ಮಹೇಶ್ ಕುಮಾರ್- ಅಭಿಷೇಕ್ ಅಂಬರೀಷ್ ಜೋಡಿಯ ಸಿನಿಮಾ ಟೈಟಲ್ ಆಗಸ್ಟ್ 27ಕ್ಕೆ ಘೋಷಣೆ!

ಅಭಿಷೇಕ್ ಅಂಬರೀಷ್ ಸದ್ಯ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಕೃಷ್ಣ ನಿರ್ದೇಶನದ ಕಾಳಿ ಸಿನಿಮಾಗೂ ಮುಂದಿನ ತಿಂಗಳು ಸೆಟ್ಟೇರಲಿದೆ, ಇದರ ಜೊತೆಗೆ ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್ ಅವರ ಮುಂದಿನ ಸಿನಿಮಾಗೂ ಸಹಿ ಹಾಕಿದ್ದಾರೆ.
ಅಭಿಷೇಕ್ ಅಂಬರೀಷ್ ಮತ್ತು ಮಹೇಶ್ ಕುಮಾರ್
ಅಭಿಷೇಕ್ ಅಂಬರೀಷ್ ಮತ್ತು ಮಹೇಶ್ ಕುಮಾರ್
Updated on: 

ಅಭಿಷೇಕ್ ಅಂಬರೀಷ್ ಸದ್ಯ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಕೃಷ್ಣ ನಿರ್ದೇಶನದ ಕಾಳಿ ಸಿನಿಮಾಗೂ ಮುಂದಿನ ತಿಂಗಳು ಸೆಟ್ಟೇರಲಿದೆ, ಇದರ ಜೊತೆಗೆ ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್ ಅವರ ಮುಂದಿನ ಸಿನಿಮಾಗೂ ಸಹಿ ಹಾಕಿದ್ದಾರೆ.

ಇದೊಂದು  ಬಿಗ್ ಬಜೆಟ್ ಸಿನಿಮಾವಾಗಿದ್ದು,  ಆಗಸ್ಟ್ 27 ರಂದು ಸುಮಲತಾ ಅಂಬರೀಶ್ ಅವರ ಜನ್ಮದಿನವಿದ್ದು, ಅಂದೇ ಸಿನಿಮಾದ ಪೋಸ್ಟರ್ ಮೂಲಕ ಹೊರಬರುವ ನಿರೀಕ್ಷೆಯಿದೆ. ಸಿನಿಮಾ ಟೈಟಲ್ ಕೂಡ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.

ಪ್ರಾಜೆಕ್ಟ್ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ. ಬಾಲಿವುಡ್ ಮತ್ತು ಇತರ ದಕ್ಷಿಣ ಭಾರತದ ಸಿನಿಮಾಗಳನ್ನು ನಿರ್ಮಿಸಿರುವ ಪ್ರಸಿದ್ದ ಸಂಸ್ಥೆಯೊಂದು ಅಭಿಷೇಕ್ ಅವರ ಮುಂದಿನ ಸಿನಿಮಾ ಪ್ರೊಡ್ಯೂಸ್ ಮಾಡಲಿದೆ ಎಂದು ತಿಳಿದು ಬಂದಿದೆ.

ಅಭಿಷೇಕ್ ಗೆ ಇದೊಂದು ವಿಶಿಷ್ಟ ಪ್ರಾಜೆಕ್ಟ್ ಆಗಿದೆ, ಇದು ಅಭಿಷೇಕ್ ಗೆ ನಾಲ್ಕನೇ ಸಿನಿಮಾವಾಗಿದ್ದು, ಮಹೇಶ್ ಕುಮಾರ್ ಅವರಿಗೆ ಮೂರನೇ ಚಿತ್ರವಾಗಿದೆ, ಶನಿವಾರ ಬಿಡುಗಡೆಯಾಗುವ ಮೋಷನ್ ಪೋಸ್ಟರ್ ನಲ್ಲಿ ಹೆಚ್ಚಿನ ವಿವರಗಳು ಬಹಿರಂಗವಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com