ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಚಿತ್ರದಲ್ಲಿ ಬಾಕ್ಸಿಂಗ್ ದಂತಕಥೆ 'ಮೈಕ್ ಟೈಸನ್'!
ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರದ ಮೂಲಕ ಭಾರತೀಯ ಸಿನಿರಂಗಕ್ಕೆ ಬಾಕ್ಸಿಂಗ್ ದಂತಕಥೆ 'ಮೈಕ್ ಟೈಸನ್' ಪದಾರ್ಪಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.
Published: 27th September 2021 06:04 PM | Last Updated: 26th December 2022 02:31 PM | A+A A-

'ಲೈಗರ್ ಚಿತ್ರದ ಪೋಸ್ಟರ್
ಹೈದರಾಬಾದ್: ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರದ ಮೂಲಕ ಭಾರತೀಯ ಸಿನಿರಂಗಕ್ಕೆ ಬಾಕ್ಸಿಂಗ್ ದಂತಕಥೆ 'ಮೈಕ್ ಟೈಸನ್' ಪದಾರ್ಪಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ವತಃ ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದು, ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಶೀಘ್ರದಲ್ಲೇ ನಮ್ಮ ಲೈಗರ್ ಚಿತ್ರತಂಡವನ್ನು ಸೇರಿಕೊಳ್ಳಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
We promised you Madness!
We are just getting started :)
For the first time on Indian Screens. Joining our mass spectacle - #LIGER
The Baddest Man on the Planet
The God of Boxing
The Legend, the Beast, the Greatest of all Time!
IRON MIKE TYSON#NamasteTYSON pic.twitter.com/B8urGcv8HR— Vijay Deverakonda (@TheDeverakonda) September 27, 2021
'ನಾವು ಈ ಹಿಂದೆಯೇ ನಿಮಗೆ ಮಾಡ್ನೆಸ್ ನ ಮಾತುಕೊಟ್ಟಿದ್ದೆವು. ಅದರಂತೆ ಬಾಕ್ಸಿಂಗ್ ಮ್ಯಾಡ್ನೆಸ್, ದಿ ಲೆಜೆಂಡ್, ಐರನ್ ಮ್ಯಾನ್, ಬ್ಯಾಡೆಸ್ಟ್ ಮ್ಯಾನ್ ಇನ್ ದಿ ವರ್ಲ್ಡ್, ಬಾಕ್ಸಿಂಗ್ ಸೂಪರ್ ಸ್ಟಾರ್ ಶೀಘ್ರದಲ್ಲೇ ನಮ್ಮ ಸಿನಿಮಾ ತಂಡವನ್ನು ಸೇರಿಕೊಳ್ಳಲ್ಲಿದ್ದಾರೆ ಎಂದು ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದಾರೆ.
ಇನ್ನು ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರವನ್ನು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶಿಸುತ್ತಿದ್ದು, ತೆಲುಗಿನಲ್ಲಿ ನಟಿ ಚಾರ್ಮಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಹುಭಾಷೆಗಳಲ್ಲಿ ಈ ಚಿತ್ರ ತೆರೆಕಾಣುತ್ತಿದ್ದು, ಹಿಂದಿಯಲ್ಲಿ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಜೊತೆಗೆ ಪೂರಿ ಜಗನ್ನಾಥ್ ಅವರ ಬ್ಯಾನರ್ ಪುರಿ ಕನೆಕ್ಟ್ಸ್ ಮೂಲಕ ಚಿತ್ರವನ್ನು ತೆರೆಮೇಲೆ ತರುತ್ತಿದ್ದಾರೆ.
ಇನ್ನು ಚಿತ್ರದಲ್ಲಿ ಟೈಸನ್ ಪಾತ್ರದ ವಿವರಗಳನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಟೀಸರ್ ನಲ್ಲಿನ ವೀಡಿಯೋ ಪ್ರಕಾರ ಬಾಕ್ಸಿಂಗ್ ರಿಂಗ್‌ನಲ್ಲಿ ಅವರು ದೇವರಕೊಂಡ ಪಾತ್ರವನ್ನು ಎದುರಿಸಲಿದ್ದಾರೆ ಎನ್ನಲಾಗುತ್ತಿದೆ.
ಸಾರ್ವಕಾಲಿಕ ಶ್ರೇಷ್ಠ ಹೆವಿವೇಯ್ಟ್ ಬಾಕ್ಸರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಟೈಸನ್, 2009 ರ ಹಾಲಿವುಡ್ ಹಿಟ್ ಚಿತ್ರ "ದಿ ಹ್ಯಾಂಗೋವರ್" ಮತ್ತು ಅದರ 2011 ರ ಸೀಕ್ವೆಲ್ "ದಿ ಹ್ಯಾಂಗೊವರ್ ಪಾರ್ಟ್ II" ನಲ್ಲಿ ನಟಿಸಿ ಖ್ಯಾತಿಗಳಿಸಿದ್ದರು.