'ಲವ್ 360' ಶೀರ್ಷಿಕೆಗೆ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಸ್ಫೂರ್ತಿ: ನಿರ್ದೇಶಕ ಶಶಾಂಕ್

ಮೊಗ್ಗಿನ ಮನಸು, ಕೃಷ್ಣ ಲೀಲಾದಂತಹ ಪ್ರೇಮಕಥೆಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ನಿರ್ದೇಶಕ ಶಶಾಂಕ್ ಅವರ ಮುಂದಿನ ಚಿತ್ರ 'ಲವ್ 360' ನಾಳೆ ತೆರೆಗೆ ಬರುತ್ತಿದೆ. ಚಿತ್ರದ ನಾಯಕ ಪ್ರವೀಣ್ ಸ್ಯಾಂಡಲ್ ವುಡ್ ಗೆ ಹೊಸಬರು. ಈ ಹಿಂದಿನ ಚಿತ್ರಗಳಲ್ಲಿ ಕೂಡ ನಿರ್ದೇಶಕರು ಹೊಸ ಕಲಾವಿದರಿಗೆ ಅವಕಾಶ ನೀಡಿ ಬೆಳ್ಳಿತೆರೆಗೆ ಪರಿಚಯಿಸಿ ಅವರಿಗೆ ಯಶಸ್ಸು ಕೊಟ್ಟಿದ್ದಾರೆ.
ಸಿನಿಮಾ ಚಿತ್ರೀಕರಣ ವೇಳೆ ನಿರ್ದೇಶಕ ಶಶಾಂಕ್
ಸಿನಿಮಾ ಚಿತ್ರೀಕರಣ ವೇಳೆ ನಿರ್ದೇಶಕ ಶಶಾಂಕ್
Updated on

ಮೊಗ್ಗಿನ ಮನಸು, ಕೃಷ್ಣ ಲೀಲಾದಂತಹ ಪ್ರೇಮಕಥೆಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ನಿರ್ದೇಶಕ ಶಶಾಂಕ್ ಅವರ ಮುಂದಿನ ಚಿತ್ರ 'ಲವ್ 360' ನಾಳೆ ತೆರೆಗೆ ಬರುತ್ತಿದೆ. ಚಿತ್ರದ ನಾಯಕ ಪ್ರವೀಣ್ ಸ್ಯಾಂಡಲ್ ವುಡ್ ಗೆ ಹೊಸಬರು. ಈ ಹಿಂದಿನ ಚಿತ್ರಗಳಲ್ಲಿ ಕೂಡ ನಿರ್ದೇಶಕರು ಹೊಸ ಕಲಾವಿದರಿಗೆ ಅವಕಾಶ ನೀಡಿ ಬೆಳ್ಳಿತೆರೆಗೆ ಪರಿಚಯಿಸಿ ಅವರಿಗೆ ಯಶಸ್ಸು ಕೊಟ್ಟಿದ್ದಾರೆ.

ಹೊಸ ಕಲಾವಿದರಿಗೆ ಅವಕಾಶ ಕೊಡಬೇಕೆಂಬ ಪಾಠವನ್ನು ನನ್ನ ಗುರುಗಳಾದ ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ ಕಲಿತೆ. ಹಂಸಲೇಖ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾನು. ಚಿತ್ರದಲ್ಲಿ ಕಥೆ, ವಿಷಯಗಳಿಗೆ ಗಮನ ನೀಡಬೇಕೆಂದು ಅವರು ಯಾವತ್ತೂ ಹೇಳುವರು. ಸ್ಥಳೀಯತೆಗೆ ಆದ್ಯತೆ ನೀಡುವುದು ನಮ್ಮ ಚಿತ್ರದಲ್ಲಿ ಕಾಣಬಹುದು ಎನ್ನುತ್ತಾರೆ ನಿರ್ದೇಶಕ ಶಶಾಂಕ್. 

