲದ ಕಾರಣ ಚಿತ್ರ ನಿಂತು ಹೋಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಲ್ಲದೆ, ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಸಿಗದೇ ಇರುವುದರಿಂದ ಅನುಷ್ಕಾ ಮದುವೆಯ ಬಗ್ಗೆ ಮತ್ತೊಮ್ಮೆ ವದಂತಿಗಳು ತೀವ್ರಗೊಂಡಿವೆ. ಅನುಷ್ಕಾ ಮದುವೆ ಕುರಿತು ಪ್ರಮುಖ ಜ್ಯೋತಿಷಿ ಪಂಡಿತ್ ಜಗನ್ನಾಥ ಗುರೂಜಿ ನೀಡಿರುವ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. 

ಅನುಷ್ಕಾ ವೃತ್ತಿಜೀವನದಲ್ಲಿ ತುಂಬಾ ಸಿನ್ಸಿಯರ್‌, ಆಕೆಯ ಮುಖಭಾವ ನೋಡಿದರೆ, ಅನುಷ್ಕಾ ಸಿನಿಮಾ ಉದ್ಯಮದ ವ್ಯಕ್ತಿಗಿಂತ ಹೊರಗಿನ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ. ಅನುಷ್ಕಾ ಶೆಟ್ಟಿಯದು ಡೌನ್‌ ಟೂ ಅರ್ತ್‌ ವ್ಯಕ್ತಿತ್ವ, ಆಕೆಗೆ  ಸ್ವಲ್ಪವೂ ಅಹಂಕಾರವಿಲ್ಲ ಎಂದು ಹೇಳಿದ್ದಾರೆ. ಮದುವೆಯ ಬಗ್ಗೆ ಮಾತನಾಡಿ,  2023 ರೊಳಗೆ ಅನುಷ್ಕಾ ಮದುವೆ  ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಈ ಪಂಡಿತರ ಭವಿಷ್ಯ ಎಷ್ಟರ ಮಟ್ಟಿಗೆ ನಿಜ ಎಂದು ಕಾದು ನೋಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com