'ನೋಡುತ್ತಿರಿ, ನಾಳೆ ಖುಷಿಯ ವಿಚಾರವೊಂದನ್ನು ತಿಳಿಸುತ್ತೇನೆ': ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯ ಅಲಿಯಾಸ್ ದಿವ್ಯ ಸ್ಪಂದನ ಚಿತ್ರರಂಗ ತೊರೆದು ಹಲವು ವರ್ಷಗಳೇ ಕಳೆದಿವೆ. ಇನ್ನು ಮಂಡ್ಯ ಸಂಸದೆಯಾಗಿದ್ದ ನಟಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಸಕ್ರಿಯವಾಗಿಲ್ಲ.
ನಟಿ ರಮ್ಯಾ
ನಟಿ ರಮ್ಯಾ
Updated on

ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯ ಅಲಿಯಾಸ್ ದಿವ್ಯ ಸ್ಪಂದನ ಚಿತ್ರರಂಗ ತೊರೆದು ಹಲವು ವರ್ಷಗಳೇ ಕಳೆದಿವೆ. ಇನ್ನು ಮಂಡ್ಯ ಸಂಸದೆಯಾಗಿದ್ದ ನಟಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಸಕ್ರಿಯವಾಗಿಲ್ಲ.

ಕಳೆದ ವರ್ಷ ಪುನೀತ್ ರಾಜ್ ಕುಮಾರ್ ನಿಧನರಾದ ನಂತರ ಬೆಂಗಳೂರಿಗೆ ಆಗಮಿಸಿದ ರಮ್ಯ ನಂತರ ಸ್ಯಾಂಡಲ್ ವುಡ್ ಮಂದಿಯ ಜೊತೆ ಆಪ್ತವಾಗತೊಡಗಿದರು. ಸಿನಿಮಾಗಳ ಪ್ರೀಮಿಯರ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಕೊಂಚ ಆಕ್ಟಿವ್ ಆಗಿದ್ದಾರೆ. ಕನ್ನಡ ಚಿತ್ರದಲ್ಲಿ ಮತ್ತೆ ನಟಿಸುತ್ತಾರೆ, ಬಣ್ಣ ಹಚ್ಚುತ್ತಾರೆ ಎಂಬ ವದಂತಿಗಳು ಕೇಳಿಬಂದವು. ಅದನ್ನು ಸ್ವತಃ ರಮ್ಯ ಅಲ್ಲಗಳೆಯಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ.

ರಮ್ಯ ಮತ್ತೆ ಕನ್ನಡದಲ್ಲಿ ನಟಿಸಬೇಕು ಎಂದು ಅವರ ಅಭಿಮಾನಿಗಳು ಬೇಡಿಕೆಯಿಡುತ್ತಲೇ ಬಂದಿದ್ದಾರೆ. ಇಂತಹದ್ದರ ಮಧ್ಯೆ ಇಂದು ಟ್ವಿಟ್ಟರ್ ನಲ್ಲಿ ಖುಷಿಯ ಸಂಗತಿಯನ್ನು ಹಂಚಿಕೊಂಡು ಅಭಿಮಾನಿಗಳಲ್ಲಿ ಕಾತರತೆ ಮೂಡಿಸಿದ್ದಾರೆ. ನಾಳೆ ಗಣೇಶ ಹಬ್ಬದ ಸುದಿನ ಬೆಳಗ್ಗೆ 11.15ಕ್ಕೆ ನಿಮ್ಮೆಲ್ಲರಿಗೂ ಖುಷಿಯ ವಿಚಾರವೊಂದನ್ನು ತಿಳಿಸುತ್ತೇನೆ, ನೋಡುತ್ತಿರಿ ಎಂದು ಹಂಚಿಕೊಂಡಿದ್ದಾರೆ.

ರಮ್ಯ ಹೀಗೆ ಹೇಳುತ್ತಿದ್ದಂತೆ ಅವರ ಅಭಿಮಾನಿಗಳು ಹೊಸ ಸಿನಿಮಾದಲ್ಲಿ ನಟಿಸುತ್ತಾರೆಯೇ ಅಥವಾ ಮದುವೆಯಾಗುತ್ತಿದ್ದಾರೆಯೇ ಎಂದು ಕಮೆಂಟ್ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com