ಸಿನಿಮಾದಲ್ಲಿ ಪ್ರೇಕ್ಷಕರನ್ನು ನಿರ್ದೇಶಕ ಹಿಡಿದಿಟ್ಟುಕೊಳ್ಳಬೇಕು. ನನ್ನ ಆರಂಭದ ಕೆಲ ಚಿತ್ರಗಳಲ್ಲಿ ಹೊಸಬರಿಗೆ ಆದ್ಯತೆ ನೀಡಬೇಕೆಂದು ನಾನು ಮಾನಸಿಕವಾಗಿ ನಿರ್ಧರಿಸಿದ್ದೆ. ಇಲ್ಲಿ ನನ್ನ ಕೌಶಲ್ಯಗಳನ್ನು ಸಾಬೀತುಪಡಿಸಬೇಕು, ನನಗೆ ಅವಕಾಶ ಕೊಟ್ಟ ನಿರ್ಮಾಣ ಸಂಸ್ಥೆಗಳಿಗೆ ನಾನು ಕೃತಜ್ಞನಾಗಿದ್ದೇನೆ ಎನ್ನುತ್ತಾರೆ.

ಲವ್ 360 ಆಕಸ್ಮಿಕವಾಗಿ ಹುಟ್ಟಿದ ಸಿನಿಮಾ. ಉಪೇಂದ್ರ ಅವರ ಜೊತೆ ಚಿತ್ರ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. 2 ವರ್ಷ ಹೊಸಬರ ಜೊತೆ ಕೆಲಸ ಮಾಡುವ ಯೋಜನೆಯಿರಲಿಲ್ಲ. ಕೋವಿಡ್ ಬಂದು ನನ್ನ ಯೋಜನೆಗಳೆಲ್ಲ ಅದಲುಬದಲಾದವು ಎನ್ನುತ್ತಾರೆ.

ಈ ಹೊತ್ತಿನಲ್ಲಿ ಪ್ರವೀಣ್ ಅವರು ನಟನಾಗಬೇಕೆಂದು ಹೇಳಿಕೊಂಡು ಶಶಾಂಕ್ ಅವರನ್ನು ಭೇಟಿ ಮಾಡಿದರಂತೆ. ಅವರ ಹಿನ್ನೆಲೆ ಕೇಳಿ ಲವ್ 360 ಸಿನಿಮಾ ಮಾಡಬೇಕೆಂದು ಮನಸ್ಸಾಯಿತು. ಪ್ರವೀಣ್ ಅವರಿಗೆ ತಂದೆಯಿಲ್ಲ, ಮೂಲತಃ ಪ್ರವೀಣ್ ವೈದ್ಯರು. ಅವರ ಊರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿನ ಜನರು ಪ್ರವೀಣ್ ನನ್ನು ದೇವರ ರೀತಿ ಕಾಣುತ್ತಾರೆ. ಈ ವಿಷಯ ನನ್ನ ಮನಸ್ಸಿಗೆ ತುಂಬಾ ಹಿಡಿಸಿ ಪ್ರವೀಣ್ ಅವರ ಆಸೆಯನ್ನು ನೆರವೇರಿಸಬೇಕೆಂದು ಮನಸ್ಸಾಗಿ ಚಿತ್ರ ಮಾಡಲು ಮುಂದಾದೆ, ನಾಯಕಿ ರಚನಾ ಇಂದರ್ ಅವರು ಆಡಿಶನ್ ಮೂಲಕ ಆಯ್ಕೆಯಾದರು, ಈ ಪಾತ್ರಕ್ಕೆ ಅವರು ಸರಿಯಾಗಿ ಹೊಂದಿಕೆಯಾಗುತ್ತಾರೆ ಎಂದರು.

ಲವ್ 360 ಎಂಬುದು ಬೋಟ್ ಮೆಕ್ಯಾನಿಕ್ ಮತ್ತು ಜಾನು ನಡುವಿನ ಕಥೆಯಾಗಿದ್ದು, ಅವರ ಮಾನಸಿಕ ಸಮಸ್ಯೆಗಳನ್ನು ತೋರಿಸಲಾಗಿದೆ. ಇಬ್ಬರು ಶುದ್ಧ ಮನಸ್ಸುಗಳ ನಡುವಿನ ಕಥೆಯಿದು. ಲವ್ 360 ಮೂಲಕ ಇನ್ನೂ ಕೆಲವು ಹೊಸ ಮುಖಗಳನ್ನು ಪರಿಚಯಿಸಲಾಗಿದೆ.

ಗೋಕರ್ಣವನ್ನು ಮುಖ್ಯವಾಗಿಟ್ಟುಕೊಂಡು ಅಲ್ಲಿನ ಸ್ಥಳೀಯತೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಿಸಲಾಗಿದೆ. ಗೋಕರ್ಣವನ್ನು ಕರ್ನಾಟಕದ ಮಿನಿ ಗೋವಾ ಎಂದು ಕರೆಯುತ್ತಾರೆ. ನಾನು ಇಡೀ ಚಿತ್ರವನ್ನು ಆ ಕರಾವಳಿ ಪ್ರದೇಶದಲ್ಲಿ ಚಿತ್ರೀಕರಿಸಲು ನಿರ್ಧರಿಸಿದೆ ಎಂದು ಹೇಳಿ ಕುತೂಹಲಕಾರಿ ಶೀರ್ಷಿಕೆಯ ಹಿಂದಿನ ವಿಚಾರವನ್ನೂ ನಿರ್ದೇಶಕರು ಬಹಿರಂಗಪಡಿಸಿದ್ದಾರೆ. 

"ಲವ್ 360 ಶೀರ್ಷಿಕೆಯು ಎಬಿ ಡಿವಿಲಿಯರ್ಸ್ ಅವರಿಂದ ಸ್ಫೂರ್ತಿ ಪಡೆದಿದೆ. ನಾನು ಶೀರ್ಷಿಕೆಗಾಗಿ ಹುಡುಕುತ್ತಿದ್ದೆ. ಹಿಂದಿನ ಐಪಿಎಲ್ ಸೀಸನ್ ವೀಕ್ಷಿಸುತ್ತಿರುವಾಗ ಶೀರ್ಷಿಕೆ ಎತ್ತಿಕೊಂಡೆ. ಎಬಿ ಡಿವಿಲಿಯರ್ಸ್ ಅವರನ್ನು ಮಿಸ್ಟರ್ 360 ಎಂದು ಕರೆಯಲಾಗುತ್ತದೆ ಏಕೆಂದರೆ ಅವರ ಬ್ಯಾಟಿಂಗ್ ನೆಲದ ಮೇಲಿನ ಪ್ರತಿಯೊಂದು ಕೋನವನ್ನು ಒಳಗೊಂಡಿದೆ. ಅಂತೆಯೇ, ನಮ್ಮ ನಾಯಕ ತನ್ನ ಹುಡುಗಿಯನ್ನು ಸಂಪೂರ್ಣವಾಗಿ ಪ್ರೀತಿಸುತ್ತಾನೆ ಎಂದು ಲವ್ 360 ಎಂದು ಸಿನಿಮಾಕ್ಕೆ ಹೆಸರಿಟ್ಟಿರುವ ಬಗ್ಗೆ ಹೇಳಿದರು.

ನಿರ್ದೇಶಕ ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ನಿರ್ಮಾಪಕನಾಗಿ ಹೊಸಬರನ್ನು ಹಾಕಿಕೊಂಡು ಚಿತ್ರ ಮಾಡುವುದು ತುಂಬಾ ಸವಾಲಿನ ವಿಷಯ. ಆದರೆ ಚಿತ್ರದ ಕಥೆ ಇಲ್ಲಿ ಮುಖ್ಯವಾಗುತ್ತದೆ. ಅರ್ಜುನ್ ಜನ್ಯ ಅವರ ಹಾಡುಗಳು ಹಿಟ್ ಆಗಿವೆ. ಅಭಿಲಾಷ್ ಕಲಾತಿಯವರ ಛಾಯಾಗ್ರಹಣ ಸುಂದರವಾಗಿದೆ. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು, ನಾಳೆ ಫಲಿತಾಂಶಕ್ಕೆ ಕಾಯುತ್ತಿದ್ದೇನೆ ಎಂದು ನಿರ್ದೇಶಕ ಶಶಾಂಕ್ ಹೇಳಿ ಮುಗಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